ಶಾಲೆ ಆರಂಭಕ್ಕೆ ತಜ್ಞರ ಸಮಿತಿ ಗ್ರೀನ್​ ಸಿಗ್ನಲ್; ಆದರೆ ಕಂಡಿಷನ್ಸ್​ ಏನು..?

ಶಾಲೆ ಆರಂಭಕ್ಕೆ ತಜ್ಞರ ಸಮಿತಿ ಗ್ರೀನ್​ ಸಿಗ್ನಲ್; ಆದರೆ ಕಂಡಿಷನ್ಸ್​ ಏನು..?

ಬೆಂಗಳೂರು: ಕೊರೊನಾದ ಮೂರನೇ ಅಲೆ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿಯನ್ನ ಸಲ್ಲಿಸಿದೆ. ಈ ವರದಿಯಲ್ಲಿ ಅತ್ಯಂತ ಪ್ರಮುಖವಾಗಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಕಂಡಿಷನ್​​ಗಳನ್ನು ಕೂಡ ಹಾಕಲಾಗಿದೆ.

ತಜ್ಞರ ಸಮಿತಿ ಹೇಳಿದ್ದೇನು? ಇಲ್ಲಿದೆ ಹೈಲೈಟ್ಸ್​

 • ಆನ್​ಲೈನ್ ಶಿಕ್ಷಣದಿಂದ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ
 • ಆನ್​ಲೈನ್​ ಶಿಕ್ಷಣ ಅಸಮಾನತೆಗೆ ಕಾರಣವಾಗಿದೆ
 • ಸಾಕಷ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ
 • ಹೀಗಾಗಿ ಶಾಲೆ ಆರಂಭ ಮಾಡುವುದು ಉತ್ತಮ
 • ಮಕ್ಕಳ ಕಲಿಕಾ ಮಟ್ಟ, ಭೌತಿಕ ಆರೋಗ್ಯ, ಮಾನಸಿಕ ಆರೋಗ್ಯ ವೃದ್ಧಿಗೆ ಶಾಲೆಗಳನ್ನ ಆರಂಭಿಸಬೇಕು
 • ಶಾಲೆಗಳ ಆರಂಭ ವಿಳಂಭ ಮಾಡಿದ್ರೆ ಅಪೌಷ್ಠಿಕತೆ, ಬಾಲ ಕಾರ್ಮಿಕ ಪದ್ದತಿ ಬಾಲ್ಯ ವಿವಾಹ, ಬಿಕ್ಷಾಟನೆ, ಮಕ್ಕಳ ಲೈಂಗಿಕ ಪೋಷಣೆ ಹೆಚ್ಚಾಗುತ್ತದೆ
 • ಆನ್​ಲೈನ್ ಶಿಕ್ಷಣ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ, ಕಲಿಕೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ
 • ಹೆಚ್ಚಿನ ಮಕ್ಕಳು ಎ ಸಿಮ್ಟಾಮ್ಯಾಟಿಕ್ ಅಥವಾ ಕಡಿಮೆ ಲಕ್ಷಣ ಇರೋ ಮಕ್ಕಳಾಗಿರುತ್ತಾರೆ
 • ಎಂದು ಇಂಡಿಯನ್ ಅಕಾಡಮಿ ಆಫ್​ ಪಿಡಿಯಾಟ್ರಿಕ್ಸ್​ ಅಭಿಪ್ರಾಯ ಪಟ್ಟಿದೆ
 • ಶಾಲೆ ಆವರಣಗಳು ಹೆಚ್ಚು ಸೋಂಕು ಹಬ್ಬಿಸುತ್ತವೆ ಎಂಬುವುದಕ್ಕೆ ವಿಶ್ವಾದ್ಯಂತ ಯಾವುದೇ ಸಾಕ್ಷಾಧಾರಗಳು ಲಭ್ಯವಿಲ್ಲ
 • ಶಾಲೆಗಳ ಆರಂಭಿಸುವುದನ್ನು ಶಾಲಾಭಿವೃದ್ಧಿ ಸಮಿತಿಗಳಿಗೆ ವಹಿಸುವ ಮೂಲಕ ವಿಕೇಂದ್ರಿಕರಣಗೊಳಿಸಬೇಕು
 • ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯನ್ನ ರಚಿಸಬೇಕು

The post ಶಾಲೆ ಆರಂಭಕ್ಕೆ ತಜ್ಞರ ಸಮಿತಿ ಗ್ರೀನ್​ ಸಿಗ್ನಲ್; ಆದರೆ ಕಂಡಿಷನ್ಸ್​ ಏನು..? appeared first on News First Kannada.

Source: newsfirstlive.com

Source link