ಶಾಲೆಗಳಲ್ಲಿ ಚಿಲಿಪಿಲಿ ಅನ್ನೋ ಚಿಣ್ಣರ ಸೌಂಡ್‌ ಇಲ್ಲ.. ಕ್ಲಾಸ್‌ ರೂಮ್‌ಗಳಲ್ಲಿ ಮಕ್ಕಳ ಕಲರವ ಇಲ್ಲ. ಮಕ್ಕಳು ಬ್ಯಾಗ್‌ ಹಾಕ್ಕೊಂಡು ಶಿಸ್ತಾಗಿ ಕ್ಲಾಸ್‌ಗೆ ಬರ್ತಿಲ್ಲ. ಸ್ನೇಹಿತರ ಜೊತೆ ಆಟ-ಪಾಠ-ಗುದ್ದಾಟ ಯಾವುದೂ ಇಲ್ಲ. ಕ್ಲಾಸ್‌ರೂಮ್‌ ಧೂಳು ಹಿಡಿದಿದೆ.. ಬೋರ್ಡ್‌ ಮಂಕಾಗಿದೆ.. ಶಾಲೆ ವಾತಾವರಣ ಮೌನವಾಗ್ಬಿಟ್ಟಿದೆ. ಎಲ್ಲೀವರೆಗೆ ಇದೆಲ್ಲಾ..? ಮತ್ತೆ ಮೊದಲಿನಂತಾಗೋದು ಯಾವಾಗ..?

ನಿಜ.. ಯಾವಾಗ ಶಾಲೆಗಳ ಆರಂಭ..? ಮತ್ತೆ ಮಕ್ಕಳು ಸ್ಕೂಲ್‌ಗೆ ಹೋಗೋದು ಯಾವಾಗ..? ಆನ್‌ಲೈನ್‌ ಕ್ಲಾಸ್‌ ನಿಲ್ಲೋದು ಯಾವಾಗ..? ಮತ್ತೆ ಮಕ್ಕಳ ಎಜುಕೇಶನ್‌ ಸಹಜ ಸ್ಥಿತಿಗೆ ಬರೋದ್ಯಾವಾಗ? ಇದು ಪೋಷಕರ ಪ್ರಶ್ನೆ. ಈ ಪ್ರಶ್ನೆಗೆ ಪಾಸಿಟಿವ್‌ ಉತ್ತರ ಕೊಟ್ಟಿದೆ ಡಾ.ದೇವಿಪ್ರಸಾದ್‌ ಶೆಟ್ಟಿ ನೇತೃತ್ವದ ತಜ್ಞರ ವರದಿ. ಶಾಲೆಗಳ ಆರಂಭ ಮಾಡದಿದ್ರೆ ಏನಾಗುತ್ತೆ..? ಮಾಡದೆ ಇದ್ರೆ ಏನಾಗುತ್ತೆ..? ಮಾಡಿದ್ರೆ ವಿದ್ಯಾರ್ಥಿಗಳಿಗೆ ಹೇಗೆ ಲಾಭ ಆಗುತ್ತೆ..? ಎಲ್ಲವನ್ನೂ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.

ಶಾಲೆ ಆರಂಭಿಸದಿದ್ರೆ ಏನಾಗುತ್ತೆ?

