ಶಿವಮೊಗ್ಗದಲ್ಲಿ ಮತ್ತೊಂದು ಚೂರಿ ಇರಿತ: ಗಾಯಾಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು – Four miscreants Knife Attack In Shivamogga


ಶಿವಮೊಗ್ಗದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲಿಸ್ ವರಿಷ್ಠಾಧಿಕಾರಿ ಹೇಳಿದ್ದಿಷ್ಟು

ಶಿವಮೊಗ್ಗದಲ್ಲಿ ಮತ್ತೊಂದು ಚೂರಿ ಇರಿತ:  ಗಾಯಾಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಪ್ರಾತಿನಿಧಿಕ ಚಿತ್ರ

ಶಿವಮೊಗ್ಗ: ಗಲಭೆಗ್ರಸ್ಥ ಶಿವಮೊಗ್ಗದಲ್ಲಿ (Shivamogga) ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ನಗರದ ರಾಯಲ್ ಆರ್ಕೆಡ್‌ ಹೋಟೆಲ್ ಹಿಂಭಾಗದಲ್ಲಿ ಇಂದು(ಅ.30) ರಾತ್ರಿ ಅಶೋಕ್ ಪ್ರಭು ಎಂಬುವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಮೊದಲಿಗೆ ದುಷ್ಕರ್ಮಿಗಳು  ಬೈಕ್‌ನಿಂದ ಅಶೋಕ್​ಗೆ ಗುದ್ದಿ ಬಳಿಕ ಆತನ ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಆದ್ರೆ, ಅಶೋಕ್ ಮೊಬೈಲ್ ನೀಡಲು ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಾಯಾಳು ಅಶೋಕ್​ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಲಭೆಗ್ರಸ್ಥ ಶಿವಮೊಗ್ಗದಲ್ಲಿ ನೆಮ್ಮದಿ ಇಲ್ಲದ ಬದುಕು, ಮನೆ ಬಿಟ್ಟು ರಸ್ತೆಯಲ್ಲಿ ದೀಪಾವಳಿ ಆಚರಿಸಿ ಸಂಭ್ರಮಿಸಿದ ಪೊಲೀಸರು

ಇನ್ನು ಈ ಘಟನೆ ಬಗ್ಗೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಟಿವಿ9 ಗೆ ಪ್ರತಿಕ್ರಿಯಿಸಿದ್ದು, ನಡೆದುಕೊಂಡು ಹೋಗುತ್ತಿದ್ದ ಅಶೋಕ ಪ್ರಭು ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳು ಅಶೋಕ ಬಳಿಯಿದ್ದ ಮೊಬೈಲ್ ಕಸಿದುಕೊಳ್ಳಲು ಹೋಗಿದ್ದಾರೆ. ಇದಕ್ಕೆ ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಹರಿತವಾದ ವಸ್ತುವಿನಿಂದ ಅಶೋಕನ ಮುಖ ಮತ್ತು ಕತ್ತಿನ ಭಾಗ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಗಾಯಾಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.