ಬೆಂಗಳೂರು: ನಗರದ ಲಗ್ಗೆರೆಯ ನಾರಾಯಣ ಟೆಕ್ನೋ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸುತ್ತಿದ್ದು ಈವರೆಗೆ ಸಮಸ್ಯೆ ಬಗೆಹರಿದಿಲ್ಲ.

ಶಾಲೆಯಿಂದ ಶುಲ್ಕ ವಸೂಲಾತಿ ವಿರೋಧಿಸಿ ಮಕ್ಕಳ ಪೋಷಕರು ಇಂದು ಬೆಳಗ್ಗೆ 11 ಗಂಟೆಯಿಂದ ಶಾಲೆಯೆದುರು ಪ್ರತಿಭಟನೆ ನಡೆಸುತ್ತಿದ್ದು ಪೋಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ. ಈ ವೇಳೆ ಪೋಷಕರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆದಿದ್ದು ಶಾಲೆಯ ಒಳಗೆ ಪ್ರವೇಶ ನೀಡುವಂತೆ ಮನವಿ ಮಾಡಿದ್ದಾರೆ. ಪೋಷಕರೆಲ್ಲರನ್ನೂ ಒಳಗೆ ಬಿಡೋಲ್ಲ ಎಂದು ಪೊಲೀಸರು ಪೋಷಕರ ಮನವಿಯನ್ನ ನಿರಾಕರಿಸಿದ್ದಾರೆ. ರಸ್ತೆಯಲ್ಲೇ ಕೂತು ಪೋಷಕರು ಪ್ರತಿಭಟನೆ ನಡೆಸಿದ್ದು ತಮಗೆ ಸಹಕರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ(BEO) ರಮೇಶ್ ಅವರಿಗೆ ಮನವಿ ಮಾಡಿದ್ದಾರೆ.

ಇನ್ನು ಬಿಇಓ ರಮೇಶ್ ಅವರನ್ನ ತರಾಟೆಗೆ ತೆಗೆದುಕೊಂಡ ಪೋಷಕರು.. ನಮ್ಮ ಸಮಸ್ಯೆಯನ್ನ ನೀವು ಬಗೆಹರಿಸುವಲ್ಲಿ ವಿಫಲರಾಗಿದ್ದೀರಿ. ನಾವು ಎಷ್ಟೇ ಕಂಪ್ಲೇಂಟ್ ಕೊಟ್ರೂ ನೀವು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ನಿಮ್ಮ ಮೇಲೆ ನಮಗೆ ನಂಬಿಕೆಯೇ ಇಲ್ಲ. ನೀವು ನಂಬಿಕೆಗೆ ಅರ್ಹರೇ ಅಲ್ಲ ನೀವು ನಮ್ಮ ಕಷ್ಟಕ್ಕೆ ಸ್ಪಂದಿಸುವುದಾಗಿದ್ದಾರೆ, ಇಷ್ಟು ದಿನ ಬೇಕಿತ್ತಾ? ಎಂದು ಕಿಡಿಕಾರಿದ್ದಾರೆ.
ಇನ್ನು ಬಿಇಓ ರಮೇಶ್ ಪ್ರತಿಕ್ರಿಯೆ ನೀಡಿ.. ಈಗಾಗಲೇ ಪೋಷಕರಿಂದ ದೂರು ಬಂದಿರುವ ಹಿನ್ನೆಲೆ ಈ ಶಾಲೆಗೆ ನೋಟೀಸ್ ನೀಡಲಾಗಿದೆ. ಆದ್ರೆ ನೋಟೀಸ್ ಗೆ ಯಾವುದೇ ರೀತಿ ಉತ್ತರ ಬಂದಿಲ್ಲ, ಅದಲ್ಲದೆ 1 ವಾರಗಳ ಸಮಯವಕಾಶ ಕೇಳಿದ್ದಾರೆ. ಇವತ್ತು ರಿಪ್ಲೈ ಕೊಡ್ತೀನಿ ಹೇಳಿದ್ದಾರೆ, ತದನಂತರ ಕ್ರಮ ಕೈಗೊಳ್ಳುವೆ ಎಂದಿದ್ದಾರೆ.

ಆನ್ಲೈನ್ ಕ್ಲಾಸ್ ಗಳನ್ನ ಮಕ್ಕಳಿಗೆ ನೀಡಬೇಕು ಎಂದು ವಾರ್ನ್ ಮಾಡಲಾಗಿದೆ. ಒಂದು ವೇಳೆ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಳೆದ ವರ್ಷದ ಶುಲ್ಕವನ್ನೇ ಪಡೀಬೇಕು ಎಂದು ಈಗಾಗಲೇ ಶಾಲೆಗೆ ಸೂಚನೆ ನೀಡಲಾಗಿದೆ. ಶಾಲಾ ಶುಲ್ಕ ಹೆಚ್ಚಿಸುವ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

The post ಶಾಲಾ ಶುಲ್ಕ ವಸೂಲಾತಿ: ನಾರಾಯಣ ಟೆಕ್ನೋ ಶಾಲೆ ಎದುರು ಪೋಷಕರ ಪ್ರತಿಭಟನೆ appeared first on News First Kannada.

Source: newsfirstlive.com

Source link