ಶಾರುಖ್ ಪುತ್ರನಿಗೆ ಜಾಮೀನಿಲ್ಲ; ಆರ್ಯನ್​ ವಾಟ್ಸಾಪ್​​ ಚಾಟ್​​ ಬಗ್ಗೆ NCB ವಕೀಲರ ಸ್ಫೋಟಕ ಹೇಳಿಕೆ

ಮುಂಬೈ: ಡ್ರಗ್ಸ್​​ ಕೇಸ್​​​ನಲ್ಲಿ ಎನ್​​ಸಿಬಿಯಿಂದ ಬಂಧನವಾಗಿರು ನಟ ಶಾರುಖ್​ ಖಾನ್​ ಪುತ್ರ ಆರ್ಯನ್​​ ಖಾನ್​ ಜಾಮೀನು ಅರ್ಜಿಯನ್ನ ಕೋರ್ಟ್​ ರದ್ದು ಮಾಡಿದೆ. ನಿನ್ನೆ ತಾನೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಕೋರ್ಟ್​, ಇಂದು ಜಾಮೀನು ನಿರಾಕರಿಸಿದೆ.

ಇಂದು ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದ್ದು, ಬಳಿಕ ಮುಂಬೈನ ಅರ್ಥರ್​ ಜೈಲಿಗೆ ಕಳುಹಿಸಲಾಗಿದೆ. ಈ ನಡುವೆ ಇಂದು ಕೋರ್ಟ್​​ನಲ್ಲಿ ಅರ್ಯನ್​ ಖಾನ್​ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದು, ನ್ಯಾಯಾಲಯದಲ್ಲಿ ಎನ್​​ಸಿಬಿ ಪರ ವಕೀಲರು ಅರ್ಯನ್​ ಖಾನ್​ ವಾಟ್ಸಾಪ್​ ಚಾಟ್​ಗಳ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಕೋರ್ಟ್​​ನಲ್ಲಿ ಸರ್ಕಾರದ ಪರ ವಕೀಲರು ವಾದ ಹೇಗಿತ್ತು?
ಎಲ್ಲರಿಗೂ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ಹಕ್ಕು ಇದೆ. ಆದರೆ ಪ್ರಕರಣದಲ್ಲಿ ಆರೋಪಿಯ ಜಾಮೀನು ಪಡೆಯುವುದನ್ನು ವಿರೋಧ ಮಾಡುತ್ತೇವೆ ಎಂದು ತಮ್ಮ ವಾದದ ವೇಳೆ ಸಂಜಯ್​​ ನಹರ್​​ ಮಾಲ್ಶೆ ಪ್ರಕರಣದಲ್ಲಿ ಬಾಂಬೆ ಕೋರ್ಟ್​​ ತೀರ್ಪನ್ನು ಉಲ್ಲೇಖಿಸಿದರು. ಇದೇ ವೇಳೆ ವಾಟ್ಸಾಪ್​ ಚಾಟ್​ ಫುಟ್​​ಬಾಲ್​​​ ಕುರಿತವಾಗಿದೆ ಎಂಬ ಆರೋಪಿಗಳ ಪರ ವಕೀಲರ ಹೇಳಿಕೆಯನ್ನು ತಿರಸ್ಕರಿಸಿದ ಎಎಸ್​​​ಜಿ, ವಾಟ್ಸಾಪ್​ ಚಾಟ್​​ನಲ್ಲಿ ಆಚಿತ್​​ ಹಾಗೂ ಎ1 (ಆರ್ಯನ್​ ಖಾನ್​) ನಡುವೆ ಡ್ರಗ್ಸ್​ ಪ್ರಮಾಣ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ ಇದನ್ನು ನಾನು ಕೋರ್ಟ್​​ನಲ್ಲಿ ಹೇಳಲು ಇಷ್ಟವಿರಲಿಲ್ಲ ಆದರೂ ಹೇಳಬೇಕಾಯ್ತು ಎಂದು ತಿಳಿಸಿದ್ದಾರೆ.

ನಿನ್ನೆ ಆರ್ಯನ್​ ಖಾನ್​​ನನ್ನು ಕೋರ್ಟ್​​ಗೆ ಹಾಜರು ಪಡಿಸಿದ ವೇಳೆ, ಎನ್​​ಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಅವರ​ ಬಳಿ ಯಾವುದೇ ಡ್ರಗ್ಸ್​ ಲಭ್ಯವಾಗಲಿಲ್ಲ. ಆದರೆ ಆತ ಅಚಿತ್​ ಕುಮಾರ್​​ ನೊಂದಿಗೆ ನಡೆಸಿದ ಚಾಟ್​​​ ಲಭ್ಯವಾಗಿದ್ದು, ಅಚಿತ್​​ನಿಂದ ಡ್ರಗ್​ ತರಿಸಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದರು. ಆದರೆ ಈ ಆರೋಪವನ್ನು ತಿರಸ್ಕರಿಸಿದ ಆರ್ಯನ್​ ಖಾನ್​ ಪರ ವಕೀಲರು, ವಾಟ್ಸಾಪ್​​ ಚಾಟ್​ನಲ್ಲಿ ಪುಟ್ಬಾಲ್​​ ಚಾಟ್​ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ ಅಷ್ಟೇ ಎಂದು ಹೇಳಿದ್ರು.  ಹೀಗಾಗಿ ಇಂದು ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ನಿರಾಕರಿಸಿ ಕೋರ್ಟ್ ಆದೇಶ ನೀಡಿದೆ.

News First Live Kannada

Leave a comment

Your email address will not be published. Required fields are marked *