ಶಿವಮೊಗ್ಗ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜೂನ್​ 7ರವರೆಗೂ ಲಾಕ್​​ಡೌನ್ ಜಾರಿ ಮಾಡಿದೆ. ಈ ನಡುವೆ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳಿಗೆ ಬ್ರೇಕ್​ ಹಾಕಲು ಮುಂದಾಗಿರುವ ಜಿಲ್ಲಾಡಳಿತ ಇಂದಿನಿಂದ ಕಠಿಣ ಲಾಕ್​ಡೌನ್​ ಜಾರಿ ಮಾಡಿದೆ.

ಜೂನ್ 7ರವರೆಗೂ ಜಿಲ್ಲೆಯಲ್ಲಿ ಕಠಿಣ ಲಾಕ್​​ಡೌನ್ ಜಾರಿ ಇರಲಿದ್ದು, ಹೋಲ್ ಸೇಲ್ ದಿನಸಿ, ಎಪಿಎಂಸಿ ತರಕಾರಿ ಮಾರುಕಟ್ಟೆ ಹಾಗೂ ಮದ್ಯದಂಗಡಿಗಳನ್ನ ಸಹ ಬಂದ್ ಮಾಡಲಾಗಿದೆ.  ಬೆಳಗ್ಗೆ 6 ರಿಂದ 8ರ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಜನರು ಅನಗತ್ಯವಾಗಿ ಓಡಾಡುವುದು ಕಂಡುಬಂದರೆ ವಾಹನ ಸೀಜ್ ಮಾಡಿ, ವಾಹನ ಸವಾರರನ್ನ ಬಂಧನ ಮಾಡುತ್ತೇವೆ ಎಂದು ಎಚ್ಚರಿಸಲಾಗಿದೆ.

ಕನಿಷ್ಠ ಮಟ್ಟದಲ್ಲಿ ಬ್ಯಾಂಕ್ ಸೇರಿದಂತೆ ತುರ್ತು ಸೇವೆಯ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

The post ಶಿವಮೊಗ್ಗದಲ್ಲಿ ಇಂದಿನಿಂದ ಕಠಿಣ ಲಾಕ್​​ಡೌನ್​- ಮದ್ಯದಂಗಡಿ, ಮಾರುಕಟ್ಟೆಯೂ ಬಂದ್​​ appeared first on News First Kannada.

Source: newsfirstlive.com

Source link