ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರು ಧರೆಗೆ ಉರುಳಿದ ಘಟನೆ ತಾಲೂಕಿನ ಹೆಚ್.ಕ್ರಾಸ್ ಬಳಿಯ ಉರಟ ಅಗ್ರಹಾರದಲ್ಲಿ ನಡೆದಿದೆ.

ಕಾರಿನಲ್ಲಿದ್ದ ಕೋಲಾರ ಶಾಸಕ ಶ್ರೀನಿವಾಸಗೌಡರ ಪುತ್ರ ಮಂಜುನಾಥ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಎದುರಿಗೆ ಬಂದ ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಈ ಅವಘಡ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದೆ.

ವಿಷಯ ತಿಳಿದ ಕೂಡಲೇ ಶಾಸಕ ಶ್ರೀನಿವಾಸಗೌಡ ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೇ ಗಾಯಗೊಂಡಿರುವ ಮಗನಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೇಮಗಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

The post ಶಾಸಕ ಶ್ರೀನಿವಾಸಗೌಡರ ಮಗ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ appeared first on News First Kannada.

Source: newsfirstlive.com

Source link