ಬಳ್ಳಾರಿ: ಹೂವಿನ ಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ ಶಿವಾಜಿ ನಾಯ್ಕ್​​​ ಗೂಂಡಾಗಿರಿ ಆರೋಪ ಪ್ರಕರಣದಲ್ಲಿ ಅರಸೀಕೆರೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಪಿ.ಟಿ ಶಿವಾಜಿ ನಾಯ್ಕ್​ ಮತ್ತು ಹಲ್ಲೆಗೊಳಗಾಗಿದ್ದ ಶರಣಾ ನಾಯ್ಕ್​​​ ಘಟನೆ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದರು.

ಹೀಗಾಗಿ, ಪೊಲೀಸರು ಗೂಂಡಾಗಿರಿ ಮಾಡಿದ ಪಿಟಿ ಶಿವಾಜಿ ನಾಯ್ಕ್​​, ಪತ್ನಿ ಕುಮಾರಿ ಭಾಯಿ, ಮಗ ರಾಹುಲ್​ನನ್ನ ಅರೆಸ್ಟ್​ ಮಾಡಿದ್ದಾರೆ. ಹಾಗೇ ಹಲ್ಲೆಗೊಳಗಾದ ಜಗದೀಶ್, ಪತ್ನಿ ಶ್ರೀದೇವಿ, ಸಹೋದರ ಶಿವಕುಮಾರ್ ಎಂಬುವವರನ್ನು ಕೂಡ ಬಂಧಿಸಿದ್ದಾರೆ. ಎರಡು ಕಡೆಯವರನ್ನು ಬಂಧಿಸಿ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆಯಷ್ಟೇ ಜೈಲಿನಿಂದ ಬೇಲ್​ ಮೇಲೆ ಹೊರಬಂದಿದ್ದ ಶಿವಾಜಿ ನಾಯ್ಕ್, ನನ್ನ ಮೇಲೆಯೇ ಕೇಸ್ ಮಾಡ್ತೀಯಾ? ಎಂದು ಶರಣಾ ನಾಯ್ಕ್​​ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಹಲ್ಲೆಗೊಳಗಾದ ಕುಟುಂಬ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಠಾಣೆಯಲ್ಲೇ ಇಡೀ ಕುಟುಂಬ ವಿಷ ಕುಡಿದು ಆತ್ಮಹತ್ಯೆಗೆ ಮುಂದಾದಾಗ ಪೊಲೀಸರು ತಡೆದಿದ್ದರು.

ಇತ್ತೀಚೆಗೆ ಮನೆ ಜಾಗದ ಸಲುವಾಗಿ ಕಬ್ಬಿಣದ ಹಾರೆಯಿಂದ ಪಿ.ಟಿ ಶಿವಾಜಿ, ಶರಣ ನಾಯ್ಕನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ಈ ಸಂಬಂಧ ಶಿವಾಜಿ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿತ್ತು.

The post ಶಾಸಕ ಪಿಟಿ ಪರಮೇಶ್ವರ್​​ ನಾಯ್ಕ್​​ ಸೋದರನ ಗೂಂಡಾಗಿರಿ ಪ್ರಕರಣ -6 ಮಂದಿ ಬಂಧನ appeared first on News First Kannada.

Source: newsfirstlive.com

Source link