ಹಾವೇರಿ: ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಸಾಂಕ್ರಾಮಿಕವನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲದೇ ಕೆಲವು ಸಚಿವರು ವೈಯಕ್ತಿಕ ಹಣವನ್ನು ಖರ್ಚು ಮಾಡಿ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಇತ್ತ ಶಿಗ್ಗಾವಿ ಜನರ ಋಣ ತೀರಿಸಲು ಮುಂದಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಮನೆಯ ಮುಂದಿರುವ ಸಭಾಭವನದ ಜಾಗವನ್ನೇ ಕೊರೊನಾ ಸೆಂಟರ್​​ನ್ನಾಗಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿರುವ ತಮ್ಮ ಮನೆಯ ಮುಂದಿನ ಜಾಗದಲ್ಲೇ 50 ಹಾಸಿಗೆಗಳ ಕೊರೊನಾ ಸೆಂಟರ್​ ನಿರ್ಮಿಸಿದ್ದಾರೆ. ನಿನ್ನೆ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ವಿಷಯವನ್ನ ಬಹಿರಂಗಪಡಿಸಿದ್ದಾರೆ. ಜೊತೆಗೆ ಉಸಿರಾಟದ ಸಮಸ್ಯೆಯಿಂದ ಬಳಲುವ ಸೋಂಕಿತರಿಗೆ 25 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಬೊಮ್ಮಾಯಿಯವರು ಆಸ್ಪತ್ರೆಗೆ ಹಸ್ತಾಂತರ ಮಾಡಿದ್ದಾರೆ. ಸಚಿವರ ಈ ಜನಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

The post ಶಿಗ್ಗಾವಿ ಜನರ ಋಣ ತೀರಿಸಲು ನಿಂತ ಬೊಮ್ಮಾಯಿ.. ಮನೆ ಮುಂದೆಯೇ ನಿರ್ಮಾಣವಾಯ್ತು ಕೊರೊನಾ ಸೆಂಟರ್ appeared first on News First Kannada.

Source: newsfirstlive.com

Source link