ದಾವಣಗೆರೆ: ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರೇಣುಕಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ವಿರುದ್ಧ ಕಿಡಿಕಾರಿದರು.

ವಿಜಯಪುರದ ಶಾಸಕ ಫೋನ್ ಮಾಡಿ ನಾನೇ ಮುಖ್ಯಮಂತ್ರಿ ಸಹಕಾರ ಕೊಡಿ ಎಂದಿದ್ದಾರೆ. ವಿಜಯಪುರ ಶಾಸಕ ಕೆಲ ಎಮ್ಎಲ್ಎಗಳಿಗೆ ಫೋನ್ ಮಾಡಿದ್ದಾರೆ. ನಾನೇ ಮುಂದಿನ ಸಿಎಂ ನನಗೆ ಬೆಂಬಲ ನೀಡಿ ಎಂದಿದ್ದಾರೆ. ಹೈಕಮಾಂಡ್​ನಿಂದ ಸ್ಪಷ್ಟ ಸೂಚನೆ ಬಂದಿದ್ದರೂ ಈ ರೀತಿ ಮಾತನಾಡ್ತಾರೆ ಎಂದು ಗುಡುಗಿದರು.

ಜೂನ್ 17ಕ್ಕೆ ಅರುಣ್ ಸಿಂಗ್ ಭೇಟಿ
ಕೆಲವರು ಸಿಎಂ ಆಗಬೇಕು ಎಂದು ಈಗಾಗಲೇ ಸೂಟುಬೂಟು ಹೊಲೆಸಿದ್ದಾರೆ. ಜೂನ್​ 17ಕ್ಕೆ ಅರುಣ್ ಸಿಂಗ್ ಅವರನ್ನ ರೇಣುಕಾಚಾರ್ಯ ತಂಡ ಭೇಟಿ ಮಾಡಲಿದೆ. ನಾನು ಅರುಣ್ ಸಿಂಗ್​ಗೆ ಕರೆ ಮಾಡಿದ್ದೆ. ಇಂದು ಸಂಜೆ 4.30ಕ್ಕೆ ಭೇಟಿಯಾಗಲು ಬನ್ನಿ ಎಂದಿದ್ದರು. ಆದರೆ ನಾನು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದೀನಿ ಬರಲು ಆಗಲ್ಲ ಅಂದೆ. ಇದೇ ತಿಂಗಳು 17ಕ್ಕೆ ಸಮಯ ಕೇಳಿದ್ದೀನಿ, ಕೋಡ್ತೀನಿ ಎಂದಿದ್ದಾರೆ.

ಕೆಲವ್ರು ಅರುಣ್ ಸಿಂಗ್ ರಾಜ್ಯಕ್ಕೆ ಬಂದ್ರು ದೆಹಲಿಗೆ ಹೋಗಿದ್ದಾರೆ. ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ರಾಷ್ಟ್ರೀಯ ನಾಯಕರು ಹೇಳಿದ ಮೇಲೂ ಬಹಿರಂಗವಾಗಿ ಭಿನ್ನಮತ ನಡೆಸುತ್ತಾರೆ. ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

The post ‘ಶಾಸಕರೊಬ್ಬರು ಫೋನ್ ಮಾಡಿ ನಾನೇ CM ಸಹಕಾರ ಕೊಡಿ ಎಂದಿದ್ದಾರೆ’ ರೇಣುಕಾಚಾರ್ಯ ಬಾಂಬ್ appeared first on News First Kannada.

Source: newsfirstlive.com

Source link