1/7
ನಾಡಿನ ಹಲವೆಡೆ ನಟ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ಸ್ಥಾಪಿಸಿ, ಆ ಮೂಲಕ ಅಭಿಮಾನಿಗಳು ಅವರಿಗೆ ನಮನ ಸಲ್ಲಿಸುತ್ತಿದ್ದಾರೆ.
2/7
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ಗ್ರಾಮಸ್ಥರೇ ಹಣಸಂಗ್ರಹಿಸಿ ನಟ ಪುನೀತ್ ಅವರ ಪುತ್ಥಳಿಯ ಪ್ರತಿಷ್ಠಾಪನೆ ಮಾಡಿದ್ದಾರೆ.
3/7
ಅಪ್ಪು ನೆನಪಿಗೆ ಗ್ರಾಮಸ್ಥರು 3.5 ಅಡಿ ಎತ್ತರ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ.
4/7
ಪುತ್ಥಳಿ ನಿರ್ಮಾಣಕ್ಕಾಗಿ ಗ್ರಾಮಸ್ಥರು 80,000 ರೂಗಳನ್ನು ದೇಣಿಗೆ ಸಂಗ್ರಹಿಸಿದ್ದರು. ಇದೀಗ ಗ್ರಾಮದ ಹಿರಿಯರಿಂದ ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ.
5/7
ಪುತ್ಥಳಿ ಪ್ರತಿಷ್ಠಾಪನೆಗೂ ಮೊದಲು ಎತ್ತಿನ ಗಾಡಿಯಲ್ಲಿ ಪುನೀತ್ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗಿತ್ತು.
6/7
ಪುನೀತ್ ಪುತ್ಥಳಿಯ ಸ್ಥಾಪನೆ ಬಳಿಕ ಕನ್ನಡ ಧ್ವಜಾರೋಹಣ ಮಾಡಲಾಗಿದೆ.
7/7
ಪುತ್ಥಳಿಯ ಕೆಳಗೆ ಬರೆದಿರುವ ಬರಹವಿದು. ಈ ಮೂಲಕ ಗ್ರಾಮಸ್ಥರು ನೆಚ್ಚಿನ ಅಪ್ಪುಗೆ ನಮನ ಸಲ್ಲಿಸಿದ್ದಾರೆ.