ಶಾರುಖ್​ ಮಗನ ಮೇಲೆ ನಡೆದ ದಾಳಿ ಒಂದು ಷಡ್ಯಂತ್ರವೇ? ಎನ್​ಸಿಬಿ ಅಧಿಕಾರಿಗಳ ಮೇಲೆ ಮೂಡಿತು ಶಂಕೆ | Aryan Khan drug case: Nawab Malik express doubt about NCB raid

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಪಾರ್ಟಿ ಮಾಡಿದ ಆರೋಪದ ಮೇಲೆ ಎನ್​ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಬೇಕಾಯಿತು. ಆದರೆ ಈಗ ಆ ದಾಳಿ ಬಗ್ಗೆಯೇ ಕೆಲವರಿಗೆ ಅನುಮಾನ ಮೂಡಿದೆ. ರಾಯಕೀಯ ಪ್ರೇರಿತವಾಗಿ ಶಾರುಖ್​ ಮಗನ ಮೇಲೆ ನಡೆದ ಈ ದಾಳಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ) ಮುಖಂಡ ನವಾಬ್​ ಮಲಿಕ್​ ಈ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಅನುಮಾನ ಮೂಡುವಂತಾಗಿದೆ.

‘ದಾಳಿ ನಡೆದ ದಿನವೇ ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳು ಎನ್​ಸಿಬಿ ಕಚೇರಿಗೆ ಭೇಟಿ ನೀಡಿದ್ದರು. ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಮೀರ್​ ವಾಂಖಡೆ ಅವರು 8ರಿಂದ 10 ಜನರನ್ನು ಅರೆಸ್ಟ್​ ಮಾಡಿದ್ದೇವೆ ಅಂತ ಹೇಳಿದ್ದರು. ಅರೆಸ್ಟ್​ ಮಾಡಿದವರ ಬಗ್ಗೆ ಖಚಿತ ಲೆಕ್ಕ ಅವರಿಗೆ ಯಾಕೆ ಇರಲಿಲ್ಲ. 8 ಜನರನ್ನು ಅರೆಸ್ಟ್​ ಮಾಡಿ, ಮತ್ತೂ ಇಬ್ಬರನ್ನು ಇದರಲ್ಲಿ ಸಿಕ್ಕಿ ಹಾಕಿಸುವುದು ಅವರ ಪ್ಲ್ಯಾನ್​ ಆಗಿತ್ತಾ’ ಎಂದು ಟ್ವೀಟ್​ ಮಾಡುವ ಮೂಲಕ ನವಾಬ್​ ಮಲಿಕ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

ಶಾರುಖ್​ ಪುತ್ರನಿಗೆ ಎನ್​ಸಿಬಿ ಫುಲ್​ ಗ್ರಿಲ್​; ಆರ್ಯನ್​ ಖಾನ್​ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು

TV9 Kannada

Leave a comment

Your email address will not be published. Required fields are marked *