ಶಾಸಕ ಸಿ.ಎಸ್​​ ಪುಟ್ಟರಾಜು ಮನೆ, ಕಾರಿನ ಮೇಲೆ ತಡರಾತ್ರಿ ಕಲ್ಲೆಸೆದ ಕಿಡಿಗೇಡಿಗಳು

ಮಂಡ್ಯ: ನಿನ್ನೆ ಮಧ್ಯರಾತ್ರಿ ಜಿಲ್ಲೆಯ ಪಾಂಡವಪುರದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು, ಶಾಸಕ ಸಿಎಸ್​​​ ಪುಟ್ಟರಾಜು ಮನೆ ಸೇರಿದಂತೆ ಹಲವು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದ ಪರಿಣಾಮ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ. ಅಲ್ಲದೇ ನಾಲ್ಕು ಕಾರು, ಒಂದು ಖಾಸಗಿ ಬಸ್, ಹೋಂಡಾ ಶೋರೂಂ ಮೇಲು ಪುಂಡರು ಕಲ್ಲು ತೂರಾಟ ನಡೆಸಿದ್ದಾರೆ.

ದುಷ್ಕರ್ಮಿಗಳು ಬೈಕ್​ ಮೂಲಕ ಬಂದು ಕಲ್ಲೂ ತೂರಾಟ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಮೂರು ಕಾರುಗಳ ಗಾಜು ಡ್ಯಾಮೇಜ್​​ ಆಗಿದೆ. ಪಾಂಡವಪುರ ಪಟ್ಟಣ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ.

News First Live Kannada

Leave a comment

Your email address will not be published. Required fields are marked *