ಮೈಸೂರು: ಶಾಸಕ ಸಾ.ರಾ.ಮಹೇಶ್ ವಿರುದ್ಧ ಅಕ್ರಮ ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಸುದ್ದಿಗೋಷ್ಠಿಯಲ್ಲಿ ಭೂಮಾಲೀಕ ಗಣಪತಿ ರೆಡ್ಡಿ, ಸಾಮಾಜಿಕ ಕಾರ್ಯಕರ್ತ ಗಂಗಾರಾಜು, ಭೂಕಬಳಿಕೆಗೆ ಸಂಬಂಧಿಸಿದ್ದು ಎನ್ನಲಾದ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಭೂ ಮಾಲೀಕನಿಗೆ ಸಾ.ರಾ.ಮಹೇಶ್ ಧಮಕಿ ಹಾಕಿದ್ದಾರೆ ಎನ್ನಲಾದ ಆಡಿಯೋವನ್ನೂ ಬಿಡುಗಡೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​ಟಿಐ ಕಾರ್ಯಕರ್ತ ಗಂಗಾರಾಜು.. ಶಾಸಕ ಸಾ.ರಾ.ಮಹೇಶ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮೈಸೂರು ತಾಲೂಕು ಕೇರಗಳ್ಳಿ ಸರ್ವೇ ನಂ.115ರ ಭೂಮಿ ವಿಚಾರ ವಿವಾದದಿಂದ‌ ಕೂಡಿದೆ. ಭೌಗೋಳಿಕವಾಗಿ 129 ಎಕರೆ ಜಾಗವಿದೆ. ಆದರೆ 191 ಎಕರೆಗೆ ಆರ್.ಟಿ.ಸಿ. ಮಾಡಿಕೊಟ್ಟಿದ್ದಾರೆ.  ಹೆಚ್ಚುವರಿಯಾಗಿ 61 ಎಕರೆಗೆ ಭೂಮಿ ನೀಡಲಾಗಿದೆ. ಆ ಜಾಗ ನನ್ನದು ಅಂತ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ. ಅದರ ಜತೆಗೆ 500 ಎಕರೆಗೆ ಜಾಗದಲ್ಲಿ ಲೇಔಟ್ ಮಾಡಿದ್ದೇನೆ ಅಂತ ಹೇಳಿದ್ದಾರೆ. ಆದರೆ ಅಷ್ಟು ಪ್ರಮಾಣದ ಆಸ್ತಿಯನ್ನು ಸಾ.ರಾ.ಮಹೇಶ್ ತಮ್ಮ ನಾಮಪತ್ರದ ಅಫಿಡೆವಿಟ್‌ನಲ್ಲಿ ತೋರಿಸಿಕೊಂಡಿಲ್ಲ. ನೀವು ದಾಖಲೆ ತೆಗೆದುಕೊಂಡು ಬನ್ನಿ ಅಂತ ಧಮ್ಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ 5 ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.

The post ಶಾಸಕ ಸಾ.ರಾ.ಮಹೇಶ್ ವಿರುದ್ಧ ಭೂ ಕಬಳಿಕೆ ಆರೋಪ; ದಾಖಲೆ ಬಿಡುಗಡೆ appeared first on News First Kannada.

Source: newsfirstlive.com

Source link