ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಹೋದರ ಚೆನ್ನರಾಜ ಹಟ್ಟಿಹೊಳಿ ಸಂತೋಷ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು | MLA Laxmi Hebbalkar and MLC Chennaraj Hattiholi pay homage to Santosh Patil at Badasa ARB


ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ (Santosh Patil) ಅವರ ಅಂತ್ಯ ಸಂಸ್ಕಾರ ಗುರುವಾರದಂದು ಬೆಳಗಾವಿ ತಾಲ್ಲೂಕಿನಲ್ಲಿರುವ ಅವರ ಸ್ವಗ್ರಾಮ ಬಡಸನಲ್ಲಿ (Badasa)ನೆರವೇರಿತು. ಅಂಬ್ಯಲೆನ್ಸ್ ನಲ್ಲಿ ಅವರ ಪಾರ್ಥೀವ ಶರೀರ ಊರಿಗೆ ಆಗಮಿಸಿದಾದ ಸಂಬಂಧಿಕರ ಆಕ್ರಂದನ ವಿವರಣೆಗೆ ಸಿಗಲಾರದು. ಬಡಸ ಗ್ರಾಮದ ಸಮಸ್ತ ನಾಗರಿಕರಲ್ಲದೆ ಪಕ್ಕದ ಊರುಗಳಿಂದಲೂ ಜನರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಮತ್ತು ಅವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ (Chennaraj Hattiholi) ಅವರು ಸಂತೋಷ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಲಕ್ಷ್ಮಿ ಅವರ ಸಮ್ಮುಖದಲ್ಲಿ ಸಂತೋಷ ಅವರ ಸಂಬಂಧಿಕರ ನಡುವೆ ಜಗಳ ನಡೆದಿದ್ದು ಕೆಟ್ಟದೆನಿಸಿತು. ಜಗಳ ಕಾಯುತ್ತಿದ್ದ ಜನರನ್ನು ಸಮಾಧಾನಪಡಿಸಿದವರಲ್ಲಿ ಶಾಸಕಿ ಸಹ ಒಬ್ಬರು.

ಸಂತೋಷ ಸಾವಿಗೆ ಸಂಬಂಧಿಸಿದಂತೆ ಗುರುವಾರ ಬೆಂಗಳೂರಲ್ಲಿ ಕಾಂಗ್ರೆಸ್ ನಡೆಸಿದ ಬೃಹತ್ ಪ್ರತಿಭಟನೆ ಯಶ ಕಂಡಿದೆ ಅಂತಲೇ ಹೇಳಬೇಕು. ಯಾಕೆಂದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ಗುರುವಾರ ಸಾಯಂಕಾಲ ರಾಜೀನಾಮೆ ಸಲ್ಲಿಸುವ ಘೋಷಣೆ ಮಾಡಿದ್ದಾರೆ.

ನಿಮಗೆ ಗೊತ್ತಿರಬಹುದು, ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಂದೀಪ್ ಸುರ್ಜೆವಾಲಾ, ಎಮ್ ಬಿ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಇನ್ನೂ ಕೆಲವರು ಬುಧವಾರದಂದು ಬಡಸ ಗ್ರಾಮಕ್ಕೆ ಭೇಟಿ ನೀಡಿ ಸಂತೋಷ ಪಾಟೀಲ ಅವರ ತಾಯಿ, ಪತ್ನಿ ಮತ್ತು ಇತರ ಸಂಬಂಧಿಕರನ್ನು ಸಂತೈಸಿದ್ದರು.

ಕಾಂಗ್ರೆಸ್ ಪಕ್ಷವು ಸಂತೋಷ್ ಕುಟುಂಬಕ್ಕೆ ರೂ. 11 ಲಕ್ಷ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದೆ. ಹಾಗೆಯೇ, ಸರ್ಕಾರವು ಸಂತೋಷ ಅವರ ಪತ್ನಿಗೆ (ಪದವೀಧರೆಯಾಗಿದ್ದಾರೆ) ಸರ್ಕಾರೀ ಕೆಲಸ ಕೊಡಬೇಕು, ಸಂತೋಷ ಅವರ 4 ಕೋಟಿ ರೂ. ಗಳ ಬಿಲ್ ರಿಲೀಸ್ ಮಾಡುವ ಜೊತೆಗೆ ರೂ. 1 ಕೋಟಿ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ.

TV9 Kannada


Leave a Reply

Your email address will not be published.