ಶಿವಮೊಗ್ಗದಿಂದ ತಿರುಪತಿ ಮಾರ್ಗವಾಗಿ ಚೆನ್ನೈಗೆ ಹೊಸ ರೈಲು; ನೂತನ ರೈಲು ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ | New train from Shimoga to Chennai via Tirupati; MP BY Raghavendra drives new train service


ಶಿವಮೊಗ್ಗದಿಂದ ತಿರುಪತಿ ಮಾರ್ಗವಾಗಿ ಚೆನ್ನೈಗೆ ಹೊಸ ರೈಲು; ನೂತನ ರೈಲು ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ

ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗ: ಶಿವಮೊಗ್ಗದಿಂದ ತಿರುಪತಿಗೆ ಮಾರ್ಗವಾಗಿ ಚನ್ನೈ ಸಂಪರ್ಕಿಸುವ ನೂತನ ರೈಲು (New Train) ಸೇವೆಗೆ ಸಂಸದ ಬಿ ವೈ ರಾಘವೇಂದ್ರ ಚಾಲನೆ ನೀಡಿದ್ದಾರೆ.  ಇಂದಿನಿಂದ ಶಿವಮೊಗ್ಗದಿಂದ ಎರಡು ದಿನ ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗ ವಾಗಿ ಚೆನ್ನೈಗೆ ರೈಲು ತೆರಳುತ್ತದೆ. ಈ ಕುರಿತಾಗಿ ಸಂಸದ ಬಿ.ವೈ ರಾಘವೇಂದ್ರ ಹೇಳಿಕೆ ನೀಡಿದ್ದು, ಮಲೆನಾಡಿನ ಜನರಿಗೆ ತಿರುಪತಿ ದರ್ಶನಕ್ಕೆ ಈ ವಿಶೇಷ ರೈಲಿನಿಂದ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ತಮಿಳು ಸಮಾಜದ ಜನರು ಹೆಚ್ಚಿದ್ದು, ಚೆನ್ನೈಗೆ ತೆರಳಲು ಜನರಿಗೆ ಅನುಕೂಲವಾಗಲಿದೆ. ನಾಲ್ಕು ರೇಲ್ವೆ ಪ್ರೈಓವರ್ ಕಾಮಗಾರಿ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಎರಡು ರೇಲ್ವೆ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದೆ. ಕೋಟೆಗಂಗೂರುನಲ್ಲಿ ರೇಲ್ವೇ ಕೋಚಿಂಗ್ ಡಿಪೋ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಪಿಎಂ ಮೋದಿಗೆ ಸಂಸದ ಬಿ.ವೈ ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ. ಸಚಿವ ಕೆ.ಸಿ ನಾರಾಯಣ ಗೌಡ, ಎಂಎಲ್​ಸಿಗಳಾದ ರುದ್ರೇಗೌಡ, ಆಯನೂರು ಮಂಜುನಾಥ್, ಡಿಸಿ ಸೇಲ್ವಮಣಿ, ಸಿಇಓ ವೈಶಾಲಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಂಜಾನ್ ಮಾಸ‌ ಹಿನ್ನೆಲೆ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ರಂಜಾನ್ ಮಾಸ‌ ಹಿನ್ನೆಲೆ ಸಿದ್ದರಾಮಯ್ಯರಿಂದ ಇಫ್ತಿಯಾರ್ ಕೂಟವನ್ನು ನಗರದ ಬೆಂಗಳೂರು ರಸ್ತೆಯ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಆಯೋಜನೆ ಮಾಡಲಾಗಿದ್ದು, ಬಿಳಿ ಬಣ್ಣದ ಮುಸ್ಲಿಂ ಟೋಪಿ ಹಾಕಿಕೊಂಡು ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದಾರೆ. ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಸಹಾ ಟೋಪಿ ಹಾಕಿಕೊಂಡು ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಇಫ್ತಿಯಾರ್ ಕೂಟ ಆರಂಭವಾಗಿದ್ದು, ರಾತ್ರಿ 9 ಗಂಟೆವರೆಗೂ ಇಫ್ತಿಯಾರ್ ಕೂಟ ನಡೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಇಫ್ತಿಯಾರ್ ಕೂಟ ಆಯೋಜನೆ ಮಾಡಿದ್ದು, ಶಾಸಕರಾದ ತನ್ವೀರ್ ಸೇಠ್, ಡಾ.ಹೆಚ್. ಪಿ ಮಂಜುನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಸೇರಿ ಹಲವು ಮುಸ್ಲಿಂ ಮುಖಂಡರು ಭಾಗಿಯಾಗಿದ್ದಾರೆ.

TV9 Kannada


Leave a Reply

Your email address will not be published. Required fields are marked *