ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ -ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ | All India Vegetarian Federation warns Karnataka govt to stop free egg giving scheme in schools


ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ -ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ

ಮೊಟ್ಟೆ ಹಿಡಿದಿರುವ ಮಕ್ಕಳು

ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ಸಂಬಂಧಿಸಿ ಮತ್ತಷ್ಟು ವಿರೋಧ ಹೆಚ್ಚಾಗಿದೆ. ಮೊಟ್ಟೆ ಯೋಜನೆ ಕೈಬಿಡದೆ ಹೋದ್ರೆ ಹೋರಾಟ ಮಾಡುತ್ತೇವೆ ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಸಂತರ ಸುದ್ದಿಗೋಷ್ಠಿ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಜನರಲ್ಲಿ ಏಕರೂಪ ರೂಪಿಸಬೇಕಾದ ಸರ್ಕಾರವೇ ಮೊಟ್ಟೆ ಕೊಡುವುದರ ಮೂಲಕ ವೈಮನಸ್ಸು ತಂದಿಟ್ಡಿದೆ. ಈ ಹಿಂದೆ ಅನೇಕ ಸರ್ಕಾರ ಕೈ ಬಿಟ್ಟ ಮೊಟ್ಟೆ ಯೋಜನೆ ಜಾರಿಗೆ ತಂದಿದೆ. ಲಿಂಗಾಯತ ಸಿಎಂ ಆಗಿದ್ದರೂ ಯೋಜನೆ ಜಾರಿಗೊಳಿಸಿದ್ದು ತಪ್ಪು. ದೇಶವನ್ನೇ ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡೋ ಬಿಜೆಪಿ ನಾಯಕರೇ ಗಮನ ಕೊಡಿ. ಸಾಮರಸ್ಯ ಸಾರೋ ಆರ್ಎಸ್ಎಸ್ ನಾಯಕರೇ ಗಮನ ಕೊಡಿ. ಯೋಜನೆ ಹಿಂಪಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಸಂತರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಗಳಿಗಿಂತ ಮೊದಲು ಮಠಗಳು ಅಕ್ಷರ ದಾಸೋಹ ನೀಡಿವೆ. ಇನ್ಮೇಲೆ ಬೀದಿಗಿಳಿದು ಹೋರಾಡಲು ನಿರ್ಧಾರ ಮಾಡಿದ್ದೇವೆ. ನೀವು ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದೆ ಹೋದರೆ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ, ಅಂಗನವಾಡಿ ತೆರೆಯಿರಿ. ಡಿಸೆಂಬರ್ 20 ರಂದು ಬೆಳಗಾವಿಯಲ್ಲಿ ಸಂತ ಸಮಾವೇಶ ಮಾಡ್ತಿದ್ದೇವೆ. ಇದು ಕೇವಲ ಲಿಂಗಾಯತ ಸ್ವಾಮೀಜಿಗಳ ಹೋರಾಟವಲ್ಲ. ಎಲ್ಲ ಧರ್ಮದ ಸಸ್ಯಹಾರಿಗಳ ಹೋರಾಟ. ನಮ್ಮ ಹೋರಾಟ ಯಾವುದೇ ಮಾಂಸಹಾರಿಗಳ ವಿರುದ್ಧವಲ್ಲ. ಪೌಷ್ಟಿಕ ಆಹಾರ ಕೊಡಬೇಕು ಎನ್ನೋದಾದ್ರೆ. ಮೊಟ್ಟೆಗಿಂತಲೂ ಉತ್ತಮ ಪೌಷ್ಟಿಕಾಂಶ ಇರೋ ಆಹಾರ ನೀಡಿ. ಮೊಟ್ಟೆನೇ ಕೊಡೊದಾದ್ರೆ ಅವರ ಮನೆಗೆ ಕೊಡಿ. ಶಾಲೆಯಲ್ಲಿ ಬೇಡ, ಶಾಲೆ ಎಲ್ಲರ ಸ್ವತ್ತು ಎಂದು ಸರ್ಕಾರದ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸುದ್ದಿಗೋಷ್ಠಿಯಲ್ಲಿ ಬಸವಧರ್ಮಪೀಠದ ಮಾತೆ ಗಂಗಾದೇವಿ, ವಿಶ್ವಪ್ರಾಣಿ ಕಲ್ಯಾಣ ಸಂಸ್ಥೆ ಅಧ್ಯಕ್ಷ ದಯಾನಂದ ಸ್ವಾಮೀಜಿ, ಚೆನ್ನಬಸವಾನಂದ ಸ್ವಾಮೀಜಿ ಭಾಗಿಯಾಗಿದ್ದರು.

TV9 Kannada


Leave a Reply

Your email address will not be published. Required fields are marked *