ಶಿವಣ್ಣರ 124ನೇ ಸಿನಿಮಾದ ಹೀರೋಯಿನ್​ ಇವರೇ.. ಯಾರಿವರು..?

ಶಿವಣ್ಣರ 124ನೇ ಸಿನಿಮಾದ ಹೀರೋಯಿನ್​ ಇವರೇ.. ಯಾರಿವರು..?

ತೆಲುಗು-ತಮಿಳು ಚಿತ್ರರಂಗದ ಖ್ಯಾತ ನಟಿ, ಬೆಡಗಿ ಮೆಹ್ರೀನ್ ಪಿರ್ಜಾಡಾ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ 124 ನೇ ಚಿತ್ರದ ನಾಯಕಿಯಾಗಿ ಅಭಿನಯಿಸಲಿದ್ದಾರೆ.
F2 ಹಾಗೂ ಪಟಾಸ್ ಚಿತ್ರಗಳ ಮೂಲಕ ಜನಮನಸೂರೆಗೊಂಡಿರುವ ಮೆಹ್ರೀನ್, ಸದ್ಯ ಅನಿಲ್ ರವಿಪುಡಿ ಅವರ F3 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕಥೆ ಇಷ್ಟಪಟ್ಟಿರುವ ಮೆಹ್ರೀನ್, ತಾವು ಈ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರಂತೆ.

ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ, ರಾಮ್ ದುಲಿಪುಡಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಆಗಸ್ಟ್​ನಲ್ಲಿ ಆರಂಭವಾಗಲಿದೆ.

ಖ್ಯಾತ ನಟರಾದ ನಾಜರ್, ಸಂಪತ್ ಹಾಗೂ ಮಂಗ್ಲಿ (ಗಾಯಕಿ) ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

The post ಶಿವಣ್ಣರ 124ನೇ ಸಿನಿಮಾದ ಹೀರೋಯಿನ್​ ಇವರೇ.. ಯಾರಿವರು..? appeared first on News First Kannada.

Source: newsfirstlive.com

Source link