ಬೆಂಗಳೂರು: ಇಂದು ಇಬ್ಬರು ನೂತನ ಶಾಸಕರ ಪದಗ್ರಹಣ ಕಾರ್ಯಕ್ರಮ ನೆರವೇರಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಕ್ಷೇತ್ರದ ನೂತನ ಕಾಂಗ್ರೆಸ್​​ ಶಾಸಕ ಶರಣು ಸಲಗಾರ್ ಹಾಗೂ ಮಸ್ಕಿ ಬಿಜೆಪಿ ಶಾಸಕ ಬಸನಗೌಡ ತುರುವಿಹಾಳ್​ ಪ್ರಮಾಣವಚನ ಸ್ವೀಕರಿಸಿದ್ರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೊತೆ ಆಗಮಿಸಿದ ಬಸನಗೌಡ ತುರುವಿನಹಾಳ್,  ರೈತರು ಹಾಗೂ ಮಸ್ಕಿ ಪ್ರಜೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇನ್ನು ಶರಣು ಸಲಗಾರ್​ ಅವರು ಬಸವಣ್ಣ ಹಾಗೂ ಬಸವ ಕಲ್ಯಾಣದ ಪ್ರಜೆಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸುವ ಮುನ್ನ ಶರಣು ಸಲಗಾರ್ ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿ ಆಶಿರ್ವಾದ ಪಡೆದರು.

ಹಾಗೇ  ಬಸನಗೌಡ ತುರುವಿಹಾಳ್ ಕೂಡ ಪದಗ್ರಹಣಕ್ಕೂ ಮುನ್ನ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ, ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಭೇಟಿಯಾದ್ರು.

ಬಸನಗೌಡ ಅವರಿಗೆ ಡಿಕೆ ಶಿವಕುಮಾರ್ ಹಾರ ಹಾಕಿ, ಶಾಲು ಹೊದಿಸಿ ಶುಭಹಾರೈಸಿದ್ರು.

The post ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಶರಣು ಸಲಗಾರ್, ಬಸನಗೌಡ ತುರುವಿಹಾಳ್ appeared first on News First Kannada.

Source: newsfirstlive.com

Source link