ಶಿವಣ್ಣನ ‘ಭಜರಂಗಿ-2’ ಟ್ರೇಲರ್​ ಔಟ್​- ಕನ್ನಡ ಚಿತ್ರರಂಗದ ನೆಕ್ಸ್ಟ್ ಲೆವೆಲ್​ ಸಿನಿಮಾ ಅಂತಿದ್ದಾರೆ ಫ್ಯಾನ್ಸ್

‘ಭಜರಂಗಿ -2’ ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೊ ಡಾ. ಶಿವರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈ ಹಿಂದೆ ಇದೇ ಸೆಪ್ಟೆಂಬರ್​ 10ನೇ ತಾರೀಕಿನಂದು ‘ಭಜರಂಗಿ -2’ ರಿಲೀಸ್​ ಆಗಬೇಕಿತ್ತು. ಆದರೆ ಥಿಯೇಟರ್​ನಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದ್ದ ಕಾರಣ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಆ ಬಳಿಕ ಆಕ್ಟೋಬರ್​ 29ನೇ ರಂದು ಚಿತ್ರ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಸದ್ಯ ಸಾಕಷ್ಟು ನಿರೀಕ್ಷೆಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್​​ಗಿಫ್ಟ್​ ನೀಡಿರೋ ಚಿತ್ರತಂಡ, ಸಿನಿಮಾ ಬಿಡುಗಡೆ ದಿನಾಂಕವನ್ನು ಖಚಿತ ಪಡಿಸಿ, ಟ್ರೇಲರ್​ ಬಿಡುಗಡೆ ಮಾಡಿದೆ.

ಶಿವರಾಜ್​​ಕುಮಾರ್ ಅವರು ಚಿತ್ರದ ಟ್ರೇಲರ್​ ಅನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು, ನಾವು ಮತ್ತೆ ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಸಿನಿಮಾದ ಟ್ರೇಲರ್​ 3:11 ನಿಮಿಷಗಳಿದ್ದು, ಶಿವಣ್ಣನ ಲುಕ್​​​​ ಮಾತ್ರವಲ್ಲದೇ, ನಟಿ ಭಾವನಾ, ಶೃತಿ ಸೇರಿದಂತೆ ಚಿತ್ರತಂಡದ ತಾರಾ ಬಳಗದ ಲುಕ್​​ಗೆ ಫಿದಾ ಆಗಿದ್ದಾರೆ. ಚಿತ್ರದ ವಿಎಫ್​ಎಕ್ಸ್ ಸೇರಿದಂತೆ ನಿರ್ದೇಶಕ ಶ್ರಮ, ತಂತ್ರಜ್ಞಾನ ಬಳಕೆ ಬಗ್ಗೆಯೂ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್​​ ಮಾಡ್ತಿದ್ದಾರೆ.

ಅಂದಹಾಗೆ, ನಿರ್ದೇಶಕ ಎ. ಹರ್ಷ ‘ಭಜರಂಗಿ -2’ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದು, ನಿರ್ಮಾಪಕರಾದ ಜಯಣ್ಣ ಹಾಗೂ ಭೋಗೆಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಭಜರಂಗಿ -2’ ಚಿತ್ರತಂಡ ಟ್ರೇಲರ್ ವಿಕ್ಷೀಸಿದ ಶಿವಣ್ಣನ ಅಭಿಮಾನಿಗಳು ಫುಲ್​ ಥ್ರಿಲ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಡಬಲ್​ ಆಗಿದೆ ಅಂತಿದ್ದಾರೆ.

News First Live Kannada

Leave a comment

Your email address will not be published. Required fields are marked *