ಆತ ಟೀಮ್ ಇಂಡಿಯಾದ ಒನ್​ಆಫ್​ ದ ಫೈನೆಸ್ಟ್​ ಆಲ್​ರೌಂಡರ್.! ಹಾಗೇ ವೈಟ್ ಬಾಲ್​ ಫಾರ್ಮೆಟ್​ನ​​ ಮ್ಯಾಚ್​ ವಿನ್ನರ್. ಟೆಸ್ಟ್​ ಫಾರ್ಮೆಟ್​ನಲ್ಲೂ ತನ್ನದೇ ಆದ ಛಾಪೂ ಮೂಡಿಸಿದ್ದ. ಆದರೀಗ ಆ ಸ್ಟಾರ್​ ಆಟಗಾರನ ಟೆಸ್ಟ್​ ಕರಿಯರ್​ಗೆ ಫುಲ್​​ಸ್ಟಾಪ್​​ ಬಿದ್ದಿದೆ. ಅದ್ಯಾಕೆ ಅಂತಿರಾ? ಬನ್ನಿ ನೋಡೋಣ.

ಕಪಿಲ್​​ದೇವ್​ ಟೀಮ್​ ಇಂಡಿಯಾದಲ್ಲಿ ಮಿಂಚಿದ ಬೆಸ್ಟ್​ ಆಲ್​​ರೌಂಡರ್​. ಬ್ಯಾಟಿಂಗ್​-ಬೌಲಿಂಗ್​​ನಲ್ಲಿ ಅಬ್ಬರಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡ್ತಿದ್ದ ಸಮರ್ಥ ಆಟಗಾರ. ಆದರೆ ಪ್ರಸ್ತುತ ಟೀಮ್​ ಇಂಡಿಯಾಕ್ಕೆ ಕಪಿಲ್​​ರಂತಹ ಸಮರ್ಥ ಆಲ್​​ರೌಂಡರ್,​​ ಕೊರತೆ ಎದುರಾಗಿದೆ. ಇಂಥದೊಂದು ಚರ್ಚೆ ಮುನ್ನಲೆಗೆ ಬಂದಿರೋದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​ ನಂತರ.

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ನಲ್ಲಿ ಬೌಲಿಂಗ್​​ ಆಲ್​​ರೌಂಡರ್ ಕೊರತೆಯಿಂದಾಗಿ, ಪಂದ್ಯವನ್ನ ಕೈ ಚೆಲ್ಲುವಂತೆ ಮಾಡ್ತು. ಪಿಚ್​ ಮತ್ತು ಕಂಡಿಷನ್ಸ್​​​ಗೆ ಅನುಗುಣವಾಗಿ ಒಬ್ಬ ಫಾಸ್ಟ್​ ಬೌಲಿಂಗ್​ ಆಲ್​​ರೌಂಡರ್​ನನ್ನ ಆಡಿಸಬೇಕಿತ್ತು. ಆದರೆ ಸ್ಪಿನ್​ ಆಲ್​​ರೌಂಡರ್​​ಗಳನ್ನ ಆಡಿಸಿದ್ದೇ, ನಮಗೆ ಮುಳುವಾಗಿದೆ. ಅದರಲ್ಲೂ ಹಾರ್ದಿಕ್​ ಪಾಂಡ್ಯ ಮತ್ತು ಶಾರ್ದೂಲ್​ ಠಾಕೂರ್​​​​ರನ್ನ ಏಕೆ ಕಣಕ್ಕಿಳಿಸಲಿಲ್ಲ ಎಂಬ ಪ್ರಶ್ನೆ ತೂರಿ ಬಂದಿದೆ.

