ರಾಜ್ಯದಲ್ಲಿ ಅನಾವಶ್ಯಕವಾಗಿ ಆಟ ಆಡುತ್ತಿದ್ದಾರೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ಕೊಡುವಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ ಎಂದು ಬೆಂಗಳೂರಿನಲ್ಲಿ ರಣದೀಪ್ ಸುರ್ಜೆವಾಲ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Image Credit source: India Today
ಬೆಂಗಳೂರು: ಶಿವಮೊಗ್ಗದಲ್ಲಿ ಯುವಕರಿಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಉಸ್ತುವಾರಿ ರಣಧೀಪ್ ಸುರ್ಜೆವಾಲ(Randeep surjewala) ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ(BJP Government) ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ಪ್ರಗತಿಪರರ ರಾಜಧಾನಿ. ಇಂತಹ ರಾಜ್ಯದಲ್ಲಿ ಈ ರೀತಿಯ ಘಟನೆ ಸ್ವಾತಂತ್ರ್ಯ ದಿನದಂದೆ ನಡೆದಿದೆ ಅಂದ್ರೆ ನಂಬಲಸಾಧ್ಯ. ಎಸ್ಡಿಪಿಐ ಮುಂದಿಟ್ಟುಕೊಂಡು ಕೋಮು ಗಲಭೆ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅನಾವಶ್ಯಕವಾಗಿ ಆಟ ಆಡುತ್ತಿದ್ದಾರೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ಕೊಡುವಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ ಎಂದು ಬೆಂಗಳೂರಿನಲ್ಲಿ ರಣದೀಪ್ ಸುರ್ಜೆವಾಲ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಇದೇ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾತನಾಡಿದ್ದು ಪ್ರಕರಣ ಸಂಬಂಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ನಾಯಕರು ಸಹ ಸಹಕಾರ ನೀಡುತ್ತಿದ್ದಾರೆ ಎಂದಿದ್ದಾರೆ. ಈಗಾಗಲೇ ಶಿವಮೊಗ್ಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಡೆಯಬಾರದ ಘಟನೆ ಅದು. ಯಾರೇ ತಪ್ಪು ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳುವ ಆದೇಶ ಮಾಡಿದ್ದೇನೆ. ಈಗಾಗಲೇ ಹೆಚ್ಚುವರಿ ಪೋಲಿಸರ ನಿಯೋಜನೆ ಮಾಡಿದ್ದೇನೆ. ಶಾಂತಿ ನೆಲೆಸಲು ಎಲ್ಲಾ ಕ್ರಮ ಕೈಗೊಂಡಿದ್ದೇನೆ ಎಂದರು.
ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮೊದಲು ಕೋಮು ಸಂಘರ್ಷದ ಘಟನೆಗಳು ನಮ್ಮ ಸರ್ಕಾರದಲ್ಲಿ ನಡೆಯುತ್ತಿರಲಿಲ್ಲ. ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲ. ಪದೇ ಪದೇ ಹೀಗಾಗಲು ಸರ್ಕಾರ
ಕೋಮುವಾದಿಗಳ ಕೈಯಲ್ಲಿ ಸರ್ಕಾರ ರಾಜ್ಯವನ್ನು ಕೊಟ್ಟಿದೆ. ಕಾನೂನು, ಪೊಲೀಸ್ ಇಲಾಖೆಯ ಭಯವಿಲ್ಲದೇ ಇರುವುದೇ ಕಾರಣ. ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಿವಲ್ಲಿ ಸರ್ಕಾರ ದೂರವಾಗಿದೆ ಎಂದು ಯುಟಿ ಖಾದರ್ ಹೇಳಿದ್ರು.
ಪ್ರೇಮ್ಸಿಂಗ್ಗೆ ಚೂರಿ ಇರಿದವರನ್ನು ಕೂಡಲೇ ಬಂಧಿಸಬೇಕು
ಸಾವರ್ಕರ್ ಫ್ಲೆಕ್ಸ್ ತೆಗೆದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ. ಸಾವರ್ಕರ್ ಅವಮಾನಿಸಿದವರು ದೇಶದ್ರೋಹಿಗಳು, ಉಗ್ರರು. ಪ್ರೇಮ್ಸಿಂಗ್ಗೆ ಚೂರಿ ಇರಿದವರನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಎಸ್ಡಿಪಿಐ ಹಿಂದೆ ಕಾಂಗ್ರೆಸ್ ಇದೆ. ಹಿಂದೆ ನಡೆದ ಅನೇಕ ಗಲಭೆಗಳನ್ನು ಸರ್ಕಾರ ನಿಯಂತ್ರಿಸಿದೆ. ಎಸ್ಡಿಪಿಐ ರಾಜಕೀಯ ಪಕ್ಷ. ಎಸ್ಡಿಪಿಐ ನಿಷೇಧಿಸಲು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.