ಪುನೀತ್ ಅಗಲಿಕೆಯ ಬಗ್ಗೆ ಯೋಗರಾಜ್ ಭಟ್ಟರ ಮನದಾಳವನ್ನ ಕೇಳಿದ್ವಿ.. ಈಗ ಪುನೀತ್ ಜೊತೆಗೆ ಕಮರಿಹೋದ ಯೋಗರಾಜ್ ಭಟ್ಟರ ಒಂದು ಕನಸಿನ ಸಿನಿಮಾದ ಬಗ್ಗೆ ಇಲ್ಲಿದೆ. ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಒಂದೇ ಫ್ರೇಮ್ನಲ್ಲಿ ತಂದು ನಿಲ್ಲಿಸೋ ಯೋಚನೆ ಪ್ಲಸ್ ಯೋಜನೆಯಲ್ಲಿ ಯೋಗರಾಜ್ ಭಟ್ ಇದ್ದರು.. ದಿ ಬೆಸ್ಟ್ ಬ್ರದರ್ಸ್ ಆಫ್ ಸ್ಯಾಂಡಲ್ವುಡ್ರಿಂದಲೂ ಒಪ್ಪಿಗೆಯನ್ನು ಪಡೆದಿದ್ದರು ಯೋಗರಾಜ್ ಭಟ್..
ದೊಡ್ಮನೆ ಬಗ್ಗೆ ಅಣ್ಣಾವ್ರ ಮಕ್ಕಳ ಬಗ್ಗೆ ಹಾಗೂ ಎಲ್ಲರನ್ನು ಅಗಲಿದ ಅಪ್ಪು ಅವರ ಬಗ್ಗೆ ಚೆನ್ನಾಗಿ ಅರೆತು ಬೆರೆತವರು ಯೋಗರಾಜ್ ಭಟ್.. ಇವ್ರ ರೈಟಿಂಗೂ ಡೈರೆಕ್ಷನು ಎಲ್ಲವನ್ನೂ ದೊಡ್ಮನೆ ಮೆಚ್ಚಿಕೊಂಡಾಡಿದೆ.. ಪರಮಾತ್ಮ ಸಿನಿಮಾದ ಮೂಲಕ ಅಪ್ಪು ಮತ್ತು ಯೋಗರಾಜ್ ಭಟ್ ಒಟ್ಟಿಗೆ ಕೆಲಸ ಮಾಡಿದ್ದಾರೆ.. ಎಲ್ಲಾ ನಿರ್ದೇಶಕರಂತೆ ಯೋಗರಾಜ್ ಭಟ್ ಅವರಿಗೂ ಅಣ್ಣಾವ್ರ ಮಕ್ಕಳನ್ನ ಒಟ್ಟುಗೂಡಿಸಿ ಸಿನಿಮಾ ಮಾಡಬೇಕು ಅನ್ನೋ ಆಸೆ ಇತ್ತು.. ಆದ್ರೆ ಆಸೆಯ ಕನಸು ಕನಸಾಗಿಯೇ ಉಳಿದು ಹೋಗಿದೆ..
ಅಪ್ಪು ಜೊತೆಗೆ ಕೆಲಸ ಮಾಡಿರುವ ಶಿವಣ್ಣನ ಜೊತೆ ಕೆಲಸ ಮಾಡಲಿರುವ ಮುಂಗಾರು ಮಳೆ ಡೈರೆಕ್ಟರು ಅಪ್ಪು ಮತ್ತು ಶಿವಣ್ಣನಿಗಾಗಿ ಒಂದು ಕಥೆ ಮಾಡಿದ್ರಂತೆ.. ಆ ಕಥೆಯನ್ನ ಅಪ್ಪು ಮತ್ತು ಶಿವಣ್ಣನವರಿಗೆ ಹೇಳಿ ಒಪ್ಪಿಸಿಯು ಆಗಿತ್ತಂಥೆ.. ಶಿವಣ್ಣ-ಪುನೀತ್ ಒಪ್ಪಿದ್ರು ವಿಧಿ ಒಪ್ಪಲಿಲ್ಲ.. ಯೋಗರಾಜ್ ಭಟ್ ಅವರು ಪುನೀತ್ ರಾಜ್ ಕುಮಾರ್ ಅಗಲಿದಾಗ ಒಂದು ಮನಮುಟ್ಟವ ಸಾಲುಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ರು.. ಈ ಸಂದರ್ಭದಲ್ಲಿ ಭಟ್ಟರು ಗೀಚಿದ ಎದೆಗೂಡಿದ ಸಾಲುಗಳು ಮನಮುಟ್ಟುತ್ತೆ ವಾಸ್ತವಕ್ಕೆ ಹತ್ತಿರ ಅನ್ನಿಸುತ್ತೆ..
ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ನಿಮ್ಮನ್ನು ಕೊನೆಯ ಬಾರಿ ಇವತ್ತು ಬಳಿನಿಂತು ನೋಡಿ, ಭುಜಮುಟ್ಟಿದಾಗ ನನಗೆ ಅನಿಸಿದ್ದು ಇಷ್ಟೆ- ‘‘ನೀವಲ್ಲ , ಇದು ಸಾವಲ್ಲ , ಇದು ನಿಮ್ಮ ಹುಟ್ಟು” ದೇಹ ಹೋಗಬಹುದು ಸ್ನೇಹ ಹೋದೀತೆ? ಸತತವಾಗಿ ಈ ನಾಡಿಗೆ ನಿತ್ಯ ನೂತನವಾಗಿ ನೆನಪಾಗುತ್ತಾ ಇನ್ನಷ್ಟು ನಳನಳಿಸುವ ಕನ್ನಡ ಚೈತನ್ಯವಾಗಿ ಶಾಶ್ವತವಾಗಿ ಬಾಳುತ್ತೀರಿ ನೀವು.. ಕುಟುಂಬಕ್ಕೆ ಸಕಲ ಕನ್ನಡಿಗರ ಶ್ರೀ ರಕ್ಷೆ ಇದೆ.. ಆಪ್ತವಾಗಿ , ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ಎಂದು ಗೀಚಿದ್ದಾರೆ.
ಯೋಗರಾಜ್ ಭಟ್ಟರ ರೀತಿ ಬಹಳಷ್ಟು ನಿರ್ದೇಶಕ ಕಳೆದ 25 ವರ್ಷದಿಂದ ಅಣ್ಣಾವ್ರ ಮಕ್ಕಳನ್ನ ಒಟ್ಟುಗೂಡಿಸಿ ಸಿನಿಮಾ ಮಾಡುವ ಪ್ರಯತ್ನವನ್ನ ಮಾಡುತ್ತಲೇ ಇದ್ದರು.. ಆದ್ರೆ ಆ ಸಿನಿ ಸುಸಂದರ್ಭ ಬರ್ಲೇ ಇಲ್ಲ.. ಅದ್ರಲೂ ಇತ್ತಿಚಿನ ಡೈರೆಕ್ಟರ್ಗಳಾದ ಯೋಗರಾಜ್ ಭಟ್, ದುನಿಯಾ ಸೂರಿ, ಸ್ಟೆಂಟ್ ಮಾಸ್ಟರ್ ರವಿ ವರ್ಮ ಸೇರಿದಂತೆ ಅನೇಕ ಪ್ರತಿಭಾವಂತರು ಅಣ್ಣಾವ್ರ ಮಕ್ಕಳನ್ನ ಒಟ್ಟು ಗೂಡಿಸಿ ಸಿನಿಮಾ ಮಾಡುವ ಪ್ರಯತ್ನವನ್ನ ಮಾಡಿದ್ದಾರೆ.. ಆದ್ರೇ ಏನ್ ಮಾಡೋದು ಮನುಷ್ಯ ಒಂದು ಅನ್ಕೋಂಡ್ರೆ ದೈವ ಇನ್ನೊಂದು ಅನ್ಕೊಂಡು ಅನುಷ್ಟಾನಕ್ಕೆ ತಂದು ಬಿಡುತ್ತೆ..