ಹಾರ್ದಿಕ್​ ಪಾಂಡ್ಯ ಎಲ್ಲಾ​ ಫಾರ್ಮೆಟ್​ಗಳಲ್ಲೂ ಮಿಂಚಿದ ಸ್ಟಾರ್ ಆಲ್​ರೌಂಡರ್​. ಈಗಾಗಲೇ ಹಾರ್ದಿಕ್​ ಸಾಮರ್ಥ್ಯ ಎಂತದ್ದು ಅನ್ನೋದು, ಪ್ರೂವ್​ ಆಗಿದೆ. ಇನ್ನು ಬೌಲಿಂಗ್​ ಆಲ್​​ರೌಂಡರ್​​​​ ವಿಭಾಗದಲ್ಲಿ ಅಬ್ಬರಿಸಿದ ಮತ್ತೊಬ್ಬ ಆಟಗಾರ ಅಂದರೆ, ಶಾರ್ದೂಲ್​ ಠಾಕೂರ್. ಠಾಕೂರ್​​ ಕೆಪಾಸಿಟಿ ಏನು ಅನ್ನೋದು ಕೂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗೊತ್ತಾಗಿದೆ. ಆದರೆ ಈ ಇಬ್ಬರ ಪೈಪೋಟಿಯಲ್ಲಿ, ಠಾಕೂರ್​ಗೇ ಹೆಚ್ಚು ಒಲವು ವ್ಯಕ್ತವಾಗ್ತಿದೆ.

ಹಾರ್ದಿಕ್ ಟೆಸ್ಟ್​​​ ಕರಿಯರ್​ಗೆ ಬಿತ್ತಾ ಫುಲ್​​ಸ್ಟಾಪ್​​..?
ಸೀಮಿತ ಓವರ್​​ಗಳ ಪಂದ್ಯಗಳಿಗೆ ಹಾರ್ದಿಕ್​​-ಠಾಕೂರ್​​ ಮಧ್ಯೆ ಪೈಪೋಟಿ ಇಲ್ಲ. ಆದರೆ ಟೆಸ್ಟ್​ ಕ್ರಿಕೆಟ್​​​ನಲ್ಲಿ ಬಿಗ್​ ಕಾಂಪಿಟೇಷನ್​​ ಉಂಟಾಗಿದೆ. ಟೆಸ್ಟ್​ ಫಾರ್ಮೆಟ್​​ನಲ್ಲಿ ​ಶಾರ್ದೂಲ್​ ಕಡೆಯೇ ಮ್ಯಾನೇಜ್​​ಮೆಂಟ್​ಗೆ ಒಲವಿದೆ. ಆ ಮೂಲಕ ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಹಾರ್ದಿಕ್​ ಆಡೋದೇ ಕಷ್ಟ ಅನ್ನೋ ಚರ್ಚೆ ಆರಂಭವಾಗಿದೆ. ಬ್ಯಾಟಿಂಗ್​-ಬೌಲಿಂಗ್​​ನೊಂದಿಗೆ ತಂಡಕ್ಕೆ ಸಮತೋಲನ ಪ್ರದರ್ಶನ ನೀಡ್ತಿದ್ದ ಹಾರ್ದಿಕ್​, ಇದೀಗ ಬೇಡವಾದನಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಇಂಜುರಿಯೇ ಹಾರ್ದಿಕ್​ರನ್ನ ಹೊರಗಿಡಲು ಕಾರಣ..!
ಸದ್ಯ ಬೆನ್ನು ನೋವಿನಿಂದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಬೌಲಿಂಗ್ ಮಾಡುವ ಸ್ಥಿತಿಯಲ್ಲಿ ಇಲ್ಲ. ಅದರಲ್ಲೂ ಬ್ಯಾಕ್ ಸರ್ಜರಿ ಬಳಿಕ ಬೌಲಿಂಗ್​​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಸರ್ಜರಿ ಬಳಿಕ ಗುಣಮುಖರಾದ್ರೂ, ಭುಜದ ನೋವು ಪಾಂಡ್ಯಗೆ ಇನ್ನಿಲ್ಲದೇ ಕಾಡುತ್ತಿದೆ. ಶಸ್ತ್ರಚಿಕಿತ್ಸೆ ಬಳಿಕ ತಂಡಕ್ಕೆ ಹಾರ್ದಿಕ್​ ಕಮ್​​ಬ್ಯಾಕ್ ಮಾಡಿದ್ರೂ, ಕೇವಲ ಬ್ಯಾಟ್ಸ್​ಮನ್​ ಆಗಿ ಮಾತ್ರ ಆಡಿದ್ರು. ಹಾಗಾಗಿ ಹಾರ್ದಿಕ್​ ಟೆಸ್ಟ್​ ಕರಿಯರ್, ಡೇಂಜರ್​ ಜೋನ್​​​ನಲ್ಲಿ ಇರೋದು ನೂರರಷ್ಟು ಸತ್ಯ. ಇದಕ್ಕಾಗಿಯೇ ಟೆಸ್ಟ್​ ತಂಡದಲ್ಲಿ ಸೈಡ್​ಲೈನ್​ ಮಾಡಲಾಗ್ತಿದೆ.

