ಶಿವಮೊಗ್ಗದ ಹೊಸಕೊಪ್ಪ ಗ್ರಾಮಸ್ಥರು ತಮ್ಮಲ್ಲೇ ದೇಣಿಗೆ ಸಂಗ್ರಹಿಸಿ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ನಿರ್ಮಿಸಿ ಅನಾವರಣಗೊಳಿಸಿದ್ದಾರೆ | Residents of Hosakoppa in Shivamogga procure and unveil Puneeth Rajkumar’s bust after crowdfunding


ಕನ್ನಡನಾಡಿನ ಹೆಮ್ಮೆಯ ಪುತ್ರ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ತಿಂಗಳು ಕಳೆಯಿತು. ಅದರೆ ಜನರಿಗೆ, ಅವರ ಅಭಿಮಾನಿಗಳಿಗೆ ಪವರ್ ಸ್ಟಾರ್ ನನ್ನು ಮರೆಯುವುದು ಸಾಧ್ಯವಾಗುತ್ತಿಲ್ಲ. ಇಲ್ಲಿರುವ ವಿಡಿಯೋವನ್ನು ನೋಡಿ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ಹೊಸಕೊಪ್ಪ ಒಂದು ಚಿಕ್ಕ ಊರು. ಆದರೆ, ಆ ಜನರಿಗೆ ಅಪ್ಪು ಮೇಲಿರುವ ಪ್ರೀತಿ ಮತ್ತು ಅಭಿಮಾನ ಸಹ್ಯಾದ್ರಿ ಪರ್ವತಗಳಷ್ಟು. ಗ್ರಾಮಸ್ಥರು ಸೇರಿ, ದೇಣಿಗೆ ರೂಪದಲ್ಲಿ ರೂ 80,000 ಜಮಾ ಮಾಡಿ ತಮ್ಮ ಪ್ರೀತಿಯ ಅಪ್ಪುಗಾಗಿ ಒಂದು ಪುತ್ಥಳಿಯನ್ನು ನಿರ್ಮಿಸಿ ಊರಲ್ಲಿ ಪ್ರತಿಷ್ಠಾಪಿಸಿದ್ದಾರೆ. ಮಂಗಳವಾರದಂದು ಗ್ರಾಮದ ಪ್ರಮುಖರಿಂದ ಕನ್ನಡಾಂಬೆಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

ಇದೇ ಸಂದರ್ಭದಲ್ಲಿ ಕನ್ನಡಾಂಬೆಯ ಧ್ವಜವನ್ನು ಸಹ ಹಾರಿಸಲಾಯಿತು. ಅದಕ್ಕೂ ಮೊದಲು ಎತ್ತಿನ ಬಂಡಿ, ವ್ಯಾನ್ಗಳು ಮತ್ತು ಟ್ರ್ಯಾಕ್ಟರ್ ಗಳಲ್ಲಿ ಗ್ರಾಮದ ಸುತ್ತ ಪುನೀತ್ ಮತ್ತು ತಾಯಿ ಭುವನೇಶ್ವರಿ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಯಿತು. ಊರಿನ ಎಲ್ಲ ಸಮುದಾಯದವರು ಸದರಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಚಿಕ್ಕ ಪುಟ್ಟ ಮಕ್ಕಳು, ಅವರಲ್ಲಿ ಹೆಚ್ಚಿನವರು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು; ಮೆರವಣಿಗೆಯಲ್ಲಿ ಪಾಲ್ಗೊಂಡು ಪುನೀತ್ಗೆ ಜೈಕಾರ ಹಾಕುತ್ತಿದ್ದರು. ಕೆಲ ವಯಸ್ಸಾದ ಹಿರಿಯರನ್ನು ಸಹ ನೀವು ನೋಡಬಹುದು. ಇದನ್ನು ಹೇಳುವ ತಾತ್ಪರ್ಯವೇನೆಂದರೆ, ಎಲ್ಲ ವಯಸ್ಸಿನ ಜನರಿಗೆ ಅಪ್ಪು ಪ್ರೀತಿಪಾತ್ರರಾಗಿದ್ದರು.

ಬಹಳಷ್ಟು ಜನ ಅಪ್ಪು ಅವರು ಡಾ ರಾಜಕುಮಾರ್ ಅವರಿಗಿಂತ ಜಾಸ್ತಿ ಜನಪ್ರಿಯರಾಗಿದ್ದರು ಅಂತ ಹೇಳುತ್ತಿದ್ದಾರೆ. ಅವರ ಹೇಳುವುದರಲ್ಲಿ ಉತ್ಪ್ರೇಕ್ಷೆಯ ಅಂಶ ಇಲ್ಲ ಅನಿಸುತ್ತದೆ. ಎಂಥ ಕಲಾವಿದ ಎಂಥ ವ್ಯಕ್ತಿ!!

ಇದನ್ನೂ ಓದಿ:    ಲ್ಯಾಂಡ್ ಆಗುವ ಮುನ್ನ ವಿಮಾನದ ವಿಂಡ್​ಸ್ಕ್ರೀನ್​ಗೆ ಡಿಕ್ಕಿ ಹೊಡೆದ ಪಕ್ಷಿಗಳ ಹಿಂಡು; ಬೆಂಕಿ ಕಿಡಿ ಹೊತ್ತಿದ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *