ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಹಾಗೂ ಮಕ್ಕಳಾದ ವಿಯಾನ್ ಮತ್ತು ಸಮಿಷಾಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಕುರಿತು ಟ್ವಿಟರ್​ನಲ್ಲಿ ಶಿಲ್ಪಾಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ತಮ್ಮ ಫ್ಯಾನ್ಸ್​ಗೆ ಈ ವಿಚಾರವಾಗಿ ಮಾಹಿತಿ ನೀಡಿರುವ ಶಿಲ್ಪಾಶೆಟ್ಟಿ.. ನನ್ನ ಪತಿ ಹಾಗೂ ಮಕ್ಕಳು ಎಲ್ಲರಿಗೂ ಕೋವಿಡ್ 19 ಪಾಸಿಟಿವ್ ಆಗಿದೆ. ನಮ್ಮೆಲ್ಲರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಶಿಲ್ಪಾಶೆಟ್ಟಿಯವರ ವರದಿ ನೆಗೆಟಿವ್ ಬಂದಿದೆ.

ಅಷ್ಟೇ ಅಲ್ಲದೆ ಶಿಲ್ಪಾಶೆಟ್ಟಿಯವರ ಅತ್ತೆ-ಮಾವ ಇಬ್ಬರಿಗೂ ಕೋವಿಡ್ 19 ಪಾಸಿಟಿವ್ ಬಂದಿದೆ.ಕಳೆದ 10 ದಿನಗಳಿಂದ ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಎಲ್ಲರೂ ಗೈಡ್​ಲೈನ್ಸ್​ನಂತೆ ತಮ್ಮ ತಮ್ಮ ರೂಮ್​ಗಳಲ್ಲಿ ಐಸೋಲೇಟ್ ಆಗಿದ್ದಾರೆ.

ನಮ್ಮ ಮನೆಯ ಇಬ್ಬರು ಸಿಬ್ಬಂದಿಗೂ ಸಹ ಕೊರೊನಾ ಪಾಸಿಟಿವ್ ಆಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಶಿಲ್ಪಾಶೆಟ್ಟಿ ಹೇಳಿದ್ದಾರೆ.

The post ಶಿಲ್ಪಾಶೆಟ್ಟಿ ಪತಿ, ಮಕ್ಕಳಿಗೆ ಕೊರೊನಾ ಪಾಸಿಟಿವ್.. ನಮಗಾಗಿ ಪ್ರಾರ್ಥಿಸಿ ಎಂದ ನಟಿ appeared first on News First Kannada.

Source: newsfirstlive.com

Source link