ದಾವಣಗೆರೆ: ಮಾಜಿ ಸಚಿವ, ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಸೋದರ ಶಿವಾಜಿ ನಾಯ್ಕ್ ಹಲ್ಲೆಗೆ ಸಂಬಂಧಿಸಿದಂತೆ 6 ಜನರನ್ನು ಅರಿಸೀಕೆರೆ ಪೊಲೀಸರು ಬಂಧಿಸಿದ್ದಾರೆ.

ಪಿಟಿಪಿ ತಮ್ಮ ಶಿವಾಜಿ ನಾಯ್ಕ್ ಆತನ ಪತ್ನಿ ಕುಮಾರಿ ಭಾಯಿ, ಮಗ ರಾಹುಲ್ ಬಂಧನವಾಗಿದೆ. ಇತ್ತ ಹಲ್ಲೆಗೊಳಗಾದ ಜಗದೀಶ್, ಪತ್ನಿ ಶ್ರೀದೇವಿ, ಜಗದೀಶ್ ಅಣ್ಣ ಶಿವಕುಮಾರ್ ಬಂಧಿತರಾಗಿದ್ದಾರೆ. ದೂರು ಪ್ರತಿ ದೂರು ದಾಖಲಾದ ಹಿನ್ನೆಲೆಯಲ್ಲಿ ಎರಡು ಕಡೆಯವರನ್ನೂ ಬಂಧಿಸಲಾಗಿದೆ. ಇದನ್ನೂ ಓದಿ: ಶಾಸಕ ಪರಮೇಶ್ವರ್ ನಾಯ್ಕ್ ಸೋದರನಿಂದ ವೃದ್ಧನ ಮೇಲೆ ಹಲ್ಲೆಗೆ ಯತ್ನ 

ನಿನ್ನೆ ದೂರು ಪ್ರತಿ ದೂರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 6 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಸೋದರ ಶಿವಾಜಿ ನಾಯ್ಕ್ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಶರಣ್ ನಾಯ್ಕ್ ಎನ್ನುವ ವೃದ್ಧನ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಶಿವಾಜಿ ನಾಯ್ಕ್ ಮನೆಯ ಪಕ್ಕದಲ್ಲಿಯೇ ಶರಣ್ ನಾಯ್ಕ್ ವಾಸವಾಗಿದ್ದಾರೆ. ಶರಣ್ ನಾಯ್ಕ್ ಮತ್ತು ಶಿವಾಜಿ ನಾಯ್ಕ್ ಮಧ್ಯೆ ಮನೆಯ ಜಾಗದ ವಿಚಾರವಾಗಿ ವಿವಾದ ಇತ್ತು. ಈ ಹಿಂದೆಯೂ ಹಲವು ಬಾರಿ ಎರಡೂ ಕುಟುಂಬಗಳ ಗಲಾಟೆ ನಡೆದಿದೆ.

ಇದೇ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ವೇಳೆ ಶಿವಾಜಿ ನಾಯ್ಕ್ ಕಬ್ಬಿಣದ ಹಾರೆಯಿಂದ ಹಲ್ಲೆಗೆ ಯತ್ನ ನಡೆಸಿದ್ದು, ತಳ್ಳಾಟ ನೂಕಾಟ ನಡೆದಿದೆ. ಸದ್ಯ ವೃದ್ಧನನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮತ್ತೇ ನಿನ್ನೇ ಇದೇ ವಿಚಾರವಾಗಿ ಗಲಾಟೆಯಾಗಿದೆ ನಂತರ 2 ಮನೆಯಿಂದ 6 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

The post ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ತಮ್ಮ ಶಿವಾಜಿ ನಾಯ್ಕ್ ಅರೆಸ್ಟ್ appeared first on Public TV.

Source: publictv.in

Source link