 • ಶಾಲೆಗಳ ಆರಂಭವಾಗದೆ ಮಕ್ಕಳಲ್ಲಿ ದೈಹಿಕ, ಮಾನಸಿಕ, ಶೈಕ್ಷಣಿಕ ಸಮಸ್ಯೆ
 • ತುರ್ತಾಗಿ ಶಾಲೆ ಆರಂಭ ಮಾಡೋಕೆ ವೈಜ್ಞಾನಿಕ ಗೈಡ್‌ಲೆನ್ಸ್‌ ಸಿದ್ದಗೊಳ್ಬೇಕು
 • ಇನ್ನೂ ವಿಳಂಬ ಮಾಡಿದ್ರೆ ಅದು ಕೊರೊನಾಗಿಂತಲೂ ಡೇಂಜರ್‌ ಆಗ್ಬಿಡುತ್ತೆ
 • ಕೋವಿಡ್‌ನಿಂದ ಶೇ. 50ರಷ್ಟು ಕಲಿಕೆಯನ್ನೇ ವಿದ್ಯಾರ್ಥಿಗಳು ಕಳ್ಕೊಂಡಿದ್ದಾರೆ
 • ವಿದ್ಯಾರ್ಥಿಗಳಲ್ಲಿ, ಕುಟುಂಬಸ್ಥರಲ್ಲಿ ಒತ್ತಡ, ಸಿಡಿಮಿಡಿ, ಖಿನ್ನತೆ ಹೆಚ್ಚಾಗ್ತಿದೆ
 • ಕಳೆದ 14 ತಿಂಗಳಿಂದ ಮಕ್ಕಳು ತಮ್ಮ ಸುಂದರ ಬಾಲ್ಯ ಕಳೆದುಕೊಂಡಿದ್ದಾರೆ
 • ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು, ವಿಳಂಬವಾದ್ರೆ ಕಾದಿದೆ ಆತಂಕ
 • ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಕೇಸ್‌ ಹೆಚ್ಚಾಗಿವೆ
 • ಮಕ್ಕಳ ಕಳ್ಳ ಸಾಗಾಟ, ಮಕ್ಕಳ ಭಿಕ್ಷಾಟನೆ ಪ್ರಕರಣಗಳಿಗೂ ಇದು ದಾರಿ
 • ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನಿರೀಕ್ಷಿತ ಫಲಿತಾಂಶವನ್ನ ನೀಡುತ್ತಿಲ್ಲ
 • ಇದರಿಂದಾಗಿ ಸಮಾಜದ ಎಲ್ಲಾ ವರ್ಗದಲ್ಲಿ ಶೈಕ್ಷಣಿಕ ಅಸಮಾನತೆ ಸೃಷ್ಟಿ
 • ಆನ್‌ಲೈನ್‌ ಶಿಕ್ಷಣದಿಂದ ವಿದ್ಯಾರ್ಥಿಗಳು, ಕುಟುಂಬಸ್ಥರಿಗೆ ಮಾನಸಿಕ ಒತ್ತಡ
 • ಕಳೆದ ಬಾರಿಯ ವಿದ್ಯಾಗಮ, SSLC &PUC ಪರೀಕ್ಷೆಗಳಿಂದ ವಿಶ್ವಾಸ ಹೆಚ್ಚಿದೆ

ಇಷ್ಟು ಸಮಯ ಆದ್ರೂ ಶಾಲೆಗಳು ಆರಂಭವಾಗದಿರೋದ್ರಿಂದ ಮಕ್ಕಳು ದೈಹಿಕ, ಮಾನಸಿಕ, ಶೈಕ್ಷಣಿಕ ಸಮಸ್ಯೆಗಳಿಗೆ ತುತ್ತಾಗ್ತಿದ್ದಾರೆ. ಹೀಗಾಗಿ ತುರ್ತಾಗಿ ಶಾಲೆ ಆರಂಭ ಮಾಡೋಕೆ ವೈಜ್ಞಾನಿಕ, ಶೈಕ್ಷಣಿಕ ಗೈಡ್‌ಲೆನ್ಸ್‌ ಸಿದ್ಧಗೊಳ್ಬೇಕು. ಇನ್ನೂ ವಿಳಂಬ ಮಾಡಿದ್ರೆ ಅದು ಕೊರೊನಾಗಿಂತಲೂ ಡೇಂಜರ್‌ ಆಗ್ಬಿಡುತ್ತೆ. ಕೋವಿಡ್‌ನಿಂದ ಶೇ 50ರಷ್ಟು ಕಲಿಕೆಯನ್ನೇ ವಿದ್ಯಾರ್ಥಿಗಳು ಕಳ್ಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ, ಕುಟುಂಬಸ್ಥರಲ್ಲಿ ಒತ್ತಡ, ಸಿಡಿಮಿಡಿ, ಖಿನ್ನತೆ ಹೆಚ್ಚಾಗ್ತಿದೆ. ಕಳೆದ 14 ತಿಂಗಳಿಂದ ಮಕ್ಕಳು ತಮ್ಮ ಸುಂದರ ಬಾಲ್ಯವನ್ನೇ ಕಳೆದುಕೊಂಡಿದ್ದಾರೆ. ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಹೀಗಾಗಿ ವಿಳಂಬವಾದ್ರೆ ಆತಂಕ ಮತ್ತಷ್ಟು ಹೆಚ್ಚಾಗಿಬಿಡುತ್ತೆ. ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಕೇಸ್‌ ಹೆಚ್ಚಾಗಿವೆ. ಮಕ್ಕಳ ಕಳ್ಳ ಸಾಗಾಟ, ಮಕ್ಕಳ ಭಿಕ್ಷಾಟನೆ ಪ್ರಕರಣಗಳಿಗೂ ಇದು ದಾರಿಯಾಗ್ಬಿಡುತ್ತೆ. ವಿದ್ಯಾರ್ಥಿಗಳಿಗೆ ಈಗ ನಡೆಸ್ತಿರೋ ಆನ್‌ಲೈನ್‌ ಶಿಕ್ಷಣ ನಿರೀಕ್ಷಿತ ಫಲಿತಾಂಶವನ್ನ ನೀಡುತ್ತಿಲ್ಲ. ಇದರಿಂದಾಗಿ ಸಮಾಜದ ಎಲ್ಲಾ ವರ್ಗದಲ್ಲಿ ಶೈಕ್ಷಣಿಕ ಅಸಮಾನತೆ ಸೃಷ್ಟಿಯಾಗ್ಬಿಟ್ಟಿದೆ. ಆನ್‌ಲೈನ್‌ ಶಿಕ್ಷಣದಿಂದ ವಿದ್ಯಾರ್ಥಿಗಳು, ಕುಟುಂಬಸ್ಥರಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ. ಕಳೆದ ಬಾರಿಯ ವಿದ್ಯಾಗಮ, SSLC &PUC ಪರೀಕ್ಷೆಗಳಿಂದ ವಿಶ್ವಾಸ ಹೆಚ್ಚಾಗಿದ್ದು ಶಾಲೆ ನಡೆಸಬಹುದು ಅನ್ನೋ ಧೈರ್ಯ ಇದೆ.

ಮೂರನೇ ಅಲೆ ಆತಂಕದಿಂದ ಶಾಲೆ ಆರಂಭದಲ್ಲಿ ವಿಳಂಬ ಬೇಡ
ಮೂರನೇ ಅಲೆ ಸದ್ಯದಲ್ಲೇ ಬರಲಿದೆ ಅನ್ನೋ ಚರ್ಚೆ ಇರೋವಾಗ ಶಾಲೆ ಆರಂಭಿಸಿದ್ರೆ ಮಕ್ಕಳ ಆರೋಗ್ಯದ ಕತೆಯೇನು..? ಈ ಪ್ರಶ್ನೆಗೂ ಉತ್ತರ ನೀಡಿದೆ ತಜ್ಞರ ವರದಿ. ಮೂರನೇ ಅಲೆ ಬಂದುಬಿಡುತ್ತೆ ಅನ್ನೋ ಆತಂಕ ಬೇಡ. ಯಾಕಂದ್ರೆ ಈವರೆಗೆ ಮೊದಲ ಹಾಗೂ ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳಷ್ಟೇ ಹೆಚ್ಚಾಗಿ ಕಂಡುಬಂದಿರೋದು. ತೀವ್ರತೆಗೆ ಹೋಗಿರೋದು ಬೆರಳೆಣಿಕೆಯ ಕೇಸ್‌ಗಳಷ್ಟೇ. ಇನ್ನು ಈಗಾಗಲೇ ಹೆಚ್ಚಿನ ವಯಸ್ಕರಿಗೆ ಸೋಂಕು ಬಂದುಹೋಗಿದೆ. ಮತ್ತೂ ಹಲವರು ಲಸಿಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಮಕ್ಕಳಿಂದ ವಯಸ್ಕರಿಗೆ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಇನ್ನು ಶಾಲೆಗಳಿಂದ ಸೋಂಕು ಹರಡಿದ್ದಕ್ಕೆ ಜಗತ್ತಿನೆಲ್ಲೆಡೆ ಸಾಕ್ಷ್ಯಗಳೇ ಇಲ್ಲ.

ಹೀಗಾಗಿಯೇ ತಜ್ಞರ ವರದಿ ಶಾಲಾ ಆರಂಭಕ್ಕೆ ಒಂದಿಷ್ಟು ಶಿಫಾರಸು ಮಾಡಿದೆ. ಮಾಡಿದ್ರೆ ಹೇಗಿರಬೇಕು, ಏನ್‌ ನಿರ್ಧಾರ ತೆಗೆದುಕೊಳ್ಬೇಕು ಅನ್ನೋ ಸಲಹೆ ನೀಡಿದೆ.

