ಬಾಗಲಕೋಟೆ: ಚಾಲಾಕಿ ಕಳ್ಳರು ಶಾಲೆಯಲ್ಲಿನ ಕಂಪ್ಯೂಟರ್​ಗಳನ್ನೆ ಕದ್ದೊಯ್ದ ಘಟನೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುವೆಂಪು ಮಾದರಿ ಶತಮಾನೋತ್ಸವ ಶಾಲೆಯಲ್ಲಿನ ಕಂಪ್ಯೂಟರ್​ಗಳನ್ನು ದರೋಡೆ ಮಾಡಲಾಗಿದ್ದು. ಕಂಪ್ಯೂಟರ್​ ಲ್ಯಾಬ್​ನಲ್ಲಿನ 11 ಕಂಪ್ಯೂಟರ್​ಗಳ ಪೈಕಿ 4 ಕಂಪ್ಯೂಟರ್​ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಶಾಲಾ ಆವರಣದಲ್ಲಿ ರಾತ್ರಿ ವೇಳೆಯಲ್ಲಿ ಯಾವುದೇ ಲೈಟ್​ ವ್ಯವಸ್ಥೆ ಮತ್ತ ಸಿಸಿಟಿವಿ ಇಲ್ಲದಿರುವದನ್ನೇ ಎನ್ಕ್ಯಾಶ್​ ಮಾಡಿಕೊಂಡ ಕಳ್ಳರು ಸಂಚು ರೂಪಿಸಿ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇನ್ನು ಕಳ್ಳತನ ಕುರಿತು ಕಲಾದಗಿ ಪೊಲೀಸ್ ಠಾಣೆಗೆ ಶಾಲೆಯ ಆಡಳಿತ ಮಂಡಳಿ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

The post ಶಾಲೆಯಲ್ಲಿನ ಕಂಪ್ಯೂಟರ್​ಗಳನ್ನೇ ಕದ್ದೊಯ್ದ ಕಳ್ಳರು appeared first on News First Kannada.

Source: newsfirstlive.com

Source link