ಶಾರುಖ್​ ಮಗ ಆರ್ಯನ್​ ಖಾನ್​ ಜೈಲಿನಲ್ಲಿ ಈ ನಿಯಮ ಪಾಲಿಸಲೇಬೇಕು | Aryan Khan Not Getting VIP Treatment In Arthur Road Jail

ಶಾರುಖ್​ ಮಗ ಆರ್ಯನ್​ ಖಾನ್​ ಜೈಲಿನಲ್ಲಿ ಈ ನಿಯಮ ಪಾಲಿಸಲೇಬೇಕು

ಆರ್ಯನ್ ಖಾನ್

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ಗೆ ಸಂಕಷ್ಟ ಹೆಚ್ಚುತ್ತಲೇ ಇದೆ. ಮುಂಬೈ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಂದೆಡೆ ಅವರಿಗೆ ಜಾಮೀನು ಸಿಗುತ್ತಿಲ್ಲ. ಈ ಕಾರಣಕ್ಕೆ ಆರ್ಯನ್​ ಖಾನ್​ ಅವರನ್ನು ಆರ್ಥರ್​ ರೋಡ್​ ಜೈಲಿಗೆ ಕಳುಹಿಸಲಾಗಿದೆ. ಅವರು ಸ್ಟಾರ್​ ಕಿಡ್​ ಆಗಿದ್ದರೂ ಜೈಲಿನಲ್ಲಿ ಸಾಮಾನ್ಯರಂತೆ ನೋಡಿಕೊಳ್ಳಲಾಗುತ್ತಿದೆ.

ಆರ್ಯನ್​ ಖಾನ್​ಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲ ಸತೀಶ್​ ಮಾನೇಶಿಂಧೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಇದಕ್ಕೆ ಎನ್​ಸಿಬಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಕೋರ್ಟ್​ ಜಾಮೀನು ಅರ್ಜಿಯನ್ನು ವಜಾ ಮಾಡಿತು. ಈ ಕಾರಣಕ್ಕೆ ಆರ್ಯನ್​ ಅವರು ಜೈಲಿಗೆ ತೆರಳೋದು ಅನಿವಾರ್ಯ ಆಗಿದೆ.

ಆರ್ಯನ್​ ಮತ್ತು ಇತರ ಆರೋಪಿಗಳನ್ನು ಆರ್ಥರ್​ ರೋಡ್​ ಜೈಲಿಗೆ ಕಳುಹಿಸಲಾಗಿದೆ. ಜೈಲಿನ ನಿಯಮದ ಪ್ರಕಾರ 2-5 ದಿನಗಳ ಕಾಲ ಇಲ್ಲಿನ ಸೆಲ್​ನಲ್ಲಿ ಕ್ವಾರಂಟೈನ್​ ಆಗಬೇಕು. ಕೊವಿಡ್​ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿದ್ದರೂ ಕ್ವಾರಂಟೈನ್​ ಆಗುವುದು ಕಡ್ಡಾಯವಾಗಿದೆ. ಜೈಲಿನಲ್ಲಿ ಇವರಿಗೆ ಸಾಮಾನ್ಯ ಅಡುಗೆಯನ್ನೇ ನೀಡಲಾಗುತ್ತದೆ. ಇನ್ನು, ನಿದ್ರಿಸೋಕೆ ಸಾಮಾನ್ಯ ವ್ಯವಸ್ಥೆ ಇರಲಿದೆ.

ಶಾರುಖ್​ ಖಾನ್​ ಹೆಂಡತಿ ಗೌರಿ ಖಾನ್​ಗೆ ಇಂದು (ಅಕ್ಟೋಬರ್ 8) ಜನ್ಮದಿನ. ಆದರೆ, ಅವರಿಗೆ ಈ ವರ್ಷ ಜನ್ಮದಿನ ಆಚರಿಸಿಕೊಳ್ಳಲು ಆಸಕ್ತಿ ಉಳಿದಿಲ್ಲ. ಮಗ ನ್ಯಾಯಾಂಗ ಬಂಧನದಲ್ಲಿರುವುದರಿಂದ ಗೌರಿ ಬರ್ತ್​​ಡೇ ಆಚರಿಸಿಕೊಳ್ಳುತ್ತಿಲ್ಲ. ಅವರು ಈ ಜನ್ಮದಿನವನ್ನು ದುಖಃದಲ್ಲೇ ಕಳೆಯುವಂತಾಗಿದೆ. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದಿತ್ತು. ಈಗ ಆರ್ಯನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: ಗೌರಿ ಖಾನ್​ ಬರ್ತ್​ಡೇ; ಮಗ ಆರ್ಯನ್​ ಇಲ್ಲದೆ ಜನ್ಮದಿನಾಚರಣೆ ಮಾಡಿಕೊಳ್ಳಲ್ಲ ಎಂದ ತಾಯಿ

Aryan Khan: ಆರ್ಯನ್​ ಜಾಮೀನು ಅರ್ಜಿ ವಜಾ ಮಾಡಿದ ಮುಂಬೈ ಕೋರ್ಟ್​

TV9 Kannada

Leave a comment

Your email address will not be published. Required fields are marked *