ಮೈಸೂರು: ಪಾಲಿಕೆ ಕಮಿಷನರ್ ಹಾಗೂ ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ ಶಿಲ್ಪಾನಾಗ್ ಪರ ಮೈಸೂರು ಕಾರ್ಪೋರೇಟರ್‌ಗಳು,‌ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ಬೆಂಬಲ ಸೂಚಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಬ್ಯಾನರ್​ನಡಿ ಪ್ರತಿಭಟನೆ ನಡೆಸುತ್ತಿದ್ದು ಆಯುಕ್ತರನ್ನ ಉಳಿಸಿಕೊಳ್ಳಲು ಒಕ್ಕೊರಲಿನಿಂದ ಬೀದಿಗಿಳಿದಿದ್ದಾರೆ. ಹಂಗಾಮಿ ಮೇಯರ್ ಅನ್ವರ್ ಬೇಗ್ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಎಲ್ಲಾ 65 ವಾರ್ಡ್ ಸದಸ್ಯರೂ ಭಾಗಿಯಾಗಿದ್ದಾರೆ. ಪೌರಕಾರ್ಮಿಕರು ಸಮವಸ್ತ್ರ ತಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡು ಡಿಸಿ ತೊಲಗಲಿ, ಮೈಸೂರು ಉಳಿಸಿ ಎಂದು ಘೋಷಣೆ ಕೂಗಿದ್ದಾರೆ.

The post ಶಿಲ್ಪಾನಾಗ್ ಪರ ನಿಂತ ಮೈಸೂರು ಕಾರ್ಪೋರೇಟರ್, ಪಾಲಿಕೆ ಸಿಬ್ಬಂದಿ.. ಡಿಸಿ ವಿರುದ್ಧ ಪ್ರತಿಭಟನೆ appeared first on News First Kannada.

Source: newsfirstlive.com

Source link