ಮೈಸೂರು: ಮೈಸೂರಿನಲ್ಲಿ ಇಬ್ಬರು ಐಎಎಸ್​ ಆಫೀಸರ್​ಗಳ ನಡುವಿನ ಜಟಾಪಟಿ ಕೊನೆಗೂ ತಣ್ಣಗಾಗಿದೆ. ಇಬ್ಬರೂ ಅಧಿಕಾರಿಗಳನ್ನ ಮೈಸೂರಿನಿಂದ ವರ್ಗಾವಣೆ ಮಾಡಿದ ನಂತರ ಇದೀಗ ಅವರ ಸ್ಥಾನಗಳಿಗೆ ಹೊಸ ಅಧಿಕಾರಿಗಳು ಬಂದು ಕೂತಿದ್ದಾರೆ.

ಈ ಮಧ್ಯೆ ನ್ಯೂಸ್​ಫಸ್ಟ್​ಗೆ ಹೇಳಿಕೆ ನೀಡಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ.. ಶಿಲ್ಪಾ ನಾಗ್ ಹತಾಶೆಯಿಂದ ನನ್ನ ವಿರುದ್ಧ ಮಾತನಾಡಿದ್ದಾರೆ. ಶಿಲ್ಪಾ ನಾಗ್ ಬಗ್ಗೆ ನನಗೆ ಅನುಕಂಪ ಬರುತ್ತಿದೆ. ನನ್ನ ವರ್ಗಾವಣೆಯನ್ನ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

ನಾನು ಷಡ್ಯಂತ್ರಕ್ಕೆ ಬಲಿಯಾಗಿರೋದು ನಿಜ. ಎಂಟು ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡುವಾಗ, ಕೋವಿಡ್ ಸಂಖ್ಯೆ ಕಡಿಮೆ ಆಗುವಾಗ ಈ ರೀತಿ ಬೆಳವಣಿಗೆ ಆಗಿದೆ. ಜನಕ್ಕೆ ನಾವು ಕೆಲಸ ಮಾಡಬೇಕು. ಮೈಸೂರನ್ನ ನಾನು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸಿದ್ದೇನೆ. ಯಾರೇ ಎದುರಾದರೂ ಜನತೆ ನನ್ನ ಪರ ನಿಂತಿದ್ದಾರೆ. ಮೈಸೂರಿನ ಜನತೆ ತಾಯಿ ಹೃದಯ ತೋರಿದ್ದಾರೆ ಎಂದು ಹೇಳಿದ್ದಾರೆ.

The post ಶಿಲ್ಪಾ ನಾಗ್ ಬಗ್ಗೆ ನನಗೆ ಅನುಕಂಪ ಬರ್ತಿದೆ.. ರೋಹಿಣಿ ಸಿಂಧೂರಿ ಹೀಗಂದಿದ್ಯಾಕೆ? appeared first on News First Kannada.

Source: newsfirstlive.com

Source link