ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಭಜರಂಗಿ-2. ಲಾಕ್ ಡೌನ್ ಆಗದೆ ಇದ್ದಿದ್ರೇ ಇಷ್ಟೊತ್ತಿಗಾಗಲೇ ಎರಡನೇ ಭಜರಂಗಿ ಸಿನಿಮಾ ಪ್ರೇಕ್ಷಕರ ಮನೆ-ಮನ ತಲುಪಿ ಆಗಿರುತ್ತಿತ್ತು. ಆದ್ರೆ ಲಾಕ್ ಡೌನ್ ಆದ ಕಾರಣ ಭಜರಂಗಿ ಎಡಿಟಿಂಗ್ ಟೇಬಲ್​​ನಲ್ಲೆ ಬೆಚ್ಚಗೆ ಕುಳಿತು ಬಿಟ್ಟಿದೆ.​

ಹಾಗಾದ್ರೆ ಶಿವಣ್ಣನ ನಿರೀಕ್ಷಿತ ಭಜರಂಗಿ-2 ಸಿನಿಮಾದ ಕೆಲಸ ಕಾರ್ಯಗಳು ಎಷ್ಟರ ಮಟ್ಟಿಗೆ ಬಾಕಿ ಇವೆ ಅನ್ನೋದನ್ನ ಕ್ಲಿಯರ್ ಕಟ್​​ಆಗಿ ಹೇಳ್ತಿವಿ ಕೇಳಿ.

ಭಜರಂಗಿ-2 ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಆದ್ರೆ ಗಾಂಧಿನಗರದಲ್ಲಿ ಇನ್ನು 40 ಪರ್ಸೆಂಟ್ ಬಾಕಿ ಇದೆ ಅನ್ನೋ ಟಾಕ್ ಕೇಳಿಬಂದಿತ್ತು. ಆದ್ರೆ ಈ ಬಗ್ಗೆ ನಿರ್ದೇಶಕ ಎ.ಹರ್ಷ ನ್ಯೂಸ್ ಫಸ್ಟ್​ಗೆ ಮಾಹಿತಿ ಕೊಟ್ಟಿದ್ದು ಭಜರಂಗಿ 2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೊಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದ್ದು 40 ಪರ್ಸೆಂಟ್ ಕೆಲಸ ಬಾಕಿ ಇದೆ. ಮ್ಯಾಜಿಕಲ್​ ಕಂಪೋಸರ್​​ ಅರ್ಜುನ್ ಜನ್ಯ ಸಾರಥ್ಯದಲ್ಲಿ ಡಿಟಿಎಸ್, ರಿರೆಕಾರ್ಡಿಂಗ್ ನಡೆಯುತ್ತಿದೆ.

ಹಾಗಾದ್ರೆ ಯಾವಾಗ ಎರಡನೇ ಭಜರಂಗಿಯ ದರ್ಶನ ಅನ್ನೋ ಪ್ರಶ್ನೆಗೆ ಉತ್ತರ ಆಗಸ್ಟ್ ತಿಂಗಳು. ಶೇಖಡ 100 ಪರಸೆಂಟ್​​ ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಆಗಸ್ಟ್ ತಿಂಗಳನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹನುಮ ಭಕ್ತ ನಿರ್ದೇಶಕ ಎ.ಹರ್ಷ ಮಾಹಿತಿ ಕೊಟ್ಟಿದ್ದಾರೆ. ಶಿವಣ್ಣ, ಭಾವನ, ಶೃತಿ, ಲೋಕಿ ಮುಂತಾದ ಪ್ರತಿಭವಂತ ಕಲಾವಿದರುಳ್ಳ ಭಜರಂಗಿ-2 ಟೀಸರ್​​ ಈಗಾಗಲೇ ನೋಡುಗರನ್ನ ಇಂಪ್ರೇಸ್ ಮಾಡಿದೆ. ಇನೇನಿದ್ರು ಸಿನಿಮಾ ರಿಲೀಸ್ ಆಗಬೇಕು ಜನ-ಮನ ನೋಡಿ ಮೆಚ್ಚಿಕೊಳ್ಳೊದೊಂದೆ ಬಾಕಿ.

The post ಶಿವಣ್ಣ ಫ್ಯಾನ್ಸ್​ಗೆ ಇಲ್ಲಿದೆ ಸೂಪರ್​​ ಸುದ್ದಿ​; ಭಜರಂಗಿ-2 ರಿಲೀಸ್​​​ ಯಾವಾಗ ಗೊತ್ತಾ? appeared first on News First Kannada.

Source: newsfirstlive.com

Source link