ಮೈಸೂರು: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಿಚಾರದ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ರಾಜೀನಾಮೆ ನಿಜಕ್ಕೂ ಆಶ್ಚರ್ಯ ಹಾಗೂ ಬೇಸರ ತಂದಿದೆ. ಮೈಸೂರಿನಲ್ಲಿ ಕೋವಿಡ್ ಮಿತ್ರ, ಮನೆ ಮನೆ ಸರ್ವೇ, ಟೆಲಿ ಮೆಡಿಸಿನ್ ನಂತಹ ಎಲ್ಲಾ ಮಹತ್ತರವಾದ ಕೋವಿಡ್​ಗೆ ಸಂಬಂಧಿಸಿದ ಯೋಜನೆಗಳನ್ನು ತಂದವರು.

ಜನಪ್ರತಿನಿಧಿಗಳೊಡನೆ ಅಧಿಕಾರಿಗಳೊಡನೆ ಚರ್ಚಿಸಿ ನಿರ್ಧಾರಗಳನ್ನು ಯೋಜನೆಗಳನ್ನು ರೂಪಿಸುತ್ತಿದ್ದರು. ಅವರಿಗೆ ಕೆಲವು ವಿಷಯಗಳಲ್ಲಿ ಬೇಸರವಾಗಿದ್ದರಿಂದ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿರುವುದು ನಿಜಕ್ಕೂ ದುಃಖಕರ. ಯಾವುದೇ ಕಾರಣಕ್ಕೂ ಇವರ ರಾಜೀನಾಮೆ ಅಂಗೀಕಾರ ಮಾಡಬಾರದು. ಇಂತಹ ದಕ್ಷ ಅಧಿಕಾರಿಗಳ ಸೇವೆ ಜನರಿಗೆ ನಿಜಕ್ಕೂ ಬೇಕಾಗಿದೆ. ಇಂಥವರು ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ತಿಳಿಸಿದ್ದೇನೆ. ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತಿದ್ದೇನೆ ಎಂದಿದ್ದಾರೆ.

The post ಶಿಲ್ಪಾ ನಾಗ್ ರಾಜೀನಾಮೆ ಬೇಸರ ತಂದಿದೆ -IAS ಅಧಿಕಾರಿ ಪರ ರಾಮದಾಸ್ ಬ್ಯಾಟಿಂಗ್ appeared first on News First Kannada.

Source: newsfirstlive.com

Source link