ಶಾರುಖ್ ತಂಡಕ್ಕೆ ಮಾಜಿ ಸಿಎಸ್​ಕೆ ಆಟಗಾರ; ಡೆಲ್ಲಿಯಿಂದ ಕೋಲ್ಕತ್ತಾ ಸೇರಿದ ಶಾರ್ದೂಲ್ ಠಾಕೂರ್..! – ipl 2023 Shardul Thakur traded from Delhi Capitals to Kolkata Knight Riders

IPL 2023: ಶಾರ್ದೂಲ್ ಖರೀದಿಗೆ ಕೋಲ್ಕತ್ತಾ ಜೊತೆ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ರಯತ್ನಿಸಿದವು, ಆದರೆ ಅಂತಿಮವಾಗಿ ಶಾರ್ದೂಲ್ ಕೆಕೆಆರ್ ತಂಡ ಸೇರಿದ್ದಾರೆ.

Nov 14, 2022 | 3:54 PM

TV9kannada Web Team

| Edited By: pruthvi Shankar

Nov 14, 2022 | 3:54 PM

ಕೋಲ್ಕತ್ತಾ ನೈಟ್ ರೈಡರ್ಸ್ ಶಾರ್ದೂಲ್ ಠಾಕೂರ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾಗಿದ್ದ ಶಾರ್ದೂಲ್ ಆ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಶಾರ್ದೂಲ್ ಖರೀದಿಗೆ ಕೋಲ್ಕತ್ತಾ ಜೊತೆ, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ರಯತ್ನಿಸಿದವು, ಆದರೆ ಅಂತಿಮವಾಗಿ ಶಾರ್ದೂಲ್ ಕೆಕೆಆರ್ ತಂಡ ಸೇರಿದ್ದಾರೆ.

ಶಾರ್ದೂಲ್ ಸದ್ಯ ಟೀಂ ಇಂಡಿಯಾ ಜೊತೆ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಐಪಿಎಲ್ 2022 ರಲ್ಲಿ ದೆಹಲಿ ಶಾರ್ದೂಲ್ ಅವರನ್ನು 10.75 ಕೋಟಿ ರೂಪಾಯಿಗೆ ಖರೀದಿಸಿತು. ಆದರೆ ಈ ಬಾರಿ ಅವರು ಕೆಕೆಆರ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ 2022ರಲ್ಲಿ ಶಾರ್ದೂಲ್ 14 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಕಬಳಿಸಿದ್ದರು. ಈ ಸಮಯದಲ್ಲಿ ಅವರ ಎಕಾನಮಿ 9.79 ಆಗಿತ್ತು. ಅದೇ ಸಮಯದಲ್ಲಿ, ಅವರು ಬ್ಯಾಟಿಂಗ್​ನಲ್ಲಿ 138 ಸ್ಟ್ರೈಕ್ ರೇಟ್​ನಲ್ಲಿ 120 ರನ್ ಕಲೆಹಾಕಿದ್ದರು.

ಐಪಿಎಲ್ 2023 ರ ಟ್ರೇಡಿಂಗ್ ವಿಂಡೋ ಮಂಗಳವಾರ ಮುಚ್ಚಲಿದೆ. ಹೀಗಾಗಿ ಎಲ್ಲಾ ತಂಡಗಳು ತಮಗೆ ಬೇಕಾದ ಹಾಗೂ ಬೇಡದ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುತ್ತಿವೆ.

ಟ್ರೇಡ್ ಮೂಲಕ ಕೆಕೆಆರ್ ಸೇರಿದ ಮೂರನೇ ಆಟಗಾರ ಶಾರ್ದೂಲ್. ಅವರಿಗಿಂತ ಮೊದಲು, ಲಾಕಿ ಫರ್ಗುಸನ್ ಮತ್ತು ರಹಮತುಲ್ಲಾ ಗುರ್ಬಾಜ್ ಅವರನ್ನು ಕೆಕೆಆರ್ ಗುಜರಾತ್ ಟೈಟಾನ್ಸ್‌ ತಂಡದಿಂದ ವ್ಯಾಪಾರ ಮಾಡಿತ್ತು.

Most Read Stories

TV9 Kannada

Leave a Reply

Your email address will not be published. Required fields are marked *