ಸಮಿತಿ ಮಾಡ್ತಿರೋ ಶಿಫಾರಸು ಏನು?

 • ಶಾಲೆ ಆರಂಭಕ್ಕೂ ಮೊದಲೇ ಇಡೀ ಶಾಲೆ ಸ್ಯಾನಿಟೈಸ್‌ ಆಗಬೇಕು
 • ಕುಟುಂಬಸ್ಥರು, ಶಾಲೆ ಶಿಕ್ಷಕರು, ಸಿಬ್ಬಂದಿ ಎಲ್ರಿಗೂ ವ್ಯಾಕ್ಸಿನೇಷನ್
 • ಸರ್ಕಾರಿ, ಖಾಸಗಿ ಶಿಕ್ಷಕರನ್ನ ವಾರಿಯರ್ಸ್‌ ಅಂತ ಪರಿಗಣಿಸಿ ಇನ್ಶುರೆನ್ಸ್‌
 • ಶಾಲೆಗೆ ಹಾಜರಾಗ್ತಿರೋ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಹೆಲ್ತ್‌ ಇನ್ಶುರೆನ್ಸ್‌
 • ಸಿಗುವ ತಿಂಗಳ ಅವಧಿಯಲ್ಲಿ ಮತ್ತೆ ಮಕ್ಕಳನ್ನ ಶಾಲೆ ಕಳುಹಿಸಲು ಮನವಿ
 • ಶಾಲೆ ತೆರೆಯುವ ನಿರ್ಧಾರ ಒಂದೇ ಕಡೆ ಕೇಂದ್ರಿಕೃತ ಆಗಲೇಬಾರದು
 • ಜಿಲ್ಲೆ, ತಾಲುಕು, ಗ್ರಾಮ, ಎಸ್‌ಡಿಎಂಸಿ ಮಟ್ಟದಲ್ಲಿ ಹಂಚಿಕೆಯಾಗಬೇಕು
 • ಶಾಲೆ ರೀ ಓಪನ್‌ ಆದ ಬಳಿಕ ಆಗಾಗ ಪರಿಶೀಲನೆ ನಡೆಸುತ್ತಿರಬೇಕು
 • ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಕಮಿಟಿಯ ನೇಮಕ ಮಾಡಿದ್ರೆ ಉತ್ತಮ

ಶಾಲೆ ಆರಂಭಕ್ಕೂ ಮೊದಲೇ ಇಡೀ ಶಾಲೆ ಸ್ಯಾನಿಟೈಸ್‌ ಆಗಬೇಕು. ಕುಟುಂಬಸ್ಥರು, ಶಾಲೆ ಶಿಕ್ಷಕರು, ಸಿಬ್ಬಂದಿ ಎಲ್ರಿಗೂ ವ್ಯಾಕ್ಸಿನೇಷನ್ ಆಗಬೇಕು. ಸರ್ಕಾರಿ ಹಾಗೆ ಖಾಸಗಿ ಶಾಲೆ ಶಿಕ್ಷಕರನ್ನ ವಾರಿಯರ್ಸ್‌ ಅಂತ ಪರಿಗಣಿಸಿ ಇನ್ಶುರೆನ್ಸ್‌ ಸೌಲಭ್ಯ ನೀಡಬೇಕು. ಶಾಲೆಗೆ ಹಾಜರಾಗ್ತಿರೋ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಹೆಲ್ತ್‌ ಇನ್ಶುರೆನ್ಸ್‌ ಗ್ಯಾರಂಟಿ ನೀಡಬೇಕು. ಸಿಗುವ ಒಂದು ತಿಂಗಳ ಅವಧಿಯಲ್ಲಿ ಮತ್ತೆ ಮಕ್ಕಳನ್ನ ಶಾಲೆ ಕಳುಹಿಸಲು ಮನವೊಲಿಸಬೇಕು. ಶಾಲೆ ತೆರೆಯುವ ನಿರ್ಧಾರ ಒಂದೇ ಕಡೆ ಕೇಂದ್ರಿಕೃತವಾಗಿರಬಾರದು. ಜಿಲ್ಲಾಡಳಿತ, ತಾಲುಕು, ಗ್ರಾಮ ಪಂಚಾಯತ್‌ ಮತ್ತು ಎಸ್‌ಡಿಎಂಸಿ ಮಟ್ಟದಲ್ಲಿ ಹಂಚಿಕೆಯಾಗಬೇಕು. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವಂತಿರಬೇಕು. ಇನ್ನು ಶಾಲೆ ರೀ ಓಪನ್‌ ಆದ ಬಳಿಕ ಆಗಾಗ ಪರಿಶೀಲನೆ ನಡೆಸುತ್ತಿರಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ಕಮಿಟಿಯ ನೇಮಕ ಮಾಡಿದ್ರೆ ಉತ್ತಮ.ಇದು ತಜ್ಞರು ನೀಡಿರೋ ಸಲಹೆ.

ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಹೇಗಿರಬೇಕು?

 • ಸರ್ಕಾರಿ ಶಾಲೆಗಳಲ್ಲಿ ಪ್ರೋಟೋಕಾಲ್‌ ಪಾಲನೆಗೆ ಸ್ಥಳಾವಕಾಶದ ಕೊರತೆ
 • ಎಸ್‌ಡಿಎಂಸಿ ಈ ಕೂಡಲೇ ಜಿಲ್ಲಾ ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಬೇಕು
 • ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಶಿಫ್ಟ್‌ ಹಿನ್ನೆಲೆ..ಶೇ.10ರಷ್ಟು ಹೆಚ್ಚುವರಿ ದಾಖಲಾತಿಗೆ ಸರ್ಕಾರಿ ಶಾಲೆಗಳು ಸಿದ್ದವಾಗಬೇಕು
 • ಪಾಸಿಟಿವಿಟಿ ರೇಟ್‌ ಕಡಿಮೆಯಿರೋ ಜಿಲ್ಲೆಗಳಲ್ಲಿ ಶಾಲೆಗಳು ಓಪನ್‌
 • ಸತತ 2 ವಾರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್‌ 5ಕ್ಕಿಂತ ಕಡಿಮೆಯಿರಬೇಕು
 • ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್, ವೆಂಟಿಲೇಶನ್‌ ಬಗ್ಗೆ ಜಾಗೃತಿ
 • ಸ್ಥಳೀಯ ಸಮಸ್ಯೆಗೆ ಸಂಬಂಧ ಪಟ್ಟಂತೆ ಸ್ಥಳೀಯವಾಗಿಯೇ ನಿರ್ಧಾರ
 • ಪೌಷ್ಟಿಕ ಆಹಾರ ಸರಬರಾಜು ಈಗಿರುವಂತೆ ಮುಂದುವರಿಯಬೇಕು

ಸರ್ಕಾರಿ ಶಾಲೆಗಳಲ್ಲಿ ಪ್ರೋಟೋಕಾಲ್‌ ಪಾಲನೆಗೆ ಸ್ಥಳಾವಕಾಶದ ಕೊರತೆ ಇದ್ರೆ ತಕ್ಷಣ ಎಸ್‌ಡಿಎಂಸಿ ಈ ಬಗ್ಗೆ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿ ಕೂಡಲೇ ವ್ಯವಸ್ಥೆ ಮಾಡಿಕೊಳ್ಬೇಕು. ಕೋವಿಡ್‌ ಸಂಕಷ್ಟದಿಂದಾಗಿ ಖಾಸಗಿಯಿಂದ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಶಿಫ್ಟ್‌ ಆಗಿರುವ ಹಿನ್ನೆಲೆ ಶೇ.10ರಷ್ಟು ಹೆಚ್ಚುವರಿ ದಾಖಲಾತಿಗೆ ಸರ್ಕಾರಿ ಶಾಲೆಗಳು ಸಿದ್ದವಾಗಬೇಕು. ಇನ್ನು ಪಾಸಿಟಿವಿಟಿ ರೇಟ್‌ ಕಡಿಮೆಯಿರೋ ಜಿಲ್ಲೆಗಳಲ್ಲಿ ಶಾಲೆಗಳನ್ನ ಓಪನ್‌ ಮಾಡಬಹುದು. ಸತತ 2 ವಾರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್‌ 5ಕ್ಕಿಂತ ಕಡಿಮೆಯಿದ್ರೆ ಶಾಲೆಗಳನ್ನ ತೆರೆಯಬಹುದು. ಇದ್ರೊಂದಿಗೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್, ವೆಂಟಿಲೇಶನ್‌ ಬಗ್ಗೆ ಜಾಗೃತಿ ಮೂಡಿಸಬೇಕು. ಸ್ಥಳೀಯ ಸಮಸ್ಯೆಗೆ ಸಂಬಂಧ ಪಟ್ಟಂತೆ ಸ್ಥಳೀಯವಾಗಿಯೇ ನಿರ್ಧಾರ ತೆಗೆದುಕೊಳ್ಬೇಕು. ಪೌಷ್ಟಿಕ ಆಹಾರ ಸರಬರಾಜು ಈಗಿರುವಂತೆ ಮುಂದುವರಿಯಬೇಕು.