ಆಸಿಸ್​​-ಇಂಗ್ಲೆಂಡ್​ ಸರಣಿಗಳಲ್ಲಿ ಮಾತ್ರವಲ್ಲ, ರದ್ದಾದ ಐಪಿಎಲ್​​ನಲ್ಲೂ ಪಾಂಡ್ಯ, ಭುಜದ ನೋವಿನ ಅಪಾಯದ ಕಾರಣ, ಬೌಲಿಂಗ್ ಮಾಡಲೇ ಇಲ್ಲ. ಹಾಗಾಗಿ ಇದೆಲ್ಲಾವನ್ನೂ ಪರಿಗಣಿಸಿಯೇ ಹಾರ್ದಿಕ್​​ ಕೋಕ್​ ನೀಡಲಾಗ್ತಿದೆ. ಇನ್ನು ಈ ಬಗ್ಗೆ ಮಾಜಿ ಆಯ್ಕೆದಾರ ಸರಣ್​ದೀಪ್​ ಸಿಂಗ್​ ಕೂಡ ಇದೇ ಮಾತನ್ನೇ ಉಲ್ಲೇಖಿಸಿದ್ದಾರೆ. ಇನ್ನು ಮುಂದೆ ಬೌಲಿಂಗ್​ ಆಲ್​​ರೌಂಡರ್​ ವಿಭಾಗಕ್ಕೆ ಹಾರ್ದಿಕ್​ರನ್ನೇ ಅವಂಲಬಿಸಬೇಡಿ ಎಂದು ಸಲಹೆ ನೀಡಿದ್ದಾರೆ.

‘ಶಾರ್ದೂಲ್​ರನ್ನ ಪರಿಗಣಿಸಿ’
‘ಪಾಂಡ್ಯ ಬೆನ್ನು ನೋವಿನಿಂದಾಗಿ ಬೌಲಿಂಗ್​ ಮಾಡೋದು ಕಷ್ಟ. ಸಿಮೀತ ಓವರ್​​ಗಳ ಪಂದ್ಯಗಳಲ್ಲೂ ಬೌಲಿಂಗ್​ ಮಾಡಲಾಗ್ತಿಲ್ಲ. ಇನ್ನು ಟೆಸ್ಟ್​ನಲ್ಲಿ ಬೌಲಿಂಗ್​ ಮಾಡೋದು ಹೇಗೆ ಸಾಧ್ಯ..? ಟೆಸ್ಟ್​​ಗೆ ಬೌಲಿಂಗ್​ ಆಲ್​ರೌಂಡರ್​ಗೆ ಹಾರ್ದಿಕ್​ರನ್ನೇ ಅವಲಂಬಿಸಬೇಡಿ. ಬ್ಯಾಟಿಂಗ್​​-ಬೌಲಿಂಗ್​ ಸಮರ್ಥ ಉತ್ತರ ಕೊಡುವ ಠಾಕೂರ್​​ರಂಥ ಆಟಗಾರರಿಗೆ ಅವಕಾಶ ನೀಡಿ. ಹಾಗೆಯೇ ಇದರ ಸಾಲಿನಲ್ಲಿ ಶಿವಮ್​ ದುಬೆ, ವಿಜಯ್​ ಶಂಕರ್ ಕೂಡ ಇದ್ದಾರೆ. ಇಬ್ಬರು ಸ್ಪಿನ್ನರ್​ ಬದಲಿಗೆ ಪ್ಲೆಕ್ಸಿಬಿಲಿಟಿ ಹೆಚ್ಚುವರಿ ಬೌಲಿಂಗ್ ಆಲ್​​ರೌಂಡರ್​ ಬೇಕಾಗಿದೆ’
ಸರಣ್​ದೀಪ್​ ಸಿಂಗ್​, ಮಾಜಿ ಆಯ್ಕೆ ಸಮಿತಿ ಸದಸ್ಯ

