ಶಾರುಖ್​ ಖಾನ್​ ಮಗ ಆರ್ಯನ್​ಗೆ ನ್ಯಾಯಾಂಗ ಬಂಧನ | Aryan Khan Sent to Judicial Custody for 14 days in connection with drugs case

ಶಾರುಖ್​ ಖಾನ್​ ಮಗ ಆರ್ಯನ್​ಗೆ  ನ್ಯಾಯಾಂಗ ಬಂಧನ

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೋರ್ಟ್​ನಲ್ಲಿ ಅವರು ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಮುಂಬೈ ಕಿಲ್ಲಾ ಕೋರ್ಟ್​ ಹೇಳಿದೆ.

‘ಆರ್ಯನ್ ಖಾನ್ ಹೇಳಿಕೆ ಹಿನ್ನೆಲೆ ಅಚಿತ್ ಬಂಧಿಸಲಾಗಿದೆ. ಆರೋಪಿ ಅಚಿತ್ ಕುಮಾರ್ ಜತೆ ಆರ್ಯನ್​ ಹಾಗೂ ಇತರಿರಿಗೆ ಸಂಬಂಧವಿದೆ. ವಿದೇಶಿ ಪ್ರಜೆಗಳ ಜತೆಯೂ ಕೂಡ ವ್ಯವಹಾರ ಮಾಡಿರುವ ಸುಳಿವು ಸಿಕ್ಕಿದೆ. ಹೀಗಾಗಿ ಅಚಿತ್ ಕುಮಾರ್ ಜತೆ ಮುಖಾಮುಖಿ ವಿಚಾರಣೆ ಅಗತ್ಯವಿದೆ’ ಎಂದು ಎನ್‌ಸಿಬಿ ಪರ ಎಎಸ್‌ಜಿ ಅನಿಲ್‌ಸಿಂಗ್‌ ವಾದ ಮಂಡನೆ ಮಾಡಿದರು

’ಪಾರ್ಟಿ ಆಯೋಜಕರು, ಸಾಗಣೆದಾರರ ವಿಚಾರಣೆ ನಡೆಸಿದ್ದೇವೆ. ಸಂಪೂರ್ಣ ಗ್ಯಾಂಗ್ ಪತ್ತೆ ಹಚ್ಚಲು ಹೆಚ್ಚುವರಿ ಕಸ್ಟಡಿ ಅಗತ್ಯ. ಆರ್ಯನ್ ಖಾನ್ ಹೇಳಿಕೆ ಹಿನ್ನೆಲೆ ಅಚಿತ್ ಬಂಧಿಸಲಾಗಿದೆ. ಅಧಿಕ ಪ್ರಮಾಣದಲ್ಲಿ ಗಾಂಜಾ ವಶಪಡಿಕೊಳ್ಳಲಾಗಿದೆ’ ಎಂದರು ಅನಿಲ್​ ಸಿಂಗ್​. ಈ ವೆಳೆ, ಕೋರ್ಟ್ ಹಾಲ್​ನಲ್ಲಿ ನೋ ನೋ ನೋ ಎನ್ನುವ ಕೂಗು ಆರೋಪಿ ವಕೀಲರಿಂದ ಬಂತು.  ಬಳಿಕ ಎನ್​ಸಿಬಿ ವಕೀಲರು ‘ಸ್ವಲ್ಪ ಪ್ರಮಾಣದಲ್ಲಿ ಜಪ್ತಿ’ ಮಾಡಿದ್ದೇವೆ ಎಂದರು.

ಆದರೆ, ಇದನ್ನು ಆರ್ಯನ್​ ಪರ ವಕೀಲರು ತಳ್ಳಿ ಹಾಕಿದರು. ‘ಈ ಪಾರ್ಟಿಗೆ ಹಾಗೂ ಆರ್ಯನ್​ಗೆ ಯಾವುದೇ ಸಂಬಂಧವಿಲ್ಲ. ಅವರ ಬಳಿ ಯಾವುದೇ ಡ್ರಗ್​ ಸಿಕ್ಕಿಲ್ಲ’ ಎಂದರು.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದಿತ್ತು. ಅಲ್ಲಿಂದ ಅವರನ್ನು ಎನ್​ಸಿಬಿ ಕಚೇರಿಗೆ ಕರೆದುಕೊಂಡು ಬರಲಾಯಿತು. ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ಈಗ ಅವರನ್ನು ಅರೆಸ್ಟ್​ ಮಾಡಲಾಯಿತು.  ಈ ವೇಳೆ ಅವರನ್ನು ಎರಡು ಬಾರಿ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ:  ‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

‘ಮಾಫಿಯಾ ಪಪ್ಪುಗಳು ಆರ್ಯನ್​ ಖಾನ್​ ರಕ್ಷಣೆಗೆ ಬಂದರು’; ಹೃತಿಕ್​ಗೆ ತಿರುಗೇಟು ನೀಡಿದ ಕಂಗನಾ  

 

TV9 Kannada

Leave a comment

Your email address will not be published. Required fields are marked *