ಖಾಸಗಿ ಶಾಲೆಗಳ ವ್ಯವಸ್ಥೆ ಹೇಗಿರಬೇಕು?

 • ಸರ್ಕಾರಿ ಶಾಲೆಯಂತೆ ಖಾಸಗಿ ಶಾಲೆಗಳನ್ನೂ ಕೂಡ ತಕ್ಷಣ ತೆರೆಯಬೇಕು
 • ಸ್ಥಳಾವಕಾಶದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು, ಮೈದಾನ ಇರಬೇಕು
 • ಸ್ಥಳಾವಕಾಶ ಕಡಿಮೆಯಿದ್ರೆ ಶಾಲೆ ತೆರೆಯಲು ಪೋಷಕರ ಅನುಮತಿ ಬೇಕು
 • ಪಾಳಿಯಲ್ಲಿ ಶಾಲೆಗಳನ್ನು ನಡೆಸೋದಕ್ಕೆ ಮುಂದಾದರೆ ಉತ್ತಮ

ಖಾಸಗಿ ಶಾಲೆಗಳಲ್ಲೂ ಬಹುತೇಕ ಇದೇ ನಿಯಮ ಅನ್ವಯವಾಗುತ್ತೆ. ಸರ್ಕಾರಿ ಶಾಲೆಯಂತೆ ಖಾಸಗಿ ಶಾಲೆಗಳನ್ನೂ ಕೂಡ ತಕ್ಷಣ ತೆರೆಯಬೇಕು. ಸ್ಥಳಾವಕಾಶದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು, ಮೈದಾನ ಹೊಂದಿರಬೇಕು. ಸ್ಥಳಾವಕಾಶ ಕಡಿಮೆಯಿದ್ರೆ ಶಾಲೆ ತೆರೆಯಲು ಪೋಷಕರ ಅನುಮತಿ ಬೇಕು. ಪಾಳಿಯಲ್ಲಿ ಶಾಲೆಗಳನ್ನು ನಡೆಸೋದಕ್ಕೆ ಮುಂದಾದರೆ ಉತ್ತಮ. ಅಥವಾ ಡಿಜಿಟಲ್‌ ಕಲಿಕೆಯ ಮೊರೆಯನ್ನೂ ಹೋಗಬಹುದು.

ಹೀಗೆ ಸೂಕ್ತ ಸಲಹೆ ನೀಡಿರೋ ತಜ್ಞರ ಸಮಿತಿ, ಶಾಲೆ ತೆರೆದರೆ ಹೇಗಿರಬೇಕು. ಶಾಲೆಯಲ್ಲಿ ಪಾಲನೆ ಆಗ್ಬೇಕಿರೋ ಪ್ರೊಟೋಕಾಲ್‌ ಯಾವುದು ಅನ್ನೋ ಬಗ್ಗೆಯೂ ಸ್ಪಷ್ಟವಾಗಿ ಹೇಳಿದೆ.

