ಶಿವಣ್ಣರನ್ನ ಈ ರೀತಿ ನೋಡೋಕೆ ಆಗ್ತಿಲ್ಲ.. ರಾಗಿಣಿ ದ್ವಿವೇದಿ


ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ನಿಧನ ಎಷ್ಟು ಶಾಕಿಂಗ್​ ಆಗಿತ್ತು ಎಂದರೆ ಇನ್ನು ನಂಬಲು ಆಗುತ್ತಿಲ್ಲ. ಅಪ್ಪುರ ನಿಧನ ವೈಯುಕ್ತಿಕ ನಷ್ಟ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟು ಪುನೀತ್​​ರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಗಿಣಿ, ಅಷ್ಟು ನಗುನಗುತ್ತಾ ಇದ್ದ ವ್ಯಕ್ತಿ ಸಡನ್​ ಆಗಿ ಇಲ್ಲ ಎಂದರೇ ನಂಬಲು ಆಗುತ್ತಿಲ್ಲ. ಈಗಲೂ ನನಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ದೇವರು ಅಶ್ವಿನಿ ಮೇಡಮ್​ ಅವರಿಗೆ ಹಾಗೂ ಮಕ್ಕಳಿಗೆ ಧೈರ್ಯ ಕೊಡಲಿ.. ಶಿವಣ್ಣರನ್ನು ಆ ರೀತಿ ನೋಡೋಕೆ ಆಗ್ತಿಲ್ಲ. ಏಕೆಂದರೆ ಯವಾಗಲೂ ನಗುತ್ತಾ.. ಎಲ್ಲರಿಗೂ ಪ್ರೋತ್ಸಾಹ ಮಾಡೋದನ್ನೇ ಅವರಲ್ಲಿ ನೋಡಿದ್ದೇವು.. ನನಗೂ ವೈಯುಕ್ತಿವಾಗಿ ಸಾಕಷ್ಟು ಬೆಂಬಲ ಪ್ರೋತ್ಸಾಹ ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎದುರಾಗಿರೋ ಲಾಸ್​​ಅನ್ನು ಹೇಗ್​ ರಿಪ್ಲೇಸ್​ ಮಾಡೋದು ಗೊತ್ತಾಗುತ್ತಿಲ್ಲ. ಅದು ಸಾಧ್ಯವೂ ಇಲ್ಲ. ಅವರ ಫ್ಯಾಮಿಲಿ ಮತ್ತು ಇಂಡಸ್ಟ್ರಿಗೆ ಈ ಸಮಯವನ್ನು ಎದುರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅವರೊಂದಿಗೆ ಕೆಲಸ ಮಾಡೋ ಅವಕಾಶ ನನಗೆ ಸಿಕ್ಕಿಲ್ಲ. ಆದರೆ ಹಲವು ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದೇನೆ. ಸದ್ಯ ಅವರು ಮಾಡಿರುವ ಒಳ್ಳೆ ಕೆಲಸಗಳು ಮುಂದುವರಿಯಲಿ ಎಂದರು.

News First Live Kannada


Leave a Reply

Your email address will not be published. Required fields are marked *