ಕೊರೊನಾದಿಂದ ಐಪಿಎಲ್​​ಗೆ ಬ್ರೇಕ್​ ಸಿಗುತ್ತಿದ್ದಂತೆ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿ, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಕುಟುಂಬ ಜೊತೆಗೆ ಶಿಮ್ಲಾದಲ್ಲಿ ಕಾಲ ಕಳೆಯುತ್ತಿರುವ ಧೋನಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನ ಸವಿಯುತ್ತಿದ್ದಾರೆ. ಕೊರೊನಾ ಪ್ರಕರಣಗಳು ಸಂಪೂರ್ಣ ಇಳಿಮುಖಗೊಂಡಿರುವ ಹಿನ್ನೆಲೆ, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಪ್ರವಾಸೋದ್ಯಮವನ್ನ ಪುನಾರಂಭಿಸಲಾಗಿದೆ. ಹೀಗಾಗಿ ಪತ್ನಿ ಸಾಕ್ಷಿ, ಮಗಳು ಝಿವಾ ಸೇರಿದಂತೆ ಸಂಬಂಧಿಕರೊಂದಿಗೆ ಮಾಹಿ ಶಿಮ್ಲಾ ತಲುಪಿದ್ದಾರೆ. ಧೋನಿ ಜತೆಗೆ 12 ಮಂದಿ ಕುಟುಂಬ ಸದಸ್ಯರು, ಶಿಮ್ಲಾದಲ್ಲಿ ತಂಗಿದ್ದು, ಕೆಲ ದಿನಗಳ ಕಾಲ ವಿವಿಧ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. 2018ರಲ್ಲಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮೊದಲ ಬಾರಿಗೆ ಶಿಮ್ಲಾಗೆ ತೆರಳಿದ್ದ ಧೋನಿ, ಇದೀಗ 2ನೇ ಬಾರಿಗೆ ಭೇಟಿ ಕೊಟ್ಟಿದ್ದಾರೆ. ಕೋವಿಡ್​ 2ನೇ ಅಲೆ ಕಾರಣ ಲಾಕ್​​ಡೌನ್​​ನಿಂದಾಗಿ ಇಷ್ಟು ದಿನ ರಾಂಚಿಯಲ್ಲೇ ತಂಗಿದ್ದ ಧೋನಿ, ಅನ್​​ಲಾಕ್​ ಪ್ರಕ್ರಿಯೆ ಆರಂಭವಾಗ್ತಿದ್ದಂತೆ, ಪ್ರವಾಸ ಕೈಗೊಂಡಿದ್ದಾರೆ.

 

The post ಶಿಮ್ಲಾದಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿಯ ಸೂಪರ್ ಸವಾರಿ..! appeared first on News First Kannada.

Source: newsfirstlive.com

Source link