ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಬಸವರಾಜ ಹೊರಟ್ಟಿ; ಮಾಜಿ ಸಭಾಪತಿ ವಿರುದ್ಧ ಆರೋಪಗಳ ಸರಮಾಲೆ | M Bharat has accused Basavaraj Horatti if there is injustice in the education department


ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಬಸವರಾಜ ಹೊರಟ್ಟಿ; ಮಾಜಿ ಸಭಾಪತಿ ವಿರುದ್ಧ ಆರೋಪಗಳ ಸರಮಾಲೆ

ಬಸವರಾಜ್ ಹೊರಟ್ಟಿ

ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ.

ಧಾರವಾಡ: ಮಾಜಿ ಸಭಾಪತಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿ (Basavaraj Horatti) ವಿರುದ್ಧ ಆರೋಪಗಳು ಕೇಳಿಬಂದಿವೆ. ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ಇಂದು (ಜೂನ್ 11) ಸುದ್ದಿಗೋಷ್ಠಿ ನಡೆಸಿ, 1980ರಲ್ಲಿ ಎಂಎಲ್ಸಿ ಆಗಿದ್ದರು. 19 ವರ್ಷ ಎಂಎಲ್​ಸಿ ವೇತನ, ಭತ್ಯೆ ಜೊತೆಗೆ ಶಿಕ್ಷಕರ (Teachers) ವೇತನವನ್ನೂ ಪಡೆದಿದ್ದಾರೆ. 18 ವರ್ಷ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಮತ್ತೋರ್ವ ಶಿಕ್ಷಕನಿಗೆ ನೌಕರಿ ಸಿಗುವುದನ್ನು ತಪ್ಪಿಸಿದರು. ಸಚಿವರಾದ ಬಳಿಕ ಲ್ಯಾಮಿಂಗ್ಟನ್ ಶಾಲೆಗೆ ಶಾಲಾ ಸುಧಾರಣಾ ಸಮಿತಿ ಮಾಡಿಕೊಂಡಿದ್ದರು. ಆಗ ಪಾಲಿಕೆ ಆಯುಕ್ತರು ಸಮಿತಿ ಮಾಡಲು ಬರೋಲ್ಲ ಅಂತಾ ಆಗಲೇ ಹೇಳಿದ್ದರು. ಆಗ ಶಾಲಾ ಸುಧಾರಣಾ ಸಮಿತಿ ವಿಸರ್ಜನೆ ಅಂತಾ ಹೇಳಿಕೊಂಡಿದ್ದರು. ಆದರೆ ಇಂದಿಗೂ ಆ ಶಾಲೆಗೆ ನಾನೇ ಚೇರ್ಮನ್ ಅಂತಾ ಹೇಳಿಕೊಳ್ಳುತ್ತಾರೆ ಅಂತ ಆರೋಪಿಸಿದೆ.

ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ. ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಅವರಿಗೆ ಆಯೋಗ ನೋಟಿಸ್ ಸಹ ನೀಡಿದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ತಮ್ಮ ಹಿಡಿತ ಸಾಧಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಹೊರಟ್ಟಿ ಹೇಳಿದರು.

TV9 Kannada


Leave a Reply

Your email address will not be published.