ಶಾರುಖ್ ಮಗನನ್ನ ಮುಟ್ಟಿದ್ದೇ ತಪ್ಪಾಯ್ತಾ; ತನಿಖೆಯಿಂದ ನಿಷ್ಠಾವಂತ ವಾಂಖೆಡೆಗೆ ಗೇಟ್​​ಪಾಸ್​​


ಬಾಲಿವುಡ್​​​ ಬಾದ್​ಷಾ ಶಾರುಖ್​​ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಎನ್​​ಸಿಬಿ ನಿರ್ದೇಶಕ ಸಮೀರ್ ವಾಂಖೆಡೆಗೆ ಕೋಕ್​​ ನೀಡಲಾಗಿದೆ. ಡ್ರಗ್ಸ್​ ಕೇಸಲ್ಲಿ 25 ಕೋಟಿ ರೂಪಾಯಿ ಸುಲಿಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಮೀರ್​​ಗೆ ಕೋಕ್​​ ನೀಡಿ ಆದೇಶಿಸಲಾಗಿದೆ. ಈ ಕೇಸ್​​ ವರ್ಗಾಯಿಸಿ ತನಿಖೆ ನಡೆಸುವಂತೆ ಎನ್​​ಸಿಬಿ ಅಧಿಕಾರಿ ಸಂಜಯ್ ಸಿಂಗ್‌ ಎಂಬುವರಿಗೆ ಸೂಚನೆ ನೀಡಲಾಗಿದೆ.

ಸಮೀರ್​​​ ವಾಂಖೆಡೆಗೆ ವಿರುದ್ಧ ಮುಂಬೈನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಿಟ್ಟುಕಳಿಸುವುದಕ್ಕೆ 25 ಕೋಟಿ ರೂಪಾಯಿ ಸುಲಿಗೆ ಆರೋಪ ಕೇಳಿ ಬಂದಿತ್ತು. ಇದರ ಕುರಿತು ಎನ್​​ಸಿಬಿ ಪ್ರಧಾನ ಉಪ ನಿರ್ದೇಶಕ, ಮುಖ್ಯ ವಿಜಿಲೆನ್ಸ್ ಅಧಿಕಾರಿ ಗ್ಯಾನೇಶ್ವರ್ ಸಿಂಗ್ ತನಿಖೆ ನಡೆಸಿದ್ದರು.

ಆರ್ಯನ್ ಖಾನ್​​ ಅನ್ನು ಈ ಪ್ರಕರಣದಿಂದ ಕೈಬಿಡಲು 25 ಕೋಟಿ ರೂಪಾಯಿ ಕೇಳಿದ್ದರು ಎಂಬ ಗಂಭೀರ ಆರೋಪವನ್ನು ಪ್ರಭಾಕರ್ ಸೈಲ್ ಎಂಬಾತ ಮಾಡಿದ್ದರು. ಸೈಲ್ ತಾನು ಈ ಪ್ರಕರಣದ ಮತ್ತೋರ್ವ ಸಾಕ್ಷಿದಾರ ಹಾಗೂ ಎನ್​​ಸಿಬಿ ರೈಡ್ ನಂತರ ಕಣ್ಮರೆಯಾಗಿರುವ ಕೆಪಿ ಗೋಸಾವಿಗೆ ಬಾಡಿ ಗಾರ್ಡ್ ಎಂದು ಹೇಳಿಕೊಂಡಿದ್ದ.

ಇದನ್ನೂ ಓದಿ: ‘ಹೀಗೆ ಮಾಡಿದ್ರೆ ಮಾತ್ರ ಟೀಂ ಇಂಡಿಯಾ ಗೆಲ್ಲಲು ಸಾಧ್ಯ’- ಸೆಹ್ವಾಗ್​​ ಕೊಟ್ಟ ಸಲಹೆಯೇನು?

The post ಶಾರುಖ್ ಮಗನನ್ನ ಮುಟ್ಟಿದ್ದೇ ತಪ್ಪಾಯ್ತಾ; ತನಿಖೆಯಿಂದ ನಿಷ್ಠಾವಂತ ವಾಂಖೆಡೆಗೆ ಗೇಟ್​​ಪಾಸ್​​ appeared first on News First Kannada.

News First Live Kannada


Leave a Reply

Your email address will not be published. Required fields are marked *