ಶಿವಮೊಗ್ಗದಲ್ಲಿ ಭಾರಿ ಸ್ಫೋಟ! ಧಗ ಧಗನೇ ಉರಿದ ಬೆಂಕಿ | Acacia Tree Blast to high tension line in Shivamogga

ಶಿವಮೊಗ್ಗದಲ್ಲಿ ಭಾರಿ ಸ್ಫೋಟ! ಧಗ ಧಗನೇ ಉರಿದ ಬೆಂಕಿ

ಬೆಂಕಿ ಧಗ ಧಗನೆ ಉರಿದಿದೆ

ಶಿವಮೊಗ್ಗ: ಹುಣಸೋಡು ಸ್ಫೋಟ ಮರೆಯಾಗುವ ಮುಂಚೆಯೇ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಕೇಳಿಬಂದಿದೆ. ತಾಳಗುಪ್ಪದಲ್ಲಿನ ರಂಗಪ್ಪನ ಗುಡ್ಡದ ಸುತ್ತಮುತ್ತದ ಜನ ಸ್ಫೋಟಕ್ಕೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರು ಹಾಗೂ ಇನ್ನಿತರ ನಗರ ಪ್ರದೇಶಗಳಿಗೆ ವಿದ್ಯುತ್ ನೀಡಲು ಕೆಪಿಟಿಸಿಎಲ್ ಇಲಾಖೆಯ ಹೈಟೆನ್ಷನ್ ಲೈನ್ ಹಾದುಹೋಗಿದ್ದು, ಈ ಲೈನ್ ಹತ್ತಿರದಲ್ಲೇ ಬೃಹತ್ ಪ್ರಮಾಣದ ಅಕೇಶಿಯಾ ಮರಗಳು ಬೆಳೆದಿವೆ. ಹೈಟೆನ್ಷನ್ ವೈರ್​ಗೆ ಮರ ತಾಗಿ ಭಾರಿ ಸ್ಫೋಟವಾಗಿದೆ.

ಸ್ಫೋಟದ ಬೆನ್ನಲ್ಲೇ ಬೆಂಕಿ ಕಾಣಿಸಿಕೊಂಡು ಧಗ ಧಗನೇ ಉರಿದಿದೆ. ಈ ಬೃಹತ್ ಪಶ್ಚಿಮಘಟ್ಟದ ಜನರನ್ನ ಬೆಚ್ಚಿ ಬೀಳಿಸಿದ್ದು, ಪರಿಸರದ ಮೇಲೆ ತೀವ್ರತರವಾದ ಆಘಾತವುಂಟು ಮಾಡಿದೆ. ಇದು ಕೆಪಿಟಿಸಿಎಲ್​ನ ದಿವ್ಯ ನಿರ್ಲಕ್ಷತನವೆಂದು ಜನ ದೂಷಿಸಿದ್ದಾರೆ.

TV9 Kannada

Leave a comment

Your email address will not be published. Required fields are marked *