ಶಾರ್ದೂಲ್​ ಮೇಲೆ ಒಲವು ಹೆಚ್ಚಾಗೋಕೆ ಕಾರಣವೇನು..!
ಆಲ್​​ರೌಂಡರ್ ವಿಭಾಗದಲ್ಲಿ ಫಸ್ಟ್ ಚಾಯ್ಸ್​ ಆಗಿದ್ದ ಹಾರ್ದಿಕ್​ಗೆ, ಟೆಸ್ಟ್​ ತಂಡದಲ್ಲಿ ಕುತ್ತು ಬಂದಿರೋದು ಕನ್ಫರ್ಮ್​. ಆದರೆ ಹಾರ್ದಿಕ್​ ಬದಲಿಗೆ ಶಾರ್ದೂಲ್​ ಠಾಕೂರ್​ ಮೇಲೆ ಇಂಟ್ರೆಸ್ಟ್​ ಹೆಚ್ಚಾಗಿದೆ. ಏಕೆಂದರೆ ಆಸಿಸ್​ ಪ್ರವಾಸದಲ್ಲಿ ಠಾಕೂರ್​ ನೀಡಿದ್ದ ಪ್ರದರ್ಶನ ಹಾಗಿತ್ತು. ಬ್ಯಾಟಿಂಗ್​-ಬೌಲಿಂಗ್​ನಲ್ಲಿ, ಸೂಪರ್​ ಆಲ್​​ರೌಂಡ್​ ಆಟವಾಟವಾಡಿದ್ರು. ಹಾಗಾಗಿಯೇ ಠಾಕೂರ್​ಗೆ ಮುಂದಿನ ಟೆಸ್ಟ್​​ ಸರಣಿಗಳಿಗೂ ಮಣೆ ಹಾಕಿರೋದು.

ಆಸಿಸ್​ ಪ್ರವಾಸದಲ್ಲಿ ಶಾರ್ದೂಲ್​ ಪ್ರದರ್ಶನ
ಆಸಿಸ್ ಪ್ರವಾಸದಲ್ಲಿ ಶಾರ್ದೂಲ್​ ಆಡಿದ್ದು ಒಂದು ಪಂದ್ಯ ಮಾತ್ರ. 1 ಅರ್ಧಶತಕ ಸಹಿತ 69 ರನ್​ ಸಿಡಿಸಿದ ಠಾಕೂರ್, 7 ವಿಕೆಟ್​ ಕಬಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ರು.

ಇಂಗ್ಲೆಂಡ್​ ಸರಣಿಗಾಗಿ ಟೀಮ್​ ಇಂಡಿಯಾ ಏನೋ ಸಜ್ಜಾಗ್ತಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋಲಿನ ಬಳಿಕ ಪಾಠ ಕಲಿತಿರುವ ವಿರಾಟ್ ಪಡೆ, ಬೌಲಿಂಗ್​ ಆಲ್​ರೌಂಡರ್​​ ಕಡೆ ಹೆಚ್ಚು ಗಮನ ನೀಡ್ತಿದೆ. ಆದರೆ ಶಾರ್ದೂಲ್​ಗೆ ಇಂಗ್ಲೆಂಡ್​​ನಲ್ಲಾದ್ರೂ ಚಾನ್ಸ್​ ನೀಡ್ತಾರಾ ಇಲ್ವೋ ಅನ್ನೋದನ್ನ ಕಾದು ನೋಡಬೇಕಿದೆ.

The post ಶಾರ್ದೂಲ್​ ಠಾಕೂರ್​​ಗೆ ಚಾನ್ಸ್.. ಹಾರ್ದಿಕ್​ ಪಾಂಡ್ಯ ಟೆಸ್ಟ್​ ಕರಿಯರ್​ ಮುಗೀತಾ? appeared first on News First Kannada.

Source: newsfirstlive.com

Source link