ಶಿವಮೊಗ್ಗದಲ್ಲಿ ಶಂಕಿತ ಇಬ್ಬರು ಉಗ್ರರ ಬಂಧನ ಪ್ರಕರಣ: ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ | Arrest of two suspected terrorists in Shimoga: Hill Nadu will not be a crossroad for terrorists: Home Minister Araga Jnanendra


ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಶಂಕಿತ ಇಬ್ಬರು ಉಗ್ರರ ಬಂಧನ ಪ್ರಕರಣ: ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ


ಶಿವಮೊಗ್ಗ: ಶಂಕಿತ ಇಬ್ಬರು ಉಗ್ರರರು ಮೂಲತಃಹ ತೀರ್ಥಹಳ್ಳಿಯವರಾಗಿದ್ದು, ಮಂಗಳೂರಿನಲ್ಲಿ ವಾಸವಾಗಿದ್ದರು. ಮತಾಂಧಶಕ್ತಿಗಳ ಸಂಪರ್ಕ ಪಡೆದು ಈ ರೀತಿ ಮಾಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು. ಈ ಬಗ್ಗೆ NIA ಅಧಿಕಾರಿಗಳು ಸಹ ತನಿಖೆ ಮಾಡುತ್ತಿದ್ದಾರೆ. ರಾಷ್ಟ್ರದ ಏಕತೆಗೆ ಭಂಗ ತರುವವರ ವಿರುದ್ಧ ಕ್ರಮ ಆಗಲಿದೆ. ಮಲೆನಾಡು ಉಗ್ರರ ಅಡ್ಡವಾಗಲು ಬಿಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ರಿವಾರ್ಡ್ ಘೋಷಣೆ ಮಾಡ್ತೇನೆ. ಕಾಂಗ್ರೆಸ್​ ಪಕ್ಷದ ಅವಧಿಯಲ್ಲಿ ಈ ರೀತಿ ಕ್ರಮ ಆಗಿರಲಿಲ್ಲ. ಅಲ್ಪಸಂಖ್ಯಾತರು ಕಾಂಗ್ರೆಸ್​ನ ವೋಟ್ ಬ್ಯಾಂಕ್​ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.

ತುಂಬಾ ಡೀಪ್ ಆಗಿ,‌ ತನಿಖೆ ಮಾಡಿದ್ದರಿಂದ ಪ್ರಕರಣ ಹೊರಬಂದಿದೆ. ತನಿಖೆ ಮುಂದುವರಿದಿದ್ದು, ಎನ್​ಎನ್ಐಎ ಟೀಂ ಕೂಡ ತನಿಖೆ ಮಾಡುತ್ತಿದೆ. ಕರಾವಳಿ, ಕೇರಳ ಸಂಪರ್ಕ ಹೊಂದಿ, ಮತೀಯವಾದಕ್ಕೆ ಒಳಗಾಗುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಹೇಳಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.