– ಶ್ರೀಗಳನ್ನು ಸ್ವಾಗತಿಸಿದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶಿಕಾರಿಪುರದ ನಿವಾಸಕ್ಕೆ ಶ್ರೀಶೈಲ ಪೀಠದ ಪೀಠಾಧಿಪತಿಗಳಾದ ಶ್ರೀ ಚನ್ನ ಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಭೇಟಿ ನೀಡಿದ್ದರು. ಈ ವೇಳೆ ತಮ್ಮ ನಿವಾಸಕ್ಕೆ ಶ್ರೀಗಳನ್ನು ಬರಮಾಡಿಕೊಂಡ ಸಿಎಂ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ತಮ್ಮ ಪತ್ನಿ ಹಾಗೂ ಪುತ್ರರ ಸಮೇತ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಶ್ರೀಶೈಲ ಪೀಠದ ಪೀಠಾಧಿಪತಿಗಳ ಪಾದಪೂಜೆ ನೆರವೇರಿಸಿದ ಸಂಸದ ಬಿ.ವೈ.ರಾಘವೇಂದ್ರ, ಪಾದಪೂಜೆಯ ನಂತರ ಯಡಿಯೂರಪ್ಪ ಅವರ ಕುಟುಂಬಸ್ಥರಿಗೆ ಶ್ರೀಗಳು ಆಶೀರ್ವಾದ ಮಾಡಿದರು. ದೇಶದ ಪಂಚಪೀಠಗಳಲ್ಲಿ ಒಂದಾದ ಆಂಧ್ರದ ಶ್ರೀಶೈಲ ಪೀಠ ಅಪಾರ ಭಕ್ತರನ್ನು ಹೊಂದಿದೆ. ಹಾಲಿ ರಾಜಕೀಯ ಏರುಪೇರಿನಲ್ಲಿ ಶ್ರೀಶೈಲ ಶ್ರೀಗಳ ಭೇಟಿ ಹಲವು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಶ್ರೀಶೈಲ ಶ್ರೀಗಳ ಭೇಟಿಯ ವೇಳೆ ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು. ಕಳೆದ ವಾರ ರಂಭಾಪುರಿ ಶ್ರೀಗಳು ಭೇಟಿ ನೀಡಿ ಆಶೀರ್ವದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

The post ಶಿಕಾರಿಪುರದ ಸಿಎಂ ನಿವಾಸಕ್ಕೆ ಶ್ರೀಶೈಲ ಶ್ರೀಗಳ ಭೇಟಿ appeared first on Public TV.

Source: publictv.in

Source link