 ಶಾಲೆ ತೆರೆದರೆ ಹೀಗಿರಬೇಕು

 • ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿ ನೇಮಕ
 • 60 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವರ್ಕ್ ಫ್ರಮ್‌ ಹೋಮ್‌
 • ಶಾಲೆ ಸುತ್ತ ಸ್ಯಾನಿಟೈಸೇಷನ್, ಕೊಠಡಿಯಲ್ಲಿ ಗಾಳಿ ಆಡೋ ವ್ಯವಸ್ಥೆ
 • ಸಮರ್ಪಕ ಶೌಚಾಲಯದ ವ್ಯವಸ್ಥೆ, ಕುಡಿಯೋ ನೀರು ವ್ಯವಸ್ಥೆ
 • ಅನಾರೋಗ್ಯ ಪೀಡಿತರಿಗೆ ಅಂತ ಒಂದು ಕೊಠಡಿಯಿರಬೇಕು
 • ಕೋವಿಡ್‌ 19 ಸಿಂಪ್ಟಮ್ಸ್‌ ಬಗ್ಗೆ ಸಿಬ್ಬಂದಿ, ಪೋಷಕರಿಗೆ ಮಾಹಿತಿ
 • ಸಾಮಾನ್ಯ ಜ್ವರದ ವ್ಯಾಕ್ಸಿನೇಷನ್‌ ಮಾಡಿಸುವಂತೆ ಪ್ರೋತ್ಸಾಹ
 • ಬ್ಯಾಚ್‌ಗಳಂತೆ ಶಾಲೆ ಆರಂಭ, ಮೊದಲು ಹಿರಿಯ ಮಕ್ಕಳಿಗೆ
 • ಪಾಳಿ ಅಥವಾ ದಿನ ಬಿಟ್ಟು ದಿನ ಪಾಠ ಮಾಡುವ ಪದ್ಧತಿ
 • ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಶಾಲಾ ಗ್ರೌಂಡ್‌ನ ಬಳಕೆ ಉತ್ತಮ
 • ವಿದ್ಯಾರ್ಥಿಗಳ ಮಧ್ಯೆ ಕನಿಷ್ಟ 1 ಮೀಟರ್‌ ಅಂತರ ಇರಬೇಕು
 • ಕಡಿಮೆ ಸ್ಟೇಷನರಿ ವಸ್ತುಗಳನ್ನ ತರಬೇಕು, ಹಂಚಿಕೊಳ್ಳಬಾರದು
 • ಶಾಲೆಯಲ್ಲಿ ಗುಂಪು ಚಟುವಟಿಕೆ ನಡೆಸದಿರುವುದು ಉತ್ತಮ
 • ಎನ್‌ಸಿಸಿ, ಸ್ಕೌಟ್ಸ್‌, ಟೀಮ್‌ ಸ್ಪೋರ್ಟ್ಸ್‌, ಸಾಂಸ್ಕೃತಿಕ ಚಟುವಟಿಕೆ ಬೇಡ
 • ಪಾಸಿಟಿವ್‌ ಬಂದ ವಿದ್ಯಾರ್ಥಿ, ಸಿಬ್ಬಂದಿ 14 ದಿನ ಶಾಲೆಯಿಂದ ದೂರ

ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿ ನೇಮಕ ಕಡ್ಡಾಯ. 60 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ವರ್ಕ್ ಫ್ರಮ್‌ ಹೋಮ್‌ ಕೊಟ್ರೆ ಒಳ್ಳೆಯದು. ಶಾಲೆ ಸುತ್ತ ಸ್ಯಾನಿಟೈಸ್‌, ಕೊಠಡಿಯಲ್ಲಿ ಗಾಳಿ ಆಡೋ ವ್ಯವಸ್ಥೆ ಮಾಡಿಕೊಳ್ಬೇಕು. ಸಮರ್ಪಕ ಶೌಚಾಲಯದ ವ್ಯವಸ್ಥೆ, ಕುಡಿಯೋ ನೀರು ವ್ಯವಸ್ಥೆ ಸಿದ್ದಗೊಳ್ಬೇಕು. ಅನಾರೋಗ್ಯ ಪೀಡಿತರಿಗೆ ಅಂತಾನೇ ಒಂದು ಕೊಠಡಿಯಿರಬೇಕು. ಕೋವಿಡ್‌ 19 ಸಿಂಪ್ಟಮ್ಸ್‌ ಬಗ್ಗೆ ಶಾಲಾ ಸಿಬ್ಬಂದಿಗೆ, ಪೋಷಕರಿಗೆ ಮಾಹಿತಿ ನೀಡಬೇಕು. ಇದ್ರೊಂದಿಗೆ ಮಕ್ಕಳಿಗೆ ಸಾಮಾನ್ಯ ಜ್ವರದ ವ್ಯಾಕ್ಸಿನೇಷನ್‌ ಮಾಡಿಸುವಂತೆ ಪ್ರೋತ್ಸಾಹ ನೀಡಬೇಕು. ಬ್ಯಾಚ್‌ಗಳಂತೆ ಶಾಲೆ ಆರಂಭ ಮಾಡಬಹುದು. ಮೊದಲು ಹಿರಿಯ ಮಕ್ಕಳಿಗೆ ಆರಂಭಿಸಿದ್ರೆ ಒಳ್ಳೆಯದು. ಪಾಳಿ ಅಥವಾ ದಿನ ಬಿಟ್ಟು ದಿನ ಪಾಠ ಮಾಡುವ ಪದ್ಧತಿ ಅಳವಡಿಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಶಾಲಾ ಗ್ರೌಂಡ್‌ನ ಬಳಕೆ ಉತ್ತಮವಾಗಿರುತ್ತೆ.

ವಿದ್ಯಾರ್ಥಿಗಳ ಮಧ್ಯೆ ಕನಿಷ್ಟ 1 ಮೀಟರ್‌ ಅಂತರ ಇರಬೇಕು. ಕಡಿಮೆ ಸ್ಟೇಷನರಿ ವಸ್ತುಗಳನ್ನ ತರಬೇಕು, ವಿದ್ಯಾರ್ಥಿಗಳು ಅದನ್ನ ಹಂಚಿಕೊಳ್ಳಬಾರದು. ಶಾಲೆಯಲ್ಲಿ ಗುಂಪು ಚಟುವಟಿಕೆ ನಡೆಸದಿರುವುದು ಉತ್ತಮ. ಎನ್‌ಸಿಸಿ, ಸ್ಕೌಟ್ಸ್‌, ಟೀಮ್‌ ಸ್ಪೋರ್ಟ್ಸ್‌, ಸಾಂಸ್ಕೃತಿಕ ಚಟುವಟಿಕೆ ಬೇಡ. ಇನ್ನು ಪಾಸಿಟಿವ್‌ ಬಂದ ವಿದ್ಯಾರ್ಥಿ, ಸಿಬ್ಬಂದಿ 14 ದಿನ ಶಾಲೆಯಿಂದ ದೂರ ಇರಬೇಕು.
ಇದೇ ನಿಯಮಗಳು ಕಾಲೇಜಿಗೂ ಅನ್ವಯವಾಗುತ್ತೆ.

ಆದ್ರೆ ಮಧ್ಯಂತರ ವರದಿ ಪಡೆದಿರೋ ಮುಖ್ಯಮಂತ್ರಿಗಳು ಕಾಲೇಜು ಓಪನ್‌ ಮಾಡೋಕೆ ಮನಸ್ಸು ಮಾಡಿದ್ದಾರೆ. ಆದ್ರೆ ಶಾಲೆಗಳ ಬಗ್ಗೆ ಇನ್ನೂ ಚರ್ಚಿಸಿಲ್ಲ. ಹಂತಹಂತವಾಗಿ ತೆರೆಯಲಾಗುತ್ತೆ ಎಂದಿದ್ದಾರೆ. ಒಟ್ನಲ್ಲಿ ತಕ್ಷಣಕ್ಕೆ ಶಾಲೆ-ಕಾಲೇಜು ತೆರೆಯೋದು ಅನಿವಾರ್ಯ ಅನ್ನೋದನ್ನ ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದೆ ಡಾ.ದೇವಿಪ್ರಸಾದ್‌ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ. ಆದ್ರೆ ಸರ್ಕಾರ ನಿರ್ಧಾರ ಏನು ಅನ್ನೋದನ್ನ ಕಾದು ನೋಡ್ಬೇಕು.

ಮಕ್ಕಳ ಹಿತದೃಷ್ಟಿಯಿಂದ, ಅವ್ರ ಭವಿಷ್ಯದ ದೃಷ್ಟಿಯಿಂದ, ಶೈಕ್ಷಣಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ, ಪೋಷಕರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳನ್ನ ಆದಷ್ಟು ಶೀಘ್ರ ತೆರೆಯಲೇಬೇಕು ಅನ್ನೋದು ತಜ್ಞರ ಅಭಿಪ್ರಾಯ. ನೋಡೋಣ ಸರ್ಕಾರದ ನಿರ್ಧಾರ ಏನಾಗಿರುತ್ತೆ ಅನ್ನೋದನ್ನ.

The post ಶಾಲೆ ಆರಂಭಿಸದಿದ್ರೆ ಏನಾಗುತ್ತೆ? ಕ್ಲಾಸ್ ಶುರು ಮಾಡಲು ವ್ಯವಸ್ಥೆ ಹೇಗಿರಬೇಕು? ಇಲ್ಲಿದೆ ತಜ್ಞರ ಸಲಹೆ appeared first on News First Kannada.

Source: newsfirstlive.com

Source link