ಮೇ 19, ಅಂದ್ರೆ ಇಂದು ದೊಡ್ಮನೆಯ ದಂಪತಿಯ ವಿವಾಹ ವಾರ್ಷಿಕೋತ್ಸವ. 1986ರ ಮೇ 19ರಂದು ಗೀತಾ ಹಾಗೂ ಡಾ.ಶಿವರಾಜ್​ಕುಮಾರ್​ ಮದುವೆ ನೆರವೇರಿತ್ತು. ಇಂದಿಗೆ ಬರೋಬ್ಬರಿ 35 ವರ್ಷಗಳನ್ನ ಜೊತೆಯಾಗಿ ಪೂರೈಸಿದೆ ಈ ಸೂಪರ್​ ಜೋಡಿ. ಅಂದ್ಹಾಗೆ ಈ ದಿನವನ್ನ ಶಿವರಾಜ್​ಕುಮಾರ್​ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹೌದು.. ಶಿವಣ್ಣ ಹಾಗೂ ಗೀತಕ್ಕ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಇಂದು ಕೆ.ಜಿ ರೋಡ್​​ನಲ್ಲಿರುವ ಚಿತ್ರಮಂದಿರದ ಕಾರ್ಮಿಕರಿಗೆ ರೇಷನ್ ಕಿಟ್​ಗಳನ್ನ ನೀಡಿ ಸಹಾಯ ಹಸ್ತ ಚಾಚಲು ಶಿವು ಅಡ್ಡ ಬನಶಂಕರಿ ಹಾಗು ಶಿವ ಸೈನ್ಯ ತಂಡದವರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಶಿವರಾಜ್​ಕುಮಾರ್​ ಅಭಿಮಾನಿ ಬಳಗ ಈ ಕೆಲಸಕ್ಕೆ ಮುಂದಾಗಿದ್ದು, ಕಷ್ಟದಲ್ಲಿರುವವರಿಗೆ ನೆರವಾಗ್ತಿದ್ದಾರೆ. ಇನ್ನು ಈಗಾಗಲೇ ಶಿವಣ್ಣ ದಂಪತಿ ‘ಆಸರೆ’ ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಶೀರ್ಷಿಕೆಯಡಿಯಲ್ಲಿ, ತಾವು ನೆಲೆಸಿರೋ ನಾಗಾವರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ, ಹಾಗೂ ಟೀ ವ್ಯವಸ್ಥೆಯನ್ನ ಮಾಡಿದ್ದಾರೆ‌.

ಲಾಕ್​ಡೌನ್ ಹೀಗೆ ಇನ್ನೂ ಮುಂದುವರೆದಲ್ಲಿ‌, ಸುಮಾರು 1,000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಶಿವಣ್ಣ, ಗೀತಕ್ಕ ಹಾಗೂ ಶಿವಣ್ಣ ಬಾಯ್ಸ್ ಯೋಜನೆಯನ್ನೂ ರೂಪಿಸಿಕೊಂಡಿದ್ದಾರೆ. ಅಂದ್ಹಾಗೇ ಶಿವರಾಜ್​ಕುಮಾರ್​ರ ಅವರ ಈ ಸೇವೆಯಲ್ಲಿ ಅವರ ಅಭಿಮಾನಿ ಬಳಗ, ಶಿವಣ್ಣ ಬಾಯ್ಸ್​ ಕೂಡ ನೆರವಾಗ್ತಿದ್ದಾರೆ. ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಬಡವರ, ಕಷ್ಟದಲ್ಲಿ ಇರುವವರ ಸಹಾಯಕ್ಕೆ ಅಭಿಮಾನಿಗಳು ನಿಂತಿರೋದು ಶ್ಲಾಘನೀಯ.

The post ಶಿವಣ್ಣ-ಗೀತಕ್ಕ ವಿವಾಹ ವಾರ್ಷಿಕೋತ್ಸವ; ಅಭಿಮಾನಿಗಳಿಂದ ರೇಷನ್​ ಕಿಟ್​ ವಿತರಣೆ appeared first on News First Kannada.

Source: newsfirstlive.com

Source link