ಶಿಫ್ಟ್​​ ಮುಗಿಯಿತೆಂದು ಎಮರ್ಜೆನ್ಸಿ ಲ್ಯಾಂಡ್​ ಆದ ವಿಮಾನವನ್ನು ಚಲಾಯಿಸಲು ನಿರಾಕರಿಸಿದ ಪೈಲಟ್​ | Pilot refused to take off the flight after emergency landing because of shift ended


ಶಿಫ್ಟ್​​ ಮುಗಿಯಿತೆಂದು ಎಮರ್ಜೆನ್ಸಿ ಲ್ಯಾಂಡ್​ ಆದ ವಿಮಾನವನ್ನು ಚಲಾಯಿಸಲು ನಿರಾಕರಿಸಿದ ಪೈಲಟ್​

ಪಾಕಿಸ್ತಾನ ವಿಮಾನ

ಶಿಫ್ಟ್​​ ಅವಧಿ ಮುಗಿದ ಮೇಲೆ ಸಾಮಾನ್ಯವಾಗಿ ಕೆಲಸ ಮಾಡಲು ಯಾರಿಗೂ ಮನಸಿರುವುದಿಲ್ಲ. ಆದರೆ ಕೆಲವೊಮ್ಮೆ ಇತರರ ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡುವ ಅನಿವಾರ್ಯತೆ ಇರುತ್ತದೆ. ಅಂತಹ ಉದ್ಯೋಗಗಳಲ್ಲಿ ಪ್ರಯಾಣಿಕರ ಸುರಕ್ಷತೆ ಕಾಪಾಡುವ ಪೈಲಟ್ (Pilot)  ​ಗಳ ಕೆಲಸವೂ ಒಂದು. ಇತ್ತೀಚೆಗೆ ಪಾಕಿಸ್ತಾನದ ಪೈಲಟ್​ ಒಬ್ಬ ತನ್ನ ಶಿಪ್ಟ್(Shift)​ ಮುಗಿಯಿತು ಎಂದು ಎಮೆರ್ಜೆನ್ಸಿ ಲ್ಯಾಂಡ್ (Emergency Landing)​ ಆದ ವಿಮಾನವನ್ನು ಚಲಾಯಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದೀಗ ಈ ಸುದ್ದಿ ಜಗತ್ತಿನಾದ್ಯಂತ ವೈರಲ್​ ಆಗಿದೆ.

ರಿಯಾದ್​ನಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ಗೆ ಹೊರಟಿದ್ದ ಪಾಕಿಸ್ತಾನ ಏರ್​ಲೈನ್ಸ್​​ನ (Pakistan International Airlines)  PK-9754 ​ ವಿಮಾನ ಸೌದಿ ಅರೇಬಿಯಾದ ದಮ್ಮಂನಲ್ಲಿ ಹವಾಮಾನ ವೈಪರಿತ್ಯದಿಂದ ತುರ್ತು ಭೂ ಸ್ಷರ್ಶ ಮಾಡಿತ್ತು. ವಿಮಾನವನ್ನು ಪೈಲೆಟ್​ ಸುರಕ್ಷಿತವಾಗಿ ಲ್ಯಾಂಡ್​ ಮಾಡಿದ್ದನು. ನಂತರ ಮತ್ತೆ ಪ್ರಯಾಣವನ್ನು ಆರಂಭಿಸುವ ಹೊತ್ತಿನಲ್ಲಿ ಪೈಲಟ್​ ನನ್ನ ಶಿಪ್ಟ್​ ಮುಗಿದಿದೆ ಎಂದು ವಿಮಾನವನ್ನು ಮುಂದೆ ತೆಗೆದುಕೊಂಡು ಹೋಗಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಗಲಾಟೆ  ಎಬ್ಬಿಸಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಏರ್​ಪೋರ್ಟ್​ ಸೆಕ್ಯುರಿಟೊ ಸ್ಥಳಕ್ಕಾಗಮಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪ್ರಯಾಣಿಕರಿಗೆ ಹೊಟೇಲ್​ವೊಂದರಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.

ಘಟನೆಯ ಬಳಿಕ ಪಾಕಿಸ್ತಾನ ಏರ್​ಲೈನ್ಸ್​ ಬದಲಿ ಪೈಲಟ್​ಅನ್ನು ವ್ಯವಸ್ಥೆ ಮಾಡುವುದಾಗ ಹೇಳಿತ್ತು. ಆದರೆ ಅದು ಸಾಧ್ಯವಾಗದೆ, ಅಂತಿಮವಾಗಿ ಬೇರೆ ವಿಮಾನದ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಪಾಕಿಸ್ತಾನಿದ ಪೈಲಟ್​ ಒಬ್ಬರು ನಕಲಿಪ್ರಮಾಣಪತ್ರ ನೀಡಿ ಸುದ್ದಿಯಾಗಿದ್ದರು. ಇದೀಗ ಶಿಪ್ಟ್​ ವಿಷಯದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.

TV9 Kannada


Leave a Reply

Your email address will not be published. Required fields are marked *