ನಟ ರಾಘವೇಂದ್ರ ರಾಜಕುಮಾರ್ ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್ಕುಮಾರ್ ಹಾಗೂ ತಮ್ಮ ಕುಟುಂಬದ ಪೋಟೋಗಳನ್ನು ಹಂಚಿಕೊಳ್ಳುತಿರುತ್ತಾರೆ. ಅದರಂತೇ ರಾಘಣ್ಣ ಈ ಬಾರಿ ಸುಮಾರು 14 ವರ್ಷಗಳ ಹಿಂದೆ ನಡೆದ ಶಿವಣ್ಣ ಅವರ ಮನೆ ಗೃಹಪ್ರವೇಶದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಶಿವಣ್ಣ , ರಾಘಣ್ಣ ಅಥವಾ ಅಪ್ಪು ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಇಡೀ ಕುಟುಂಬ ಒಟ್ಟಾಗಿ ಸೇರುತ್ತಿತ್ತು. 2007ರಲ್ಲಿ ಶಿವಣ್ಣ ಹೊಸ ಮನೆಯ ಗೃಹಪ್ರವೇಶ ಬಹಳ ಅದ್ಧೂರಿಯಾಗಿ ನೆರವೇರಿತ್ತು. ಈ ಸಮಾರಂಭಕ್ಕೆ ಇಡೀ ರಾಜ್ ಕುಟುಂಬ ಸಾಕ್ಷಿಯಾಗಿತ್ತು. ಶಿವಣ್ಣ ಹಾಗೂ ಗೀತಕ್ಕ ದೇವರಿಗೆ ಪೂಜೆ ಸಲ್ಲಿಸುವಾಗ ರಾಘಣ್ಣ ಭಕ್ತಿಗೀತೆ ಹಾಡಿದ್ದರು.
ಇನ್ನು, ಅಪ್ಪು ಕೂಡ ಅವರ ಅಣ್ಣನ ಮನೆ ಗೃಹಪ್ರವೇಶ ಸಮಾರಂಭದಲ್ಲಿ ಸಂತೋಷದಿಂದ ಓಡಾಡಿಕೊಂಡಿದ್ದರು. ಕೊನೆಯಲ್ಲಿ ಪಾರ್ವತಮ್ಮ ಅವರು ತಮ್ಮ ಪುತ್ರಿಯರ ಜೊತೆ ಪೋಟೋಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ರಾಘಣ್ಣ ಈ ಅಪರೂಪದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಕ್ಕಾಗಿ ಅಪ್ಪು ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ.