ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್​ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ | Shah rukh khan Wife Gauri Khan Talks about how difficult as Shah rukh Wife


‘ಶಾರುಖ್ ಖಾನ್ ಪತ್ನಿ ಆಗಿರುವುದು ಎಷ್ಟು ಕಷ್ಟ’ ಎಂಬ ಪ್ರಶ್ನೆಯನ್ನು ಕರಣ್​ ಕೇಳಿದರು. ಇದಕ್ಕೆ ಗೌರಿ ಖಾನ್ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ. ‘

ಶಾರುಖ್ ಪತ್ನಿ ಎಂಬ ಕಾರಣಕ್ಕೆ ಗೌರಿ ಖಾನ್​ಗೆ ಆದ ನಷ್ಟಗಳೇನು? ಎಲ್ಲವನ್ನೂ ವಿವರಿಸಿದ ಸ್ಟಾರ್ ಹೀರೋ ಪತ್ನಿ

ಶಾರುಖ್ ಖಾನ್​-ಗೌರಿ

ಸ್ಟಾರ್ ನಟನ ಪತ್ನಿ ಆದಮೇಲೆ ಅದರ ಜತೆ ಒಂದಷ್ಟು ಜವಾಬ್ದಾರಿ ಹಾಗೂ ಸ್ಟಾರ್​ಡಂ ಕೂಡ ಸೇರ್ಪಡೆ ಆಗುತ್ತದೆ. ಹೀರೋನ ಮದುವೆ ಆದವರು ಕೂಡ ಚಿತ್ರರಂಗದವರೇ ಎಂದಾಗ ಈ ದಂಪತಿಗೆ ಸಮಾಜದಲ್ಲಿ ಬೇರೆಯದೇ ಗೌರವ ಸಿಗುತ್ತದೆ. ಕೆಲವೊಮ್ಮೆ ಸಾಕಷ್ಟು ಟೀಕೆ ಕೂಡ ಎದುರಿಸಬೇಕು. ಶಾರುಖ್ ಖಾನ್ (Shah Rukh Khan) ಮದುವೆ ಆದಾಗ ಗೌರಿ ಖಾನ್​ಗೂ ಹೀಗೆಯೇ ಆಗಿತ್ತಂತೆ. ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಶಾರುಖ್ ಪತ್ನಿ ಗೌರಿ (Gauri Khan) ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಅನೇಕ ಆಫರ್​ಗಳು ತಪ್ಪಿ ಹೋಗಿರುವುದಕ್ಕೆ ಶಾರುಖ್ ಖಾನ್ ಪತ್ನಿ ಎಂಬ ಪಟ್ಟವೇ ಕಾರಣ ಎಂಬ ಮಾಹಿತಿ ರಿವೀಲ್ ಮಾಡಿದ್ದಾರೆ.

ಗೌರಿ ಖಾನ್ ಅವರು ಹಲವು ಸಿನಿಮಾಗಳಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ‘ಚೆನ್ನೈ ಎಕ್ಸ್​ಪ್ರೆಸ್​’ ಸೇರಿ ಅನೇಕ ಚಿತ್ರಗಳಿಗೆ ಅವರು ಡಿಸೈನರ್ ಆಗಿದ್ದರು. ಇನ್ನು ಅವರು ಇಂಟೀರಿಯರ್ ಡಿಸೈನರ್ ಕೂಡ ಹೌದು. ಮುಕೇಶ್ ಅಂಬಾನಿ ಸೇರಿ ಅನೇಕ ಉದ್ಯಮಿ ಹಾಗೂ ಸೆಲೆಬ್ರಿಟಿಗಳ ಮನೆಯ ಒಳ ಭಾಗವನ್ನು ಡಿಸೈನ್ ಮಾಡಿದ ಖ್ಯಾತಿ ಗೌರಿಗೆ ಸಿಗುತ್ತದೆ. ಅವರು ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್​’ ಶೋಗೆ ಈ ಬಾರಿ ಗೌರಿ ಖಾನ್ ಆಗಮಿಸಿದ್ದರು. ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ಶಾರುಖ್ ಖಾನ್ ಪತ್ನಿ ಆಗಿರುವುದು ಎಷ್ಟು ಕಷ್ಟ’ ಎಂಬ ಪ್ರಶ್ನೆಯನ್ನು ಕರಣ್​ ಕೇಳಿದರು. ಇದಕ್ಕೆ ಗೌರಿ ಖಾನ್ ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ. ‘ನಾನು ಗೌರಿ ಖಾನ್ ಆಗಿ ಕೆಲಸ ಮಾಡಲು ಇಷ್ಟಪಡುತ್ತೇನೆ. ಕೆಲವೊಮ್ಮೆ ಶಾರುಖ್ ಖಾನ್ ಪತ್ನಿ ಎಂಬ ಕಾರಣಕ್ಕೇ ಕೆಲವರು ಆಫರ್ ನೀಡಿದ್ದು ಇದೆ. ಆದರೆ, ಎಲ್ಲ ಬಾರಿಯೂ ಈ ರೀತಿ ಇರಲಿಲ್ಲ. ಕೆಲವರು ಶಾರುಖ್ ಖಾನ್ ಹೆಂಡತಿ ಜತೆ ಕೆಲಸ ಮಾಡೋದೆ ಬೇಡ ಎಂದು ಆಫರ್​ ನೀಡದೇ ಇದ್ದ ಉದಾಹರಣೆಯೂ ಇದೆ. ಅರ್ಧದಷ್ಟು ಆಫರ್ ಕಳೆದುಕೊಂಡಿದ್ದೇನೆ. ನಾನು ಅವರ ಜಾಗದಲ್ಲಿ ಇದ್ದಿದ್ದರೆ ಬಹುಶಃ ಹಾಗೆಯೇ ಆಲೋಚಿಸುತ್ತಿದ್ದೆ’ ಎಂದಿದ್ದಾರೆ ಗೌರಿ.

TV9 Kannada


Leave a Reply

Your email address will not be published.