ಮೈಸೂರು: ಶಿಲ್ಪಾ ನಾಗ್ ಅವರು  ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ.ಸೊಮ್​ಶೇಖರ್​ ಹೇಳಿದ್ದಾರೆ.

ನಗರಸಭೆ ಆಯುಕ್ತರ ಸ್ಥಾನಕ್ಕೆ ಶಿಲ್ಪಾ ನಾಗ್ ರಾಜೀನಾಮೆಗೆ ನಿರ್ಧಾರ ಮಾಡಿರೋ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್.. ಶಿಲ್ಪಾ ನಾಗ್​ ಅವರ ರಾಜೀನಾಮೆಯನ್ನ ಯಾವುದೇ ಕಾರಣಕ್ಕೂ ಅಂಗೀಕಾರ ಮಾಡಿಸೋದಿಲ್ಲ. ಅವರ ಲಿಮಿಟ್​​ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಮಾನಸಿಕ ಹಿಂಸೆ ಆಗ್ತಿದೆ ಎಂದು ಶಿಲ್ಪಾ ನಾಗ್​ ಮಾಧ್ಯಮಗಳಿಗೆ ಹೇಳಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದಿದ್ದೇವೆ. ಹೀಗಾಗಿ ನಾಳೆ ಸಿಎಸ್ ರವಿಕುಮಾರ್ ಮೈಸೂರಿಗೆ ತೆರಳಿ ರಿವ್ಯೂ ಮಾಡಲಿದ್ದಾರೆ.  ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಮಾಡುತ್ತೇವೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ಡಿಸಿ v/s ಪಾಲಿಕೆ ಕಮಿಷನರ್: ಅಳುತ್ತಾ ರಾಜೀನಾಮೆ ಘೋಷಿಸಿದ ಶಿಲ್ಪಾ ನಾಗ್

The post ‘ಶಿಲ್ಪಾ ನಾಗ್ ಪ್ರಾಮಾಣಿಕ ಅಧಿಕಾರಿ, ರಾಜೀನಾಮೆ ಅಂಗೀಕಾರ ಮಾಡಿಸಲ್ಲ’ ಎಂದ ಸಚಿವ appeared first on News First Kannada.

Source: newsfirstlive.com

Source link