ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್​, ಕೀರ್ತಿ; ‘ಸಲಗ’ ಸಕ್ಸಸ್​ ವೇದಿಕೆಯಲ್ಲಿ ‘ಹ್ಯಾಟ್ರಿಕ್​ ಹೀರೋ’ | Duniya Vijay and his wife Keerthi seeks blessings of Shivarajkumar in Salaga movie success meet


ಕಳೆದ ವರ್ಷ ಸೂಪರ್​ ಹಿಟ್​ ಆದ ಕೆಲವೇ ಸಿನಿಮಾಗಳಲ್ಲಿ ‘ಸಲಗ’ (Salaga Movie) ಕೂಡ ಪ್ರಮುಖವಾದದ್ದು. ನಟ ದುನಿಯಾ ವಿಜಯ್​ (Duniya Vijay) ಅಭಿನಯಿಸಿ, ನಿರ್ದೇಶಿಸಿದ್ದ ಆ ಚಿತ್ರಕ್ಕೆ ಬಂಡವಾಳ ಹೂಡಿದವರು ಕೆ.ಪಿ. ಶ್ರೀಕಾಂತ್​. ಶುಕ್ರವಾರ (ಫೆ.4) ಈ ಸಿನಿಮಾದ ಸಕ್ಸಸ್​ ಮೀಟ್​ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ (Shivarajkumar) ಅವರು ವೇದಿಕೆಯಲ್ಲಿ ಮಾತನಾಡಿದರು. ಬಳಿಕ ಅವರ ಕಾಲಿಗೆ ದುನಿಯಾ ವಿಜಯ್​ ಮತ್ತು ಪತ್ನಿ ಕೀರ್ತಿ ನಮಸ್ಕರಿಸಿದರು. ಶಿವಣ್ಣನ ಬಗ್ಗೆ ದುನಿಯಾ ವಿಜಯ್​ ಅವರಿಗೆ ಅಪಾರ ಗೌರವ. ‘ನಾನು ಹೀರೋ ಆಗೋಕಿಂತ ಮುಂಚಿನಿಂದಲೂ ಶಿವಣ್ಣನ ಆಶೀರ್ವಾದ ಮತ್ತು ಬೆಂಬಲ ನಮಗೆ ಇದೆ. ಈಗ ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಅವರ ಹೆಸರಿಗೆ ಕೆಡುಕು ಆಗದಂತೆ ನಡೆದುಕೊಳ್ಳುತ್ತೇವೆ’ ಎಂದರು ದುನಿಯಾ ವಿಜಯ್​.

TV9 Kannada


Leave a Reply

Your email address will not be published.