ನವದೆಹಲಿ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣ ಮತ್ತು ಇತರ ಐದು ಪ್ರಕರಣಗಳನ್ನು ಮಾದಕ ದ್ರವ್ಯ ನಿಯಂತ್ರಣ ಮಂಡಳಿಯು ದೆಹಲಿ NCB ತಂಡಕ್ಕೆ ವರ್ಗಾಯಿಸಿದೆ.
ಇಂದು ಮುಂಬೈಗೆ ದೆಹಲಿ NCB ತಂಡ ಆಗಮಿಸುತ್ತಿದ್ದು, ತನಿಖೆ ಆರಂಭಿಸಲಿದೆ. ಪ್ರಕರಣ ವರ್ಗಾವಣೆ ಬಗ್ಗೆ NCB ಘೋಷಣೆ ಮಾಡಿದ ಬಳಿಕ, NCB ವಲಯ ನಿರ್ದೇಶಕ ಸಮೀರ್ ವಾಂಖೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರ್ಯನ್ ಮತ್ತು ಸಮೀರ್ ಖಾನ್ ಪ್ರಕರಣವನ್ನು ದೆಹಲಿ NCBಯ SIT ತಂಡ ತನಿಖೆ ನಡೆಸಲಿದೆ. ದೆಹಲಿ ಮತ್ತು ಮುಂಬೈ NCB ತಂಡಗಳ ಪರಸ್ಪರ ಹೊಂದಾಣಿಕೆ ಇದು ಅಂತ ವಾಂಖೆಡೆ ಹೇಳಿದ್ದಾರೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಪುತ್ರ ಆರ್ಯನ್ ಖಾನ್ರನ್ನ ಎನ್ಸಿಬಿ ಅಧಿಕಾರಿಗಳು ಅಕ್ಟೋಬರ್ 3 ರಂದು ಬಂಧಿಸಿದ್ದರು. ನಂತರ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಅಕ್ಟೋಬರ್ 30 ರಂದು ಆರ್ಯನ್ ಖಾನ್ ಜೈಲಿನಿಂದ ಹೊರ ಬಂದಿದ್ದಾರೆ.
The post ಶಾರೂಖ್ ಪುತ್ರನ ಪ್ರಕರಣದ ತನಿಖೆ ದೆಹಲಿ NCB ಹೆಗಲಿಗೆ -ಇದಕ್ಕೆ ಏನಂದ್ರು ವಾಂಖೆಡೆ..? appeared first on News First Kannada.