ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಾಂಪತ್ಯಕ್ಕೆ 12 ವರ್ಷದ ಸಂಭ್ರಮ; ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ನಟಿ | Shilpa Shetty and Raj Kundra celebrate 12th year wedding anniversary by sharing marriage photo


ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಾಂಪತ್ಯಕ್ಕೆ 12 ವರ್ಷದ ಸಂಭ್ರಮ; ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ನಟಿ

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾ ಮದುವೆ ಫೋಟೋ

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಮನೆಯಲ್ಲೀಗ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅನೇಕ ವಿವಾದಗಳನ್ನು ಎದುರಿಸಿದ ಬಳಿಕವೂ ಅವರು ಜೀವನೋತ್ಸಾಹ ಕಳೆದುಕೊಂಡಿಲ್ಲ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುತ್ತ ಅವರು ಸಂಸಾರ ತೂಗಿಸುತ್ತಿದ್ದಾರೆ. ಪತಿ ರಾಜ್​ಕುಂದ್ರಾ ಮೇಲೆ ಎಷ್ಟೇ ಆರೋಪ ಬಂದರೂ ಶಿಲ್ಪಾ ಶೆಟ್ಟಿ (Raj Kundra) ಕುಗ್ಗಿಲ್ಲ. ಎಂಥ ಕಷ್ಟದ ಸಂದರ್ಭದಲ್ಲೂ ಅವರು ಗಂಡನನ್ನು ಬಿಟ್ಟುಕೊಟ್ಟಿಲ್ಲ.  ಈಗ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ಜೋಡಿಗೆ ವಿವಾಹ ವಾರ್ಷಿಕೋತ್ಸವದ (Wedding Anniversary) ಸಂಭ್ರಮ. ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಪತಿ ರಾಜ್​ ಕುಂದ್ರಾಗೆ ಶಿಲ್ಪಾ ಶೆಟ್ಟಿ ಪ್ರೀತಿಯ ಸಂದೇಶ ನೀಡಿದ್ದಾರೆ. ಜೊತೆಗೆ ಅಪರೂಪದ ಫೋಟೋ ಕೂಡ ಶೇರ್​ ಮಾಡಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು 2009ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅವರ ಸಂಸಾರದಲ್ಲಿ ಯಾವುದೇ ಬಿರುಕು ಮೂಡಿಲ್ಲ. ಈ ದಂಪತಿಗೆ ವಿಹಾನ್​ ಮತ್ತು ಸಮೀಶಾ ಎಂಬಿಬ್ಬರು ಮಕ್ಕಳಿದ್ದಾರೆ. 12ನೇ ವರ್ಷದ ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ಮದುವೆ ಫೋಟೋ ಪೋಸ್ಟ್​ ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

‘12 ವರ್ಷಗಳ ಹಿಂದೆ ಈ ದಿನ ಪರಸ್ಪರ ಒಂದು ಪ್ರಾಮಿಸ್​ ಮಾಡಿಕೊಂಡಿದ್ದೆವು. ಒಳ್ಳೆಯ ಮತ್ತು ಕಷ್ಟದ ಕಾಲವನ್ನು ಜೊತೆಯಾಗಿ ಹಂಚಿಕೊಳ್ಳುತ್ತೇವೆ, ಪ್ರೀತಿಯಲ್ಲಿ ನಂಬಿಕೆ ಇಡುತ್ತೇವೆ, ಪ್ರತಿ ದಿನ ಜೊತೆಯಾಗಿ ಇರುತ್ತೇವೆ ಎಂದು ಪ್ರಾಮಿಸ್​ ಮಾಡಿದ್ದೆವು. ನಮ್ಮ ದಾಂಪತ್ಯಕ್ಕೆ 12 ವರ್ಷವಾಗಿ ಮುಂದುವರಿಯುತ್ತಿದೆ. ಎಲ್ಲ ಸಮಯದಲ್ಲೂ ನಮ್ಮ ಜೊತೆ ಇದ್ದ ಹಿತೈಷಿಗಳಿಗೆ ಧನ್ಯವಾದಗಳು’ ಎಂದು ಶಿಲ್ಪಾ ಶೆಟ್ಟಿ ಪೋಸ್ಟ್​ ಮಾಡಿದ್ದಾರೆ. ಆ ಮೂಲಕ ತಮ್ಮಿಬ್ಬರ ಗಟ್ಟಿ ಸಂಬಂಧಕ್ಕೆ ಬುನಾದಿ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಜುಲೈ 19ರಂದು ರಾಜ್​ ಕುಂದ್ರ ಅರೆಸ್ಟ್​ ಆಗಿದ್ದರು. ಅದಕ್ಕೂ ಮೊದಲು ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ಆಗಿದ್ದರು. ಬಗೆಬಗೆಯ ಫೋಟೋ ಮತ್ತು ವಿಡಿಯೋಗಳನ್ನು ಅವರು ಶೇರ್​ ಮಾಡಿಕೊಳ್ಳುತ್ತಿದ್ದರು. ಆದರೆ ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪ ಕೇಳಿಬಂದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ರಾಜ್​ ಕುಂದ್ರಾ ಬಹುತೇಕ ಕಣ್ಮರೆ ಆಗಿಬಿಟ್ಟರು. ಜಾಮೀನು ಪಡೆದು ಹೊರಬಂದು ಹಲವು ದಿನಗಳು ಕಳೆದರೂ ಅವರ ಖಾತೆಯಲ್ಲಿ ಯಾವುದೇ ಹೊಸ ಪೋಸ್ಟ್​ ಕಾಣಿಸಿಕೊಂಡಿಲ್ಲ. ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಗಳನ್ನು ಅವರು ಡಿಲೀಟ್​ ಮಾಡಿದ್ದಾರೆ. ಈ ರೀತಿ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಅವರು ಯಾವುದೇ ಸೂಚನೆಯನ್ನೂ ನೀಡಿಲ್ಲ. ಗಂಡನ ಈ ವರ್ತನೆ ಬಗ್ಗೆ ಶಿಲ್ಪಾ ಶೆಟ್ಟಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು

ಶಿಲ್ಪಾ ಶೆಟ್ಟಿ ಮನೆಯಲ್ಲಿ ನವರಾತ್ರಿ ವೈಭವ; ಮಕ್ಕಳಿಗೆ ಕಲಿಸುತ್ತಿರುವ ಪಾಠ ಎಂಥದ್ದು?

TV9 Kannada


Leave a Reply

Your email address will not be published. Required fields are marked *