ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಿಗದಿ ಪಡಿಸಲಾಗಿದ್ದ ಕಾಂಗ್ರೆಸ್​ ಪಕ್ಷದ ಬೆಂಗಳೂರು ಶಾಸಕರು, ಮಾಜಿ ಸಚಿವರ ಸಭೆ ಕುರಿತಂತೆ ಪಕ್ಷದಲ್ಲಿ ಅಪಸ್ವರ ಉಂಟಾಗಿದೆ ಎನ್ನಲಾಗಿದೆ. ಸಭೆ ಕುರಿತಂತೆ ಡಿಕೆಶಿ ಅವರು ನೇರವಾಗಿ ಕರೆ ಮಾಡಿ ಮಾಹಿತಿ ನೀಡಿಲ್ಲ ಎಂಬುವುದು ಶಾಸಕರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ನಡೆಗೆ ಕೆಲ ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಶಾಸಕರು ಹಾಗೂ ಮಾಜಿ ಶಾಸಕರಿಗೆ ನೇರವಾಗಿ ಡಿಕೆ ಶಿವಕುಮಾರ್ ಕರೆ ಮಾಡಿಲ್ಲ. ಬದಲಾಗಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷರ ಮೂಲಕ ಶಾಸಕರಿಗೆ ಅಹ್ವಾನ ಕಳಿಸಿದ್ದಾರೆ ಎಂದು ಕೆಲ ಮುಖಂಡರ ಬೇಸರ ವ್ಯಕ್ತಪಡಿಸಿದರಂತೆ.

ಇದನ್ನೂ ಓದಿ: ‘ನನಗೆ ತಾಕತ್​​ ಇದ್ಯಾ.. ಎಷ್ಟಾದ್ರು ಮಕ್ಕಳು ಮಾಡ್ಕೋಳ್ತೀನಿ’ ಜನಸಂಖ್ಯೆ ನಿಯಂತ್ರಣ ವಿರುದ್ಧ ಜಮೀರ್ ಕೆಂಡ

ಇತ್ತ ಸಭೆ ಕುರಿತಂತೆ ನ್ಯೂಸ್​ಫಸ್ಟ್​​ಗೆ ಪ್ರತಿಕ್ರಿಯೆ ನೀಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು, ಸಭೆ ಕುರಿತಂತೆ ನನಗೆ ಯಾವುದೇ ಆಹ್ವಾನ ಕೊಟ್ಟಿಲ್ಲ. ಆಹ್ವಾನ ಕೊಟ್ಟರೇ ಖಂಡಿತ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದರು. ಈ ಕುರಿತಂತೆ ಡಿಕೆಎಸ್​ ಅವರಿಗೆ ಮಾಧ್ಯಮಗಳು ಪ್ರಶ್ನಿಸಿದ ಸಂದರ್ಭದಲ್ಲಿ, ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ತೆರಳಿಸಿದರು. ಇತ್ತ ಸಭೆ ನಿಗದಿಯಾಗಿದ್ದರೂ, ಆಹ್ವಾನ ಬಂದಿಲ್ಲ ಎಂದಿದ್ದ ಜಮೀರ್ ಅವರು, ಹೈದ್ರಾಬಾದ್​​ಗೆ ತೆರಳಿದರು. ಇನ್ನು ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಗಿಯಾಗುತ್ತಿರುವ ಕಾರಣ, ಸಭೆ ಬಗ್ಗೆ ಕಾಂಗ್ರೆಸ್​ ವಲಯದಲ್ಲೇ ಭಾರೀ ಕುತೂಹಲ ಮೂಡಿತ್ತು.

The post ಶಾಸಕರೊಂದಿಗೆ ಡಿಕೆಎಸ್​​ ಸಭೆ – ಆಹ್ವಾನ ಕೊಟ್ಟಿಲ್ಲ ಅಂತಾ ಹೈದರಾಬಾದ್​​ಗೆ ಹಾರಿದ ಜಮೀರ್​ appeared first on News First Kannada.

Source: newsfirstlive